'ಪುಷ್ಪ'ನ ಜೊತೆ ಸೊಂಟ ಕುಣಿಸಲು ಭಾರಿ ಸಂಭಾವನೆ ಪಡೆದ ಸಮಂತಾ!

ನಟಿ ಸಮಂತಾ, ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಸಿನಿಮಾ ಒಂದರಲ್ಲಿ ವಿಶೇಷ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಹೀಗೆ ಐಟಂ ಮಾದರಿಯ ಹಾಡಿಗೆ ಡ್ಯಾನ್ಸ್ ಮಾಡಲು ಭಾರಿ ಮೊತ್ತದ ಸಂಭಾವನೆಯನ್ನೇ ಸಮಂತಾ ಪಡೆಯುತ್ತಿದ್ದಾರೆ.

'ಪುಷ್ಪ' ಸಿನಿಮಾದಲ್ಲಿನ ವಿಶೇಷ ಹಾಡಿಗೆ ಸಮಂತಾ ಡ್ಯಾನ್ಸ್ ಮಾಡಲಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ಸಮಂತಾ ಕುಣಿಯಲಿದ್ದು, ಸಮಂತಾ ಮೊದಲ ಬಾರಿಗೆ ಇಂಥಹಾ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ವಿಶೇಷ ತಯಾರಿಯನ್ನು ಚಿತ್ರತಂಡ ಮಾಡಿದೆ.

ಪ್ರಸ್ತುತ ಸಾಕಷ್ಟು ಬೇಡಿಕೆ ಇರುವ ನಟಿಯಾಗಿರುವ ಸಮಂತಾ ಮೊದಲ ಬಾರಿಗೆ ಐಟಂ ನಂಬರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಈ ವಿಶೇಷ ಪ್ರಯತ್ನಕ್ಕೆ ಭಾರಿ ದೊಡ್ಡ ಮೊತ್ತವನ್ನೇ ಸಮಂತಾ ಪಡೆದುಕೊಳ್ಳುತ್ತಿದ್ದಾರೆ. ಸಮಂತಾ ಪಡೆಯುತ್ತಿರುವ ದೊಡ್ಡ ಮೊತ್ತದ ಸಂಭಾವನೆ ಹುಬ್ಬೇರುವಂತೆ ಮಾಡಿದೆ.

ಸಮಂತಾ ಪಡೆಯುತ್ತಿರುವ ಸಂಭಾವನೆ ಎಷ್ಟು?

ಸಮಂತಾ ಪಡೆಯುತ್ತಿರುವ ಸಂಭಾವನೆ ಎಷ್ಟು?

'ಪುಷ್ಪ' ಸಿನಿಮಾದಲ್ಲಿ ಐದು ನಿಮಿಷದ ಹಾಡಿಗೆ ಡ್ಯಾನ್ಸ್ ಮಾಡಲು ಬರೋಬ್ಬರಿ 1.50 ಕೋಟಿ ಹಣವನ್ನು ಸಮಂತಾ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಕೇವಲ ಐದು ನಿಮಿಷದ ಹಾಡಿಗೆ 1.50 ಕೋಟಿ ಸಂಭಾವನೆಯನ್ನು ಮೈತ್ರಿ ಮೂವೀಸ್ ನೀಡುತ್ತಿದೆ. ಜೊತೆಗೆ ಬಹಳ ರಿಚ್ ಆಗಿ ಹಾಡು ಮೂಡಿ ಬರಲು ಸಕಲ ವ್ಯವಸ್ಥೆಗಳಲ್ಲೂ ಮಾಡಿದೆ. ಒಟ್ಟಾರೆ ಈ ಒಂದು ಹಾಡಿಗೆ ಸುಮಾರು 5 ಕೋಟಿ ಹಣವನ್ನು ಮೈತ್ರಿ ಮೂವೀಸ್ ಖರ್ಚು ಮಾಡುತ್ತಿದೆ.

ಪೂಜಾ ಹೆಗ್ಡೆಯನ್ನು ಕೇಳಲಾಗಿತ್ತು

ಪೂಜಾ ಹೆಗ್ಡೆಯನ್ನು ಕೇಳಲಾಗಿತ್ತು

ಇದೇ ಹಾಡಿಗೆ ನರ್ತಿಸುವಂತೆ ಪೂಜಾ ಹೆಗ್ಡೆಯನ್ನು ಕೇಳಲಾಗಿತ್ತು. ಆದರೆ ಪೂಜಾ ಹೆಗ್ಡೆ ಇನ್ನೂ ದೊಡ್ಡ ಮೊತ್ತದ ಸಂಭಾವನೆ ಕೇಳಿದರಂತೆ. ಜೊತೆಗೆ ಪೂಜಾ ಹೆಗ್ಡೆ ಬೇರೆ ಸಿನಿಮಾಗಳಲ್ಲಿ ಬಹಳ ಬ್ಯುಸಿ ಸಹ ಇರುವ ಕಾರಣ ಪೂಜಾ ಹೆಗ್ಡೆ ಬದಲಿಗೆ ಸಮಂತಾರನ್ನು ಚಿತ್ರತಂಡ ಕೇಳಿದೆ. ಹಾಡಿನ ನೃತ್ಯ, ಸಾಹಿತ್ಯ ಹಾಗೂ ಹಾಡಿನಲ್ಲಿನ ಗ್ಲಾಮರ್ ಅಂಶಗಳ ಬಗ್ಗೆ ಕೆಲವು ಷರತ್ತುಗಳನ್ನು ವಿಧಿಸಿದ ಬಳಿಕ ಹಾಡಿಗೆ ನರ್ತಿಸಲು ಸಮಂತಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಮೂರು ಹಾಡು ಬಿಡುಗಡೆ ಆಗಿವೆ

ಮೂರು ಹಾಡು ಬಿಡುಗಡೆ ಆಗಿವೆ

ಸಿನಿಮಾದ ಮೂರು ಹಾಡುಗಳು ಈಗಾಗಲೇ ಬಿಡುಗಡೆ ಆಗಿವೆ. ಸಿನಿಮಾದ ಐದನೇ ಹಾಡಿನಲ್ಲಿ ಸಮಂತಾ ನರ್ತಿಸಲಿದ್ದಾರೆ. ಈ ಮೊದಲು ಬಿಡುಗಡೆ ಆಗಿರುವ ಮೂರು ಹಾಡುಗಳು ಸೂಪರ್ ಹಿಟ್ ಆಗಿವೆ. ಅದರಲ್ಲಿಯೂ 'ಶ್ರೀವಲ್ಲಿ' ಹಾಗೂ 'ದಾಕ್ಕೊ ದಾಕ್ಕೊ ಮೇಕ' ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ಸಮಂತಾ ನಟಿಸುತ್ತಿರುವ ಹಾಡನ್ನು ಹೆಚ್ಚಿನ ಕಾಳಜಿವಹಿಸಿ ಚಿತ್ರೀಕರಿಸಲಾಗುತ್ತಿದೆ. ಈ ಹಾಡು ಸಿನಿಮಾದ ಸೆಳೆಯುವ ಅಂಶಗಳಲ್ಲಿ ಒಂದಾಗಿರುತ್ತದೆ ಎಂದಿದೆ ಚಿತ್ರನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್.

'ಪುಷ್ಪ' ಸಿನಿಮಾ ಬಿಡುಗಡೆ ದಿನಾಂಕ

'ಪುಷ್ಪ' ಸಿನಿಮಾ ಬಿಡುಗಡೆ ದಿನಾಂಕ

'ಪುಷ್ಪ' ಸಿನಿಮಾದಲ್ಲಿ ದೊಡ್ಡ ಸ್ಟಾರ್ ನಟರ ದಂಡೇ ಇದೆ. ಅಲ್ಲು ಅರ್ಜುನ್ ನಾಯಕ, ರಶ್ಮಿಕಾ ಮಂದಣ್ಣ ನಾಯಕಿ, ಫಹಾದ್ ಫಾಸಿಲ್, ಹಾಸ್ಯ ನಟ ಸುನಿಲ್, ಜಗಪತಿ ಬಾಬು, ಕನ್ನಡಿಗ ಡಾಲಿ ಧನಂಜಯ್ ಇನ್ನೂ ಕೆಲವರು ವಿಲನ್‌ಗಳಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಜನಪ್ರಿಯ ನಿರ್ದೇಶಕ ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಸಂಗೀತ ನೀಡಿರುವುದು ದೇವಿ ಶ್ರೀ ಪ್ರಸಾದ್. ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಒಟ್ಟಿಗೆ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಮೊದಲು 'ಆರ್ಯ' ಮತ್ತು 'ಆರ್ಯ 2' ಸಿನಿಮಾಗಳನ್ನು ಈ ಜೋಡಿ ಒಟ್ಟಿಗೆ ಮಾಡಿತ್ತು. 'ಪುಷ್ಪ' ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಮೊದಲ ಭಾಗವು ಡಿಸೆಂಬರ್ 17 ರಂದು ತೆರೆಗೆ ಬರಲಿದೆ.

More from Filmibeat

English summary
Samantha Ruth Prabhu taking huge remuneration to act in Puhspa movie special song. Movie is releasing on December 17.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X