Pushpa 2 item Song: 'ಪುಷ್ಪ 2' ಐಟಂ ಹಾಡಿಗೆ ಸಮಂತಾ ಜಾಗಕ್ಕೆ ಬಾಲಿವುಡ್‌ ನಟಿ!

'ಜೇಮ್ಸ್' ಚಿತ್ರಕ್ಕೂ ಮುನ್ನ ಬಾಕ್ಸಾಫಿಸ್‌ನಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡಿದ ಸಿನಿಮಾ ಅಂದರೆ ಅದು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ'. ಅದರಲ್ಲೂ ಪುಷ್ಪ ಸಿನಿಮಾದಲ್ಲಿ ಹೆಚ್ಚು ಸದ್ದು ಮಾಡಿದ್ದು ನಟಿ ಸಮಂತಾ. ಇಡೀ 'ಪುಷ್ಪ' ಸಿನಿಮಾ ಒಂದು ಕಡೆಯಾದರೆ. ಚಿತ್ದರ ಊ ಅಂಟಾವಾ ಮಾವ ಹಾವ ಹಾಡು ಒಂದು ಕಡೆ ಆಗಿತ್ತು.

'ಪುಷ್ಪ' ಚಿತ್ರಕ್ಕೆ 'ಊ ಅಂಟಾವ' ಹಾಡು ಬಹು ದೊಡ್ಡ ಪ್ಲಸ್ ಪಾಯಿಂಟ್ ಆಯ್ತು. ಅದರಲ್ಲೂ ಈ ಹಾಡಿನಲ್ಲಿ ಸಮಂತಾ ಹೆಜ್ಜೆ ಹಾಕಿದ್ದು, ಮತ್ತಷ್ಟು ಮೆರಗು ತಂದಿತು. ಎಷ್ಟೊ ಮಂದಿ ಈ ಹಾಡನ್ನು ನೋಡಲೆಂದೇ 'ಪುಷ್ಪ' ಸಿನಿಮಾ ನೋಡಿದ ಉದಾಹರಣೆಗಳಿವೆ. ಕೊರೊನಾ ಆತಂಕದ ಬಳಿಕ ತೆರೆಗೆ ಪುಷ್ಪ ಚಿತ್ರ ದಾಖಲೆ ಬರೆಯಲು ಈ ಹಾಡು ಕೂಡ ಒಂದು ಕಾರಣ ಅಂದರೆ ತಪ್ಪಾಗಲಾರದು.

ಈಗ ಮತ್ತೆ ಈ ಹಾಡಿನ ಬಗ್ಗೆ ಮಾತನಾಡಲು ಕಾರಣ 'ಪುಷ್ಪ 2'. ಪುಷ್ಪ ಭಾಗ ಒಂದರಲ್ಲಿ ಇದ್ದ ಹಾಗೆ ಎರಡನೇ ಭಾಗದಲ್ಲೂ ಒಂದು ಐಟಂ ಸಾಂಗ್ ಇರಲಿದೆಯಂತೆ. ಈ ಬಗ್ಗೆ ಈಗ ಬಾಲಿವುಡ್‌ ಮತ್ತು ಟಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಾ ಇದೆ. ಈಗಾಗಲೇ ಕಲಾವಿದರ ಬಗ್ಗೆ ಚರ್ಚೆ ಶುರುವಾಗಿದೆ.

'ಊ ಅಂಟಾವ ಮಾವ' ಹಾಡಿನಲ್ಲಿ ಸಮಂತಾ ರಂಗು!

'ಊ ಅಂಟಾವ ಮಾವ' ಹಾಡಿನಲ್ಲಿ ಸಮಂತಾ ರಂಗು!

ನಟಿ ಸಮಂತಾ ಪುಷ್ಪ ಚಿತ್ರದ ಸ್ಪೆಷಲ್ ಹಾಡಿನಲ್ಲಿ 'ಊ ಅಂಟಾವಾ ಮಾವ' ಅಂತ ಹೆಜ್ಜೆ ಹಾಕಿ ಅಪಾರ ಕೀರ್ತಿ ಗಳಿಸಿದರು. ವಿಚ್ಛೇದನದ ಬಳಿಕ ಸಿನಿಮಾ ಬಿಟ್ಟರು ಸಮಂತಾ, ಎನ್ನುವ ಗಾಸಿಪ್‌ಗೆ ಇದೇ ಹಾಡಿನ ಮೂಲಕ ಸಮಂತಾ ಉತ್ತರ ಕೊಟ್ಟರು. ಬೆಂಕಿ ಕಿಡಿಯಂತೆ ಸಮಂತಾ ಈ ಹಾಡಿನ ಮೂಲಕ ಕಿಚ್ಚು ಹಚ್ಚಿದರು. ಈ ಹಾಡು ಮಾಡಿದ ದಾಖಲೆಗಳು ಸಮಂತಾ ಸಿನಿಮಾ ಜರ್ನಿಗೆ ಪ್ಲಸ್ ಆಯ್ತು. ಜೊತೆಗೆ ಈ ಒಂದು ಐಟಂ ಹಾಡಿಗಾಗಿ ಹೆಚ್ಚಿನ ಸಂಭಾವನೆ ಪಡೆದುಕೊಂಡು ಸ್ಯಾಮ್ ಸುದ್ದಿ ಆಗಿದ್ದರು.

'ಪುಷ್ಪ 2' ನಲ್ಲಿ ಸಮಂತಾ ಇರುವುದಿಲ್ಲ!

'ಪುಷ್ಪ 2' ನಲ್ಲಿ ಸಮಂತಾ ಇರುವುದಿಲ್ಲ!

ಪುಷ್ಪ ಚಿತ್ರದ ಮೊದಲ ಭಾಗದ ಐಟಂ ಹಾಡಿನಲ್ಲಿ ಸಮಂತಾ ಡಾನ್ಸ್ ಮಾಡಿ ಗೆದ್ದ ಕಾರಣ, ಈಗ ಪುಷ್ಪ ಭಾಗ ಎರಡರಲ್ಲೂ ಕೂಡ ಸಮಂತಾ ಇರುತ್ತಾರೆ. ಈ ಚಿತ್ರದ ಹಾಡಿಗೂ ಕೂಡ ಸಮಂತಾ ಅಲ್ಲು ಅರ್ಜುನ್ ಜೊತೆಗೆ ಹೆಜ್ಜೆ ಹಾಕುತ್ತಾರೆ ಎನ್ನಲಾಗಿತ್ತು. ಈ ಬಗ್ಗೆ ಈಗ ಹೊಸದೊಂದು ಸುದ್ದಿ ಬಂದಿದೆ. ಸಮಂತಾ 'ಪುಷ್ಪ 2'ನಲ್ಲಿ ಇರುವುದಿಲ್ಲವಂತೆ. ಸಮಂತಾ ಬದಲಿಗೆ ಬಾಲಿವುಡ್ ಬೆಡಗಿ ದಿಶಾ ಪಟಾನಿ ಇರುತ್ತಾರಂತೆ.

ಸಮಂತಾ ಜಾಗಕ್ಕೆ ಬಂದಳು ದಿಶಾ ಪಟಾನಿ!

ಸಮಂತಾ ಜಾಗಕ್ಕೆ ಬಂದಳು ದಿಶಾ ಪಟಾನಿ!

ಹೌದು ಸಮಂತಾ ಜಾಗಕ್ಕೆ ಈಗ ಬಾಲಿವುಡ್ ನಟಿ ದಿಶಾ ಪಟಾನಿ ಬರ್ತಿದ್ದಾರೆ. ಪುಷ್ಪ 2 ಚಿತ್ರದ ಐಟಂ ಹಾಡಿನಲ್ಲಿ ಸಮಂತಾ ಬದಲಿಗೆ ದಿಶಾ ಪಟಾನಿ ಕಾಣಿಕೊಳ್ಳಲಿದ್ದಾರಂತೆ. ಈ ಸುದ್ದಿ ಈಗ ಜೋರಾಗಿ ಹಬ್ಬಿದೆ. ಅಷ್ಟಕ್ಕೂ ದಿಶಾ ಪಟಾನಿಗೆ ಪುಷ್ಪ ಮೊದಲ ಭಾಗದಲ್ಲಿ ನಟಿಸುವ ಅವಕಾಶ ಕೊಡಲಾಗಿತ್ತು. 'ಊ ಅಂಟಾವ' ಹಾಡಿನಲ್ಲಿ ದಿಶಾ ಪಟಾನಿ ಡ್ಯಾನ್ಸ್ ಮಾಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಹಾಗಾಗಿ ಎರಡನೇ ಭಾಗದ ಐಟಂ ಹಾಡಿನಲ್ಲಿ ಡ್ಯಾನ್ ಮಾಡಲು ಬರುತ್ತಿದ್ದಾರೆ ಎನ್ನಲಾಗಿದೆ.

ಗೆಲ್ಲುತ್ತಾಳಾ ದಿಶಾ ಪಟಾನಿ?

ಗೆಲ್ಲುತ್ತಾಳಾ ದಿಶಾ ಪಟಾನಿ?

ದಿಶಾ ಪಟಾನಿ 'ಪುಷ್ಪ 2' ಚಿತ್ರದ ಹಾಡಿನಲ್ಲಿ ಇರುತ್ತಾರೆ ಎನ್ನುವುದು ಮುಖ್ಯವಲ್ಲ. ಈ ಹಾಡಿನ ಮೂಲಕ ಜನ ಮನ ಗೆಲ್ಲುತ್ತಾರ? ಎನ್ನುವುದು ಮುಖ್ಯ ಆಗಿದೆ. ಹೌದು, ಯಾಕೆಂದರೆ ಈ ಹಿಂದೆ ಬಂದ 'ಊ ಅಂಟಾವಾ' ಹಾಡು ಸೂಪರ್ ಹಿಟ್ ಆಗಿದೆ. ಹಾಗಾಗಿ ಮುಂಬರುವ ಹಾಡಿನ ಮೇಲೆ ಹೆಚ್ಚಿನ ನಿರೀಕ್ಷೆ ಇರುತ್ತದೆ. ಅದನ್ನು ಪೂರ್ಣ ಮಾಡುವ ಜವಾಬ್ದಾರಿ ಅವರ ಮೇಲೆ ಇದೆ.

More from Filmibeat

English summary
Disha Patani To Replace Samantha In Pushpa 2 Item Song, Here Is The More Update On Pushpa 2 item Song,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X