ನಟಿ ಸಮಂತಾ- ನಿರ್ದೇಶಕ ರಾಜ್ ಎಂಗೇಜ್‌ಮೆಂಟ್ ಡೇಟ್ ಫಿಕ್ಸ್?
ನಾಗಚೈತನ್ಯಾ ಹಾಗೂ ಸಮಂತಾ ಪ್ರೀತಿಸಿ ಮದುವೆ ಆಗಿದ್ದು ಬಳಿಕ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗಿದ್ದು ಗೊತ್ತೇಯಿದೆ. ಬಳಿಕ ಶೋಭಿತಾ ದುಲಿಪಾಲಾ ಅವರನ್ನು ಪ್ರೀತಿಸಿ ಚೈತು ಮದುವೆ ಆಗಿದ್ದಾರೆ. ಅತ್ತ ಸಮಂತಾ ಕೂಡ ನಿರ್ದೇಶಕ ರಾಜ್ ನಿಡಿಮೊರು ಜೊತೆ ಪ್ರೀತಿಲಿ ಬಿದ್ದಿದ್ದಾರೆ ಎನ್ನಲಾಗ್ತಿದೆ.
'ಫ್ಯಾಮಿಲಿಮ್ಯಾನ್' ವೆಬ್ ಸೀರಿಸ್‌ನಲ್ಲಿ ನಟಿ ಸಮಂತಾ ನಟಿಸಿದ್ದರು. ಇದನ್ನು ನಿರ್ದೇಶಿಸಿದವರಲ್ಲಿ ರಾಜ್ ಕೂಡ ಒಬ್ಬರು. ಅಂದಗಾಗೆ ರಾಜ್- ಡಿಕೆ ಜೋಡಿ ನಿರ್ದೇಶನದ 'ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ಕೂಡ ಸಮಂತಾ ಬಣ್ಣ ಹಚ್ಚಿದ್ದರು. ಇದೇ ಸಮಯದಲ್ಲಿ ಸ್ಯಾಮ್ ಹಾಗೂ ರಾಜ್ ನಡುವೆ ಪ್ರೇಮಾಕುಂರವಾಗಿದೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಇಬ್ಬರೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

ನಿರ್ದೇಶಕ ರಾಜ್ ಹಾಗೂ ಸಮಂತಾ ಒಟ್ಟಿಗೆ ಓಡಾಡುತ್ತಿರುವುದು ಸುದ್ದಿ ಆಗುತ್ತಿದೆ. ಇತ್ತೀಚೆಗೆ ಇಬ್ಬರೂ ಒಟ್ಟಿಗೆ ತಿರುಪತಿ ತಿರುಮಲ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದು ಸಹಜವಾಗಿಯೇ ಭಾರೀ ಚರ್ಚೆಗೆ ಕಾರಣವಾಗಿದೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಊಹಾಪೋಹಕ್ಕೆ ಮತ್ತಷ್ಟು ತುಪ್ಪ ಸುರಿದಂತೆ ಆಗಿದೆ. ಈಗಾಗಲೇ ಸ್ಯಾಮ್- ರಾಜ್ ಎಂಗೇಜ್‌ಮೆಂಟ್ ಕೂಡ ನಡೆದಿದೆ ಎಂದು ಗುಲ್ಲಾಗಿದೆ.
ಕೆಲ ತೆಲುಗು ಮಾಧ್ಯಮಗಳು ರಾಜ್-ಸ್ಯಾಮ್ ಎಂಗೇಜ್‌ಮೆಂಟ್ ಸೈಲೆಂಟ್ ಆಗಿ ನಡೆದಿದೆ. ಶೀಘ್ರದಲ್ಲೇ ಮದುವೆ ಕೂಡ ಆಗ್ತಾರೆ ಎಂದು ವರದಿ ಮಾಡಿವೆ. ಸಮಂತಾ 'ಶುಭಂ' ಎಂಬ ಚಿತ್ರ ನಿರ್ಮಿಸಿದ್ದು ಪ್ರಚಾರದ ಸಮಯದಲ್ಲಿ ಆಕೆಯ ಕೈಯಲ್ಲಿ ಕಂಡ ಉಂಗುರ ಅದಕ್ಕೆ ಸುಳಿವು ಎನ್ನಲಾಗ್ತಿದೆ. ಮುಂದಿನ ತಿಂಗಳು ಇಬ್ಬರ ಎಂಗೇಜ್‌ಮೆಂಟ್ ಎನ್ನುವ ಮಾತುಗಳು ಕೂಡ ಕೇಳಿಬರ್ತಿದೆ. ಅಂದಹಾಗೆ ನಿರ್ದೇಶಕ ರಾಜ್ ಈಗಾಗಲೇ ಶ್ಯಾಮಲಿ ದೇ ಎಂಬುವವರ ಜೊತೆ ಮದುವೆ ಆಗಿದ್ದಾರೆ. ದಂಪತಿಗೆ ಒಬ್ಬ ಮಗಳು ಇದ್ದಾಳೆ.
ಮೊದಲ ಪತ್ನಿಗೆ ಡಿವೋರ್ಸ್ ನೀಡಿ ರಾಜ್ ಇದೀಗ ನಟಿ ಸಮಂತಾ ಅವರ ಕೈಹಿಡಿಯುತ್ತಾರೆ ಎಂದು ಗುಲ್ಲಾಗಿದೆ. ಸಮಂತಾ ಮತ್ತು ರಾಜ್ ವರ್ಲ್ಡ್ ಪಿಕಲ್‌ಬಾಲ್ ಲೀಗ್ ಈವೆಂಟ್‌ಗೆ ಹಾಜರಿದ್ದರು. ಚೆನ್ನೈ ಸೂಪರ್ ಚಾಂಪಿಯನ್ಸ್ ತಂಡವನ್ನು ಈ ಜೋಡಿ ಹುರಿದುಂಬಿಸಿದರು. ಇನ್ನು ವಿಮಾನದಲ್ಲಿ ಪ್ರಯಾಣಿಸುವ ವೇಳೆ ನಿರ್ದೇಶಕ ರಾಜ್ ಜೊತೆ ಕ್ಲಿಕ್ಕಿಸಿದ ಫೋಟೊವನ್ನು ಸ್ಯಾಮ್ ಹಂಚಿಕೊಂಡಿದ್ದರು. ಇದೆಲ್ಲವೂ ಇಬ್ಬರ ನಡುವೆ ಏನೋ ನಡೀತಿದೆ ಎನ್ನುವ ಅನುಮಾನ ಅಭಿಮಾನಿಗಳಿಗೆ ಮೂಡಿಸಿತ್ತು.
ಎರಡನೇ ಮದುವೆ ಬಗ್ಗೆ ಸಮಂತಾ ಯಾವತ್ತೂ ನೋ ಎನ್ನಲಿಲ್ಲ. ಈ ಹಿಂದೆ ಈ ಬಗ್ಗೆ ಪ್ರಶ್ನೆ ಎದುರಾಗಿದ್ದಾಗಲೂ ನೋಡೋಣ, ಯಾಕೆ ಆಗಬಾರದು ಎನ್ನುವ ಅರ್ಥದಲ್ಲಿ ಆಕೆ ಮಾತನಾಡಿದ್ದರು. ಮತ್ತೊಂದು ಕಡೆ ಮಾಜಿ ಪತಿ ನಾಗಚೈತನ್ಯ ಈಗಾಗಲೇ 2ನೇ ಮದುವೆ ಆಗಿದ್ದಾರೆ. ಹಾಗಾಗಿ ಸ್ಯಾಮ್ ಕೂಡ ಇನ್ನೊಂದು ಮದುವೆ ಆಗುತ್ತಾರೆ ಎನ್ನುವ ಚರ್ಚೆ ಟಾಲಿವುಡ್ ಅಂಗಳದಲ್ಲಿ ಜೋರಾಗಿದೆ.
'ಯೇ ಮಾಯಾ ಚೆಸಾವೆ' ಚಿತ್ರದ ಮೂಲಕ ಸಮಂತಾ ಚಿತ್ರರಂಗಕ್ಕೆ ಬಂದಿದ್ದರು. ಮೊದಲ ಚಿತ್ರದಲ್ಲೇ ಚೈತು ಜೊತೆ ತೆರೆ ಹಂಚಿಕೊಂಡಿದ್ದರು. ಅದೇ ಸಮಯದಲ್ಲಿ ಶುರುವಾಗಿದ್ದ ಪ್ರೀತಿ ಬಳಿಕ ಮದುವೆವರೆಗೂ ಬಂದಿತ್ತು. ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿತ್ತು. ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯಗಳಂತೆ ಎರಡೆರಡು ಬಾರಿ ಮದುವೆ ಶಾಸ್ತ್ರುಗಳು ಜರುಗಿದ್ದವು. ಆದರೆ ಕೊವಿಡ್ ಲಾಕ್‌ಡೌನ್ ಸಮಯದಲ್ಲಿ ಇಬ್ಬರು ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿತ್ತು.
2017ರಲ್ಲಿ ಹಸೆಮಣೆ ಏರಿದ್ದ ಜೋಡಿ 2021ರಲ್ಲಿ ಪರಸ್ಪರ ಒಪ್ಪಿ ದೂರಾಗಲು ನಿರ್ಧರಿಸಿದ್ದರು. ಈ ಬಗ್ಗೆ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದರು. ಈ ಬಗ್ಗೆ ಇಬ್ಬರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಕೆಲವರು ಚೈತುನ ಟೀಕಿಸಿದರೆ ಮತ್ತೆ ಕೆಲವರು ಸಮಂತಾ ಅವರದ್ದೇ ತಪ್ಪು ಎಂದು ಕಾಮೆಂಟ್ ಮಾಡಿದ್ದರು. ಇನ್ನು ಡಿವೋರ್ಸ್ ಬೆನ್ನಲ್ಲೇ ಸಮಂತಾ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವುದು ಗೊತ್ತಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ ಸಮಂತಾ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. 'ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ಕೊನೆಯದಾಗಿ ಬಣ್ಣ ಹಚ್ಚಿದ್ದರು. ಮಯೋಸೈಟಿಸ್ ಸಮಸ್ಯೆಯ ಬಗ್ಗೆ ಗೊತ್ತಾಗುವ ಮುನ್ನ ಆರಂಭಿಸಿದ್ದ ಸಿನಿಮಾಗಳನ್ನು ಮುಗಿಸಿದ್ದರು. 'ಮಾ ಇಂಟಿ ಬಂಗಾರಂ' ಎಂಬ ಚಿತ್ರವನ್ನು ಈಗ ನಿರ್ಮಿಸಿ ನಟಿಸುತ್ತಿದ್ದಾರೆ.


Click it and Unblock the Notifications











