»   » 'ಮನಮೋಹಕ'ವಾಗಿ ಕೈಕೊಟ್ರು ಸಮರ್ಥ ಪ್ರಸಾದ್

'ಮನಮೋಹಕ'ವಾಗಿ ಕೈಕೊಟ್ರು ಸಮರ್ಥ ಪ್ರಸಾದ್

By: ಜೀವನರಸಿಕ
Subscribe to Filmibeat Kannada

'ಬಹುಪರಾಕ್' ಸಿನಿಮಾವನ್ನ ಹಂಚಿಕೆ ಮಾಡೋಕೆ ಸಮರ್ಥ ವೆಂಚರ್ಸ್ ಪ್ರಸಾದ್ ಒಪ್ಪಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಸಮರ್ಥ ಪ್ರಸಾದ್ ಸಮರ್ಥವಾಗಿ ಸಿನಿಮಾ ಡಿಸ್ಟ್ರಿಬ್ಯೂಟ್ ಮಾಡೋಕೆ ಎರಡು ವರ್ಷಗಳ ನಂತರ ಕಂಬ್ಯಾಕ್ ಮಾಡ್ತಿರೋದು ಸುದ್ದಿ ಮಾಡಿತ್ತು.

ಈಗ ಬಹುಪರಾಕ್ ರಿಲೀಸಾಗಿದೆ. ಆದರೆ ರಿಲೀಸ್ ಗೂ ಒಂದು ವಾರ ಮೊದಲು ಹಂಚಿಕೆ ಮಾಡಬೇಕಾಗಿದ್ದ ಪ್ರಸಾದ್ ಕೈ ಕೊಟ್ಟಿದ್ದಾರೆ. ಈಗ ಬಹುಪರಾಕ್ ಸಿನಿಮಾದ ಹಂಚಿಕೆದಾರರು ಅನ್ನೋದ್ರ ಮುಂದಿರೋ ಹೆಸರು ಎಂ ಎನ್ ಕುಮಾರ್. [ಶಿವಣ್ಣ ಚಿತ್ರದ ಮೂಲಕ ಕನ್ನಡಕ್ಕೆ ಐಶ್ವರ್ಯಾ ರೈ ಎಂಟ್ರಿ]

Samarth Prasad skip out of movie Manamohaka

ಇಷ್ಟಕ್ಕೂ ಪ್ರಸಾದ್ ಮೊದಲು ಬಹುಪರಾಕ್ ಸಿನಿಮಾ ಹಂಚಿಕೆ ಹೊಸ ಹುರುಪಿನಿಂದ ಒಪ್ಪಿಕೊಂಡಿದ್ರು. ಆದರೆ ಕೊನೇ ದಿನಗಳಲ್ಲಿ ಸಿನಿಮಾ ಹಂಚಿಕೆ ಮಾಡೋಕೆ ಒಪ್ಪದಿರೋಕೆ ಹಂಚಿಕೆದಾರರು ಕೊಟ್ಟ ಕಾರಣ ಸಿಲ್ಲಿ ಸಿಲ್ಲಿ ಅಂತೆ.

ಆದ್ರೆ ಸಿನಿಮಾ ತಂಡಕ್ಕೆ ಮನಮೋಹಕವಾಗಿ ಕೈ ಕೊಟ್ಟ ಹಂಚಿಕೆದಾರರು ಈಗ ಶಿವಣ್ಣ ಅಭಿನಯದ ಸಿನಿಮಾ ನಿರ್ಮಾಣ ಮಾಡೋ ಅವಕಾಶ ಕಳ್ಕೊಂಡಿದ್ದಾರೆ. ಈ ಹಿಂದೆ 'ಬಹುಪರಾಕ್' ಹಂಚಿಕೆಯ ಜೊತೆಗೆ ಸಮರ್ಥ ವೆಂಚರ್ಸ್ ಪ್ರಸಾದ್ ಮನಮೋಹಕ ಸಿನಿಮಾ ನಿರ್ಮಿಸ್ತಾರೆ ಅನ್ನೋ ಸುದ್ದಿ ಬಂದಿತ್ತು. ಈಗ ಪ್ರಸಾದ್ ರಿಗೆ ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣನ 'ಮನಮೋಹಕ' ಪ್ರಸಾದ ಒಲಿಯೋದು ಡೌಟು ಅಂತಿದೆ ಗಾಂಧಿನಗರ.

English summary
Latest buzz from Sandalwood has said that, Samartha Ventures Prasad skip out of Kannada movie 'Manamohaka'. The movie is directed by Simple Suni and Hat Trick Hero Shivanna in an ever seen and different avatar in the movie.
Please Wait while comments are loading...