Samantha Tattoo: ಮಾಜಿ ಪತಿಯಿಂದ ಬೇಸತ್ತ ಸಮಂತಾ, ಟ್ಯಾಟೂ ಬೇಡವೇ ಬೇಡ ಎಂದಿದ್ದೇಕೆ!
ಸಮಂತಾ ಮತ್ತು ನಾಗ ಚೈತನ್ಯ ನಾಲ್ಕು ವರ್ಷಗಳ ದಾಂಪತ್ಯಕ್ಕೆ ವಿಚ್ಛೇದನದ ಮೂಲಕ ಅಂತ್ಯ ಹಾಡಿದ್ದಾರೆ. ಟಿ-ಟೌನ್‌ನಲ್ಲಿ ಅತ್ಯಂತ ಪ್ರೀತಿ ಪಾತ್ರ ದಂಪತಿಗಳು ಎನಿಸಿಕೊಂಡಿದ್ದ ಈ ಜೋಡಿ ಬೇರೆ ಆಗಿರುವುದು ನಿಜಕ್ಕೂ ಶಾಕಿಂಗ್ ಸಂಗತಿ ಆಗಿತ್ತು. ಇವರು ಒಬ್ಬರನ್ನೊಬ್ಬರು ಅತ್ಯಂತ ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಅವರು ಹಾಕಿಸಿಕೊಂಡಿರು ಟ್ಯಾಟೂಗಳೇ ಸಾಕ್ಷಿ ಆಗಿವೆ.
ಆದರೆ ಇಬ್ಬರು ವಿಚ್ಛೇದನ ಪಡೆದು ದೂರಾಗಿದ್ದಾರೆ. ಆದರೆ ಸಮಂತಾ ಹಾಕಿಸಿಕೊಂಡ ಟ್ಯಾಟುಗಳು ಹಾಗೆ ಉಳಿದಿವೆ. ಈ ಬಗ್ಗೆಯೂ ಹಲವು ಬಾರಿ ಚರ್ಚೆ ಆಗಿದೆ. ನಟಿ ಸಮಂತಾ ನಾಗಚೈತನ್ಯ ಬಗ್ಗೆ ಹಾಕಿಸಿಕೊಂಡಿರುವ ಟ್ಯಾಟುಗಳನ್ನು ಅಳಿಸುತ್ತಾರೆ ಅಂತಲೂ ಸುದ್ದಿ ಅಗಿತ್ತು. ಆದರೆ ಅದ್ಯಾಕೋ ಸಮಂತಾ ಮಾತ್ರ ಇನ್ನು ಟ್ಯಾಟು ಅಳಿಸಿಲ್ಲ. ಈಗ ಈ ಟ್ಯಾಟುಗಳ ಬಗ್ಗೆ ಮಾತನಾಡಿ ಸಮಮತಾ ಸುದ್ದಿ ಆಗಿದ್ದರೆ.
ಈ ಹಿಂದೆ ಸಮಂತಾ ಇಷ್ಟ ಪಟ್ಟು ಹಾಕಿಸಿಕೊಂಡಿದ್ದರು. ಆದರೆ ಈಗ ಸಮಂತಾಗೆ ಟ್ಯಾಟು ಎಂದರೆ ಸ್ವಲ್ಪವೂ ಇಷ್ಟ ಇಲ್ಲ ಅಂತೆ. ತನಗೆ ಇಷ್ಟ ಇಲ್ಲ ಅಂದರೆ ಓಕೆ, ಬೇರೆಯವರಿಗೂ ಕೂಡ ಸಮಂತಾ ಟ್ಯಾಟು ಹಾಕಿಸಿಕೊಳ್ಳದೇ ಇರುಲು ಸಲಹೆ ನೀಡುತ್ತಾ ಇದ್ದಾರೆ. ಅಷ್ಟಕ್ಕೂ ಸಮಂತಾ ಈ ಟ್ಯಾಟು ಬಗ್ಗೆ ಯಾರಿಗೆ ಏನು ಹೇಳಿದರು ಎನ್ನುವುದನ್ನು ಮುಂದೆ ಓದಿ.

ಟ್ಯಾಟೂ ಹಾಕಿಸಿಕೊಳ್ಳ ಬೇಡಿ ಎಂದ ಸಮಂತಾ!
ನಟಿ ಸಮಂತಾಗೆ ಇತ್ತೀಚೆಗೆ ಪ್ರಶ್ನೆ ಒಂದು ಎದುರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಲೈವ್ ಬಂದಾಗ, ಟ್ಯಾಟೂ ಬಗ್ಗೆ ಪ್ರಶ್ನೆ ಎದುರಾಗಿದೆ. ಅಭಿಮಾನಿ ಒಬ್ಬರು ಟ್ಯಾಟೂ ಹಾಕಿಸಿಕೊಳ್ಳಲು ಏನಾದರು ಐಡಿಯ ಕೊಡಿ ಎಂದು ಕೇಳಿದ್ದಾರೆ. ಆಗ ಸಮಂತಾ "ಎಂದೆಗೂ ಟ್ಯಾಟೂ ಹಾಕಿಸಿಕೊಳ್ಳ ಬೇಡಿ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಹೇಳಿಕೆ ಈಗ ಸಮಂತಾ ಹಾಕಿಸಿಕೊಂಡ ಟ್ಯಾಟೂಗಳಿಗೆ ತಳುಕು ಹಾಕಿಕೊಂಡಿದೆ.
ಬೆನ್ನಿನ ಮೇಲೆ ಪ್ರೀತಿಯ ಸಂಕೇತದ ಟ್ಯಾಟೂ!
ಮದುವೆ ಆದ ಹಲವು ದಿನಗಳ ನಂತರ ಸಮಂತಾ ಬೆನ್ನಲ್ಲಿ ಮತ್ತೊಂದು ಟ್ಯಾಟೂ ಕಾಣಿಸಿತು. ಅದುವೆ 'YMC' ಎನ್ನುವ ಅಕ್ಷರಗಳು. ಇದು ಸಮಂತಾ ಮತ್ತು ನಾಗ್ ಅವರ ಮೊದಲ ಸಿನಿಮಾ 'ಯೇ ಮಾಯಾ ಚೇಸಾವೆ' ಚಿತ್ರದ ಸಂಕೇತ ಆಗಿದೆ. ಇದೇ ಚಿತ್ರದಲ್ಲಿ ಮೊದಲ ಬಾರಿಗೆ ಇಬ್ಬರು ಒಟ್ಟಿಗೆ ಅಭಿನಯಿಸಿದ್ದರು. 'ಯೇ ಮಾಯ ಚೇಸಾವೆ' ಚಿತ್ರದ ಸೆಟ್‌ನಲ್ಲಿ ಸಮಂತಾ ಮೊದಲ ಬಾರಿಗೆ ನಾಗ ಚೈತನ್ಯ ಅವರನ್ನು ಭೇಟಿಯಾದರು. ಅಲ್ಲಿಂದಲೇ ಇವರ ನಡುವೆ ಪ್ರೀತಿ ಹುಟ್ಟಿದೆಯಂತೆ. ಹಾಗಾಗಿ ಆ ಚಿತ್ರದ ಹೆಸರನ್ನು ಸಮಂತಾ ಬೆನ್ನಿನ ಮೇಲೆ ಹಾಕಿಸಿಕೊಂಡಿದ್ದಾರೆ.
ಸಮಂತಾ ಸೀಕ್ರೇಟ್ ಟ್ಯಾಟೂನಲ್ಲಿ ನಾಗ ಚೈತನ್ಯ ಹೆಸರು!
ಇದಿಷ್ಟೇ ಅಲ್ಲ ಸಮಂತಾಳ ಮತ್ತೊಂದು ಅತ್ಯಮೂಲ್ಯ ಟ್ಯಾಟೂವನ್ನು 2019 ರಲ್ಲಿ ಸಾರ್ವಜನಿಕವಾಗಿ ಬಹಿರಂಗ ಪಡಿಸಿದರು. ಈ ಟ್ಯಾಟೂವನ್ನು ಸಮಂತಾ ಸೀಕ್ರೇಟ್ ಆಗಿ ಇಟ್ಟಿದ್ದರು. ಆ ಟ್ಯಾಟೂ ನಾಗ ಚೈತನ್ಯ ಹೆಸರು, ಪುಟ್ಟದಾಗಿ 'ಚೈ' ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂ ಬಗ್ಗೆ ಪೋಸ್ಟ್ ಹಾಕಿದ ಸಮಂತಾ, "ಲೈವಿಂಗ್ ಮೈ ಬೆಸ್ಟ್ ಲೈಫ್, ನಾನು ಹೊಂದಿರುವ ಏಕೈಕ ಹಚ್ಚೆ, ಕೊನೆಗೂ ಈ ಟ್ಯಾಟೂವನ್ನು ತೋರಿಸುತ್ತಿದ್ದೇನೆ, ನನ್ನ ಪತಿ ನನ್ನ ಪ್ರಪಂಚ." ಎಂದು ಬರೆದುಕೊಂಡಿದ್ದರು.
ಮದುವೆ ದಿನಾಂಕವನ್ನು ಟ್ಯಾಟೂ ಹಾಕಿಸಿಕೊಂಡಿದ್ದ ನಾಗ್!
ಈಗ ಬೇರೆ ಆಗಿರುವ ದಂಪತಿಗಳು ಪರಸ್ಪರ ಪ್ರೀತಿಸುತ್ತಿದ್ದು, ಹತ್ತು ವರ್ಷಗಳು ಪ್ರೀತಿ ಮಾಡಿ ನಂತರ 2017 ರಲ್ಲಿ ಮದುವೆ ಆದರು. ಆ ಬಳಿಕ ಸಮಂತಾ ಮತ್ತು ನಾಗ ಚೈನತ್ಯ ಮತ್ತೊಂದು ಟ್ಯಾಟೂ ಸುದ್ದಿ ಆಯ್ತು. ಇಬ್ಬರ ದಾಂಪತ್ಯದ ಬಾಂಧವ್ಯ ತೋರುವ ಟ್ಯಾಟೂ ಇದಾಗಿದೆ. ಮದುವೆ ಬಳಿಕ 'ವೈಕಿಂಗ್' ಚಿಹ್ನೆಯ ಕೆಳಗೆ ನಾಗ ಚೈತನ್ಯ ತಮ್ಮ ಮದುವೆಯ ದಿನಾಂಕವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದಿಷ್ಟೇ ಅಲ್ಲಾ ಸಮಂತಾ ತಮ್ಮ ಪ್ರೀತಿಯಿ ಸಂಕೇತ ಒಂದನ್ನು ತಮ್ಮ ಬೆನ್ನಿನ ಮೇಲೆ ಹಚ್ಚೆ ಒತ್ತಿಸಿಕೊಂಡಿದ್ದಾರೆ.


Click it and Unblock the Notifications











