For Quick Alerts
  ALLOW NOTIFICATIONS  
  For Daily Alerts

  ಕಡಿಮೆ ಸಂಭಾನೆಯಿಂದಾಗಿ ಜೂ.ಎನ್‌ಟಿಆರ್ ಸಿನಿಮಾ ತಿರಸ್ಕರಿಸಿದ ಸಮಂತಾ?

  |

  ಸೌತ್ ಸಿನಿಮಾರಂಗದಲ್ಲಿ ಬೇಡಿಕೆಯ ನಟಿಯರಲ್ಲಿ ನಟಿ ಸಮಂತಾ ಕೂಡ ಒಬ್ಬರು. ಮದುವೆ, ಡಿವೋರ್ಸ್ ಸುದ್ದಿಗಳ ಬಳಿಕ ನಟಿ ಸಮಂತಾ ಸಿನಿಮಾಗಳ ಮೂಲಕ ಹೆಚ್ಚು ಸುದ್ದಿಯಲ್ಲಿ ಇದ್ದಾರೆ. ನಟಿ ಸಮಂತಾ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಡಿವೋರ್ಸ್ ಬಳಿಕವೂ ಸಮಂತಾ ಕ್ರೇಜ್ ಹೆಚ್ಚಾಗಿಯೇ ಇದೆ. ಹಾಗಾಗಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ನಿರ್ದೇಶಕ ಕೊರಟಾಲ ಶಿವ ಸಮಂತಾ ಅವರನ್ನು ತಮ್ಮ ಮುಂದಿನ ಸಿನಿಮಾಗಾಗಿ ಸಂಪರ್ಕ ಮಾಡಿದ್ದಾರೆ ಎನ್ನಲಾಗಿತ್ತು. ನಟ ಜೂನಿಯರ್ ಎನ್‌ಟಿಆರ್ ಮುಂದಿನ ಸಿನಿಮಾ, #NTR30 ಚಿತ್ರದ ನಾಯಕಿ ಪಾತ್ರಕ್ಕೆ ಸಮಂತಾ ಆಯ್ಕೆ ಮಾಡಿದ್ದಾರೆ ಎನ್ನುವ ಬಗ್ಗೆ ಹಲವು ಸುದ್ದಿ ಹರಿದಾಡಿವೆ.

  ಮುಂಬೈನಲ್ಲಿ ಐಶಾರಾಮಿ ಮನೆ ಖರೀದಿಸಲಿರುವ ಸಮಂತಾ: ಬೆಲೆ ಎಷ್ಟು?ಮುಂಬೈನಲ್ಲಿ ಐಶಾರಾಮಿ ಮನೆ ಖರೀದಿಸಲಿರುವ ಸಮಂತಾ: ಬೆಲೆ ಎಷ್ಟು?

  ಆದರೆ ಸಮಂತಾ ಈ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಅಧಿಕೃತ ಮಾಹಿತಿ ಹೊರಬರುವ ಮುನ್ನವೇ, ಸಮಂತಾ ಈ ಸಿನಿಮಾವನ್ನು ತಿರಸ್ಕರಿಸಿರುವ ಸುದ್ದಿ ಸದ್ದು ಮಾಡುತ್ತಿದೆ. ಜೂನಿಯರ್ ಎನ್‌ಟಿಆರ್ ಜೊತೆಗೆ ನಟಿಸುವ ಅವಕಾಶವನ್ನು ಸಮಂತಾ ಯಾಕೆ ಮಿಸ್ ಮಾಡಿಕೊಳ್ಳುತ್ತಾರೆ ಎಂದು ಅಚ್ಚರಿ ಆಗ ಬಹುದು. ಇದಕ್ಕೆ ಕಾರಣ ಸಂಭಾವನೆ. ಸಮಂತಾ ಕೇಳಿದಷ್ಟು ಸಂಭಾವನೆ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಈ ಚಿತ್ರವನ್ನು ತಿರಸ್ಕರಿಸಿದ್ದಾರಂತೆ.

  ಜೂ.ಎನ್‌ಟಿಆರ್ ಸಿನಿಮಾದಲ್ಲಿ ನಟಿಸೋಕೆ ಸಮಂತಾಗೆ ₹ 2.5 ಕೋಟಿ ರೂ. ಆಫರ್ ನೀಡಲಾಗಿದೆಯಂತೆ. ಆದರೆ ಸಮಂತಾ 4 ಕೋಟಿ ರೂ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ. ಸಾಮಾನ್ಯವಾಗಿ ಕೊರಟಾಲ ಶಿವ ಚಿತ್ರಗಳಲ್ಲಿ ನಾಯಕಿಯರ ಪಾತ್ರಕ್ಕೆ ಅಷ್ಟೊಂದು ಉತ್ತಮ ಸ್ಕೋಪ್ ಇರುವುದಿಲ್ಲ. ಆದರೂ ಕೂಡ ಸಮಂತಾ ದೊಡ್ಡ ಮಟ್ಟದ ಬೇಡಿಕೆ ಇಟ್ಟಿರುವುದರಿಂದ, ಸಿನಿಮಾ ತಂಡಕ್ಕೆ ಶಾಕ್ ಆಗಿದೆಯಂತೆ. ಕೇಳಿದಷ್ಟು ಸಂಭಾವನೆ ಕೊಡೆದೇ ಇರುವ ಕಾರಣಕ್ಕೆ ಸಮಂತಾ ಈ ಚಿತ್ರವನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.

  Samantha Rejected Jr NTR 30th Film Because Of Low Pay

  ಇನ್ನು ಸದ್ಯ ನಟಿ ಪೂಜಾ ಹೆಗ್ಡೆ ಮತ್ತು ರಶ್ಮಿಕಾ ಮಂದಣ್ಣ ಕೂಡ 4 ಕೋಟಿ ರೂ. ಸಂಭಾವನೆ ಪಡೆಯುತ್ತಿರುವುದರಿಂದ ಸಮಂತಾ ಕೂಡ ಅಷ್ಟೇ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಸುಮಾರು ₹ 5 ಕೋಟಿ ಸಂಭಾವನೆ ಪಡೆದು ಮುಂಚೂಣಿಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ.

  English summary
  Samantha Rejected Jr NTR 30th Film Because Of Low Pay, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X