ನಿರ್ದೇಶಕನ ಜೊತೆ ಸಮಂತಾ ಅಫೇರ್? ಲೀಕ್ ಆದ ಆಡಿಯೋದಲ್ಲಿ ಇದ್ಯಾ ಪ್ರೇಮ ಸಂದೇಶ?
ಸಮಂತಾಗೆ ನಾಗ ಚೈತನ್ಯ ವಿಚ್ಛೇದನ ನೀಡಿ ಎರಡನೇ ಮದುವೆ ಆಗಿದ್ದೂ ಆಗಿದೆ. ಆದರೂ ಇನ್ನೂ ಸಮಂತಾ ವಿಚ್ಚೇದನ, ಡೇಟಿಂಗ್ ಬಗ್ಗೆ ಚರ್ಚೆಗಳು ಕಮ್ಮಿಯಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಆಗಾಗ ದಿಢೀರನೇ ಹಾಟ್ ಟಾಪಿಕ್ ಆಗಿ ಬಿಡುತ್ತಾರೆ. ಈಗ ಸಮಂತಾ ನಿರ್ದೇಶಕರೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದು, ಆಡಿಯೋ ಸಂದೇಶ ಲೀಕ್ ಅಂತ ಚರ್ಚೆಯಾಗುತ್ತಿದೆ.
ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ವೈವಾಹಿಕ ಜೀವನ ಮುರಿದು ಬಿದ್ದಿದೆ. ಒಂಟಿಯಾಗಿ ತಮ್ಮ ಬದುಕನ್ನು ನಡೆಸುತ್ತಿದ್ದಾರೆ. ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾದಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿದ್ದರೂ, ಬಾಲಿವುಡ್ ಹಾಗೂ ವೆಬ್ ಸೀರಿಸ್ ಕಡೆಗೆ ಹೆಚ್ಚು ಗಮನವನ್ನು ಹರಿಸಿದ್ದಾರೆ. ಇತ್ತೀಚೆಗಷ್ಟೇ 'ಸಿಟಾಡೆಲ್' ವೆಬ್ ಸೀರಿಯಸ್ ರಿಲೀಸ್ ಆಗಿ ಯಶಸ್ವಿಯಾಗಿದೆ.

ಇದೇ ಬೆನ್ನಲ್ಲೇ ಸಮಂತಾ ಡೇಟಿಂಗ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಸಮಂತಾ ಡೇಟಿಂಗ್ ವಿಷಯ ಬಹಿರಂಗ ಆಗಿದೆ. ನಿರ್ದೇಶಕ ಕಳುಹಿಸಿದ ಆಡಿಯೋ ಸಂದೇಶ ಲೀಕ್ ಆಗಿದೆ ಅಂತ ವರದಿಗಳಾಗಿವೆ. ಅಸಲಿಗೆ ಸಮಂತಾ ಡೇಟಿಂಗ್ ಮಾಡುತ್ತಿರುವುದು ನಿಜವೇ? ಆ ನಿರ್ದೇಶಕ ಯಾರು? ಆಡಿಯೋದಲ್ಲಿ ಏನಿದೆ? ಇವೆಲ್ಲದರ ಬಗ್ಗೆ ನೋಡುವುದಾದರೇ..
ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನಕ್ಕೆ ಮುಂದಾಗಿದ್ದಾಗ ಅವರ ಅಭಿಮಾನಿಗಳು ಆರೋಪ-ಪ್ರತ್ಯಾರೋಪ ಮಾಡಿದ್ದರು. ಸಮಂತಾ ಫ್ಯಾನ್ಸ್ ನಾಗಚೈತನ್ಯ ವಿರುದ್ಧ ತಿರುಗಿಬಿದ್ದಿದ್ದರೆ, ಅತ್ತ ನಾಗ ಚೈತನ್ಯ ಅಭಿಮಾನಿಗಳು ಸಮಂತಾ ವಿರುದ್ಧ ಕಿಡಿಕಾರಿದ್ದರು. ನಾಗಚೈತನ್ಯ ಅಫೇರ್ ಬಗ್ಗೆನೇ ಹೆಚ್ಚು ಚರ್ಚೆಯಾಗಿದ್ದರೂ, ಒಮ್ಮೆ ಈ ಜೋಡಿಯ ವಿಚ್ಛೇದನಕ್ಕೆ ವೆಬ್ ಸೀರಿಸ್ ನಿರ್ದೇಶಕನೇ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಅದು ಕೆಲವು ದಿನಗಳ ಕಾಲ ಬಿಸಿ ಬಿಸಿ ಸುದ್ದಿಯಾಗಿತ್ತು.

ಆದರೆ, ಸಮಂತಾ ವೆಬ್ ಸೀರಿಸ್ ನಿರ್ದೇಶಕನೊಂದಿಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಸಾಕ್ಷಿಗಳು ಸಿಕ್ಕಿರಲಿಲ್ಲ. ಹೀಗಾಗಿ ಅದು ವದಂತಿಯಾಗಿಯೇ ಉಳಿದುಬಿಟ್ಟಿತ್ತು. ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿದೆ. ಅದ್ಯಾಕೆ ಈ ಚರ್ಚೆ ಆಗುತ್ತಿದೆ ಅಂದರೆ, ಇತ್ತೀಚೆಗೆ ಸಮಂತಾ ಗಲಾಟ ಇಂಡಿಯಾ ತಮಿಳು ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಆ ವೇಳೆ ನಿರ್ದೇಶಕರಿಂದ ಈಕೆಗೆ ಒಂದು ಸಂದೇಶ ಬಂದಿತ್ತು. ಆ ಸಂದೇಶವನ್ನು ನೋಡಿ ಸಮಂತಾ ಮುಖಗಳು ಅರಳಿದ್ದವು. ಅದನ್ನು ನೋಡಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಗಲಾಟ ಸಂದರ್ಶನದ ವೇಳೆ ನಿರ್ದೇಶಕರೊಬ್ಬರಿಂದ ಪ್ರೇಮ ಸಂದೇಶ ಬಂದಿತ್ತು. ಆ ಆಡಿಯೋ ಸಂದೇಶವನ್ನು ನೋಡಿ ಸಮಂತಾ ಭಾವನೆಗಳೇ ಬದಲಾಗಿದ್ದವು ಎಂದು ಲೆಹ್ರೆನ್ ವೆಬ್ ಸೈಟ್ ವರದಿ ಮಾಡಿತ್ತು. ಆ ವೇಳೆ ಸಮಂತಾ ಆ ವೆಬ್ ಸರಣಿಯ ನಿರ್ದೇಶಕರನ್ನು ಹೊಗಳಿ ಮಾತಾಡಿದ್ದರು. ವೆಬ್ ಸೀರಿಸ್ ಶೂಟಿಂಗ್ ಮಾಡುವಾಗ ಇಬ್ಬರೂ ಹತ್ತಿರವಾದರು. ಇಬ್ಬರ ನಡುವೆ ಬಿಡಿಸಲಾರದ ಬಂಧವಿದೆ ಎಂದಿದ್ದಾಗಿ ವರದಿಯಾಗಿದೆ.
ವಿಶೇಷ ಅಂದರೆ, ಆ ವೆಬ್ ಸೀರಿಸ್ ನಿರ್ದೇಶಕನಿಗೆ ಈಗಾಗಲೇ ಮದುವೆ ಆಗಿದೆ. ಆದರೆ, ಸಮಂತಾಗೋಸ್ಕರ ವಿಚ್ಛೇದನ ನೀಡುವುದಕ್ಕೂ ಮುಂದಾಗಿದ್ದಾರೆಂದು ವರದಿ ಮಾಡಲಾಗಿದೆ. ಅಸಲಿಗೆ ಇದು ವದಂತಿಯೇ? ಇಲ್ಲ ನಿಜಕ್ಕೂ ಆ ವೆಬ್ ಸೀರಿಸ್ ನಿರ್ದೇಶಕರನ್ನು ಡೇಟಿಂಗ್ ಮಾಡುತ್ತಿದ್ದಾರೆಯೇ? ಸದ್ಯಕ್ಕೆ ಈ ಎಲ್ಲಾ ವಿಷಯಗಳ ಬಗ್ಗೆ ಖಚಿತ ಮಾಹಿತಿ ಇಲ್ಲ. ಇದು ಕೆಲವು ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಚರ್ಚೆ ಆಗುತ್ತಿದೆ ಅಷ್ಟೇ.


Click it and Unblock the Notifications











