ಸದ್ದಿಲ್ಲದೇ ಸಪ್ತಪದಿ ;ಸದ್ಗುರು ಸಮ್ಮುಖದಲ್ಲಿ ಇಂದು ನಡೆಯಲಿದೆ ಸಮಂತಾ ಎರಡನೇ ಮದುವೆ ?ಹತಾಶ ಜನ ಎಂದ ಮಾಜಿ ಪತ್ನಿ
ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು. ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ...
ಬದುಕಿನಲ್ಲಿ ಬ್ರೇಕಪ್ಪು.. ಲವ್ವು.. ಡವ್ವು.. ಕಡಿಮೆ ಇಲ್ಲ. ಒಬ್ಬರ ನಂತರ ಒಬ್ಬರನ್ನು ಮದುವೆಯಾಗುವುದು ಆ ನಂತರ ಅವರಿಗೂ ಕೂಡ ಗುಡ್ ಬೈ ಹೇಳಿ ಹೊರನಡೆಯುವುದು ಹೊಸದೇನೂ ಅಲ್ಲ. ಇಲ್ಲಿ ಹಲವರಿಗೆ ಎಲ್ಲವೂ ಬಟ್ಟೆ ಬದಲಿಸಿದಷ್ಟೇ ಸುಲಭ. ಹೀಗಾಗಿ ಇವರ ವ್ಯೆಯಕ್ತಿಕ ಬದುಕಿನ ಮೇಲೆ ಹಲವರ ಕಣ್ಣಿರುತ್ತೆ. ಸೋಶಿಯಲ್ ಮೀಡಿಯಾ ಮೇಲೆ ನಿಗಾ ವಹಿಸಲಾಗಿರುತ್ತೆ. ಹೀಗಿರುವಾಗ ಇದೀಗ ಸಮಂತಾ ಎರಡನೇ ಮದುವೆಯ ಕುರಿತು ಸುದ್ದಿಯೊಂದು ಮಾಯಾನಗರಿಯಲ್ಲಿ ಸಂಚಲನ ಸೃಷ್ಟಿಸಿದೆ. ಅಭಿಮಾನಿಗಳನ್ನು ಪುಳಕಿತಗೊಳಿಸಿದೆ.

ಹೌದು, ಎಲ್ಲರಿಗೆ ಈಗಾಗಲೇ ಗೊತ್ತಿರುವಂತೆ ಸಮಂತಾ ಬದುಕಿನಲ್ಲಿ ಮತ್ತೊಮ್ಮೆ ಪ್ರೀತಿ ಚಿಗುರಿದೆ. ದಿ ಫ್ಯಾಮಿಲಿ ಮ್ಯಾನ್ ಸೃಷ್ಟಿಕರ್ತ ಮತ್ತು ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಬೆಳೆಸಿಕೊಂಡಿರುವ ಸಲುಗೆಯ ಕುರಿತು ಇಡೀ ಚಿತ್ರ ಉದ್ಯಮವೇ ಮಾತನಾಡುತ್ತಿದೆ. ಹೋದಲ್ಲಿ .. ಬಂದಲ್ಲಿ .. ಕುಂತಲ್ಲಿ.. ನಿಂತಲ್ಲಿ.. ಸಮಂತಾ ಅವರನ್ನು ರಾಜ್ ನಿಡಿಮೋರು ನೆರಳಿನಂತೆ ಹಿಂಬಾಲಿಸುತ್ತಿದ್ದಾರೆ. ಮುಂಬೈಯಿಂದ ಹಿಡಿದು ತಿರುಪತಿಯವರೆಗೂ.. ಹೈದರಾಬಾದ್‌ದಿಂದ ಹಿಡಿದು ಅಮೆರಿಕಾದವರೆಗೂ ಇಬ್ಬರು ಜೊತೆ ಜೊತೆಯಲ್ಲಿ ಓಡಾಡುತ್ತಿದ್ದಾರೆ. ಕೈ ಕೈ ಹಿಡಿದುಕೊಂಡು ಊರ್ ತುಂಬಾ ಸುತ್ತುತ್ತಿದ್ದಾರೆ.
ಇನ್ನೇನು.. ಇಬ್ಬರು ಮದುವೆಯಾಗುವುದು ಮಾತ್ರ ಬಾಕಿ. ಆ ಶುಭ ದಿನಕ್ಕೆ ಇವರ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಹೀಗಿರುವಾಗ ಇಂದು ಸಮಂತಾ ಮತ್ತು ರಾಜ್ ನಿಡಿಮೋರು ನಡೆಯಲಿದೆ ಎನ್ನುವ ಸುದ್ದಿ ಸದ್ಯ ಕಾಡ್ಗಿಚ್ಚಿನಂತೆ ಹಬ್ಬಿದೆ. ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ''ಈಶ ಯೋಗ ಕೇಂದ್ರ''ದಲ್ಲಿ ಇಬ್ಬರು ಹೊಸ ಬದುಕಿಗೆ ಮುನ್ನುಡಿ ಬರೆಯಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ವ್ಯಾಪಕವಾದ ಚರ್ಚೆ ಕೂಡ ನಡೆಯುತ್ತಿದೆ.
ಇದಕ್ಕೆ ಪೂರಕವಾಗಿ ಮೊದಲಿಂದ ಬದುಕು-ಕರ್ಮ-ಪಾಪ-ಪುಣ್ಯದ ಪಾಠವನ್ನು ಕೂಡ ಮಾಡುತ್ತಾ ಬರುತ್ತಿರುವ ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ಡೇ ಮತ್ತೊಂದು ನಿಗೂಡಾರ್ಥದ ಪೋಸ್ಟ್ ಹಂಚಿಕೊಂಡಿದ್ದಾರೆ. "ಹತಾಶ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ" ಎಂಬ ಮೈಕೆಲ್ ಬ್ರೂಕ್ಸ್ ಅವರ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಎಂದಿನಂತೆ ತಮ್ಮ ಮದುವೆಯ ಕುರಿತು ಹಬ್ಬಿರುವ ಈ ಸುದ್ದಿಯ ಕುರಿತು ಸಮಂತಾ ಆಗಲಿ ರಾಜ್ ಆಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ.. ಬೆಂಕಿ ಇಲ್ಲದೇ ಹೊಗೆಯಾಡಲ್ಲ. ಹೀಗಾಗಿಯೇ ಇವರ ಅಭಿಮಾನಿಗಳು ಸಮಂತಾ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಸ್ಕ್ರಾಲ್ ಮಾಡುತ್ತಾ ಕುಂತಿದ್ದಾರೆ. ತಮ್ಮ ಮದುವೆಯ ಸುದ್ದಿಯನ್ನು ಹಂಚಿಕೊಳ್ಳಬಹುದೆಂದು ಕಾಯುತ್ತಿದ್ದಾರೆ.
ಇನ್ನುಳಿದಂತೆ ಕೆಲ ದಿನಗಳ ಹಿಂದೆ ಸಮಂತಾ ತಮ್ಮ ಪರ್ಪ್ಯೂಮ್ ಉದ್ಯಮದ ಹೊಸ ಎಡಿಷನ್‌ನ ಲಾಂಚ್ ಕಾರ್ಯಕ್ರಮವನ್ನು ಮುಂಬೈನಲ್ಲಿ ಹಮ್ಮಿಕೊಂಡಿದ್ದರು. ಸಮಂತಾ ಅವರ ಈ ಪಾರ್ಟಿಯಲ್ಲಿ ತಮನ್ನಾ ಸೇರಿ ಹಲವು ಭಾಗವಹಿಸಿದ್ದರು. ಸಹಜವಾಗಿ ರಾಜ್ ನಿಡಿಮೋರು ಕೂಡ ಬಂದಿದ್ದರು.
ಇದೇ ಸಮಯದಲ್ಲಿ ರಾಜ್ ಅವರ ಜೊತೆ ಕ್ಯಾಮರಾಗೆ ಫೋಸ್ ನೀಡಿದ್ದ ಸಮಂತಾ ಆತ್ಮೀಯವಾಗಿ ರಾಜ್ ಅವರನ್ನು ಅಪ್ಪಿಕೊಂಡಿದ್ದರು. ಸ್ನೇಹಿತರು ಮತ್ತು ನನ್ನ ಕುಟುಂಬದಿಂದ ನಾನು ಸುತ್ತುವರೆದಿದ್ದೇನೆ. ಕಳೆದ ಒಂದೂವರೆ ವರ್ಷದಲ್ಲಿ ನಾನು ಧೈರ್ಯದ ಹೆಜ್ಜೆ ಇಟ್ಟಿದ್ದೇನೆ. ರಿಸ್ಕ್ ತೆಗೆದುಕೊಂಡು, ನನ್ನ ಅಂತಃಪ್ರಜ್ಞೆಯನ್ನು ನಂಬಿ ಕಲಿಯುತ್ತಾ ಮುಂದುವರೆಯುತ್ತಿದ್ದೇನೆ, ಸಣ್ಣ ಸಣ್ಣ ಗೆಲುವುಗಳನ್ನು ಆಚರಿಸುತ್ತಿದ್ದೇನೆ, ನನ್ನ ಈ ಪ್ರಯಾಣದಲ್ಲಿ ತುಂಬಾನೇ ಶ್ರಮ ಪಡುವ, ನಂಬಿಕಸ್ಥ ಜನರ ಜೊತೆ ಕೆಲಸ ಮಾಡಿದ್ದು ನನಗೆ ಖುಷಿ ನೀಡಿದೆ. ಎಂದು ಬರೆದುಕೊಂಡಿದ್ದರು. ಇದು ಕೇವಲ ಆರಂಭ ಎಂದು ಹೇಳಿದ್ದರು. ಸಮಂತಾ ಹೇಳಿದ್ದ ಹೊಸ ಆರಂಭ ಈಗ ಮದುವೆಯ ಮೂಲಕ ಅಧಿಕೃತವಾಗಿ ಇಂದಿನಿಂದ ಆರಂಭವಾಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











