For Quick Alerts
  ALLOW NOTIFICATIONS  
  For Daily Alerts

  ಚಿಯಾನ್‌ ವಿಕ್ರಮ್‌ಗೆ ಪವನ್ ಕುಮಾರ್ ಕಥೆ 'ದ್ವಿತ್ವ'ದ್ದೇ ಇರಬಹುದಾ?

  |

  ಪವನ್ ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ ಸಿನಿಮಾ ಇಷ್ಟೊತ್ತಿಗೆ ಸೆಟ್ಟೇರಿಬಿಡುತ್ತಿತ್ತು. ಅಪ್ಪು ದಿಢೀರ್ ಅಗಲಿಕೆ ಇದೆಲ್ಲವನ್ನೂ ತಲೆಕೆಳಗೆ ಮಾಡಿತ್ತು. ಆದರೆ, ಇಂದಿಗೂ ಅಪ್ಪು ಅಭಿಮಾನಿಗಳಿಗಾಗಲಿ, ಸಿನಿಪ್ರಿಯರಿಗಾಗಲಿ 'ದ್ವಿತ್ವ' ಬಗ್ಗೆ ಕೂತೂಹಲ ಮಾತ್ರ ಕಮ್ಮಿಯಾಗಿಲ್ಲ.

  ಪವನ್ ಕುಮಾರ್ ದ್ವಿತ್ವ ಸಿನಿಮಾವನ್ನು ಯಾರಿಗೆ ಮಾಡುತ್ತಾರೆ? ಪುನೀತ್ ರಾಜ್‌ಕುಮಾರ್ ಮಾಡಬೇಕಿದ್ದ ಸಿನಿಮಾವನ್ನು ಬೇರೆ ಯಾರು ಮಾಡಬಹುದು? ಅನ್ನೋ ಪ್ರಶ್ನೆಯಂತೂ ಕಾಡುತ್ತಲೇ ಇದೆ. ಈ ಮಧ್ಯೆ ಪವನ್ ಕುಮಾರ್ ಹಾಗೂ ತಮಿಳು ನಟ ಚಿಯಾನ್ ವಿಕ್ರಮ್ ಕಾಂಬಿನೇಷನ್ ಬಗ್ಗೆ ಟಾಕ್ ಶುರುವಾಗಿದೆ. ಅಸಲಿಗೆ ಪವನ್ ವಿಕ್ರಮ್‌ಗೆ ಹೇಳಿದ ಕಥೆ ಯಾವುದು? ಅನ್ನೋದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಂತಾಗಿದೆ.

  ಬೆಂಗಳೂರಿನಲ್ಲಿ ಕೋಬ್ರಾ ತಂಡದ ಜೊತೆ ಚಿಯಾನ್ ವಿಕ್ರಂ!ಬೆಂಗಳೂರಿನಲ್ಲಿ ಕೋಬ್ರಾ ತಂಡದ ಜೊತೆ ಚಿಯಾನ್ ವಿಕ್ರಂ!

  ಅಷ್ಟಕ್ಕೂ ಸೋಶಿಯಲ್ ಮೀಡಿಯಾದಲ್ಲಿ ಪವನ್ ಕುಮಾರ್ ಸಿನಿಮಾ ಬಗ್ಗೆ ಇಷ್ಟೆಲ್ಲ ಕುತೂಹಲ ಮೂಡುವುದಕ್ಕೆ ಕಾರಣ ಇದೆ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಚಿಯಾನ್ ವಿಕ್ರಮ್ ಕನ್ನಡ ನಿರ್ದೇಶಕನ ಜೊತೆ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದು ಪವನ್ ಕುಮಾರ್ ಎಂಬುದನ್ನೂ ಹೇಳಿದ್ದು ಇಷ್ಟೆಲ್ಲ ಕುತೂಹಲಕ್ಕೆ ಕಾರಣ. ಅಸಲಿಗೆ ಏನಿದು ಮ್ಯಾಟರ್?

  ಪವನ್ ಜೊತೆ ವಿಕ್ರಮ್ ಸಿನಿಮಾ ಫಿಕ್ಸ್

  ಪವನ್ ಜೊತೆ ವಿಕ್ರಮ್ ಸಿನಿಮಾ ಫಿಕ್ಸ್

  ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ತಮ್ಮ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 'ಕೆಜಿಎಫ್' ನಟಿ ಶ್ರೀನಿಧಿ ಶೆಟ್ಟಿ ಜೊತೆ ನಟಿಸಿದ ಸಿನಿಮಾ 'ಕೋಬ್ರಾ' ಬಿಡುಗಡೆಗೆ ಸಜ್ಜಾಗಿದೆ. ಇದೇ ಸಿನಿಮಾದ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಪವನ್ ಕುಮಾರ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಇದೇ ವಿಷಯ ಈಗ ಸ್ಯಾಂಡಲ್‌ವುಡ್‌ನಲ್ಲಿ ಬೇಜಾನ್ ಚರ್ಚೆಯಾಗುತ್ತಿದೆ. ವಿಕ್ರಮ್‌ಗೆ ಲೂಸಿಯಾ ಪವನ್ ಕುಮಾರ್ ಸಿನಿಮಾ ಮಾಡೋದು ಬಹುತೇಕ ಕನ್ಫರ್ಮ್ ಆಗಿದೆ.

  'ಪೊನ್ನಿಯನ್ ಸೆಲ್ವನ್' ಟೀಂಗೆ ಶಾಕ್: ಐಶ್ವರ್ಯಾ, ಕಾರ್ತಿ ಫೋಟೊ ಲೀಕ್!'ಪೊನ್ನಿಯನ್ ಸೆಲ್ವನ್' ಟೀಂಗೆ ಶಾಕ್: ಐಶ್ವರ್ಯಾ, ಕಾರ್ತಿ ಫೋಟೊ ಲೀಕ್!

  'ಕೋಬ್ರಾ' ಪ್ರಚಾರದಲ್ಲಿ ವಿಕ್ರಮ್ ಹೇಳಿದ್ದೇನು?

  'ಕೋಬ್ರಾ' ಪ್ರಚಾರದಲ್ಲಿ ವಿಕ್ರಮ್ ಹೇಳಿದ್ದೇನು?

  'ಕೋಬ್ರಾ' ಪ್ರಚಾರಕ್ಕೆ ಬಂದಿದ್ದ ವಿಕ್ರಮ್ ಕನ್ನಡದ ನಿರ್ದೇಶಕ ಪವನ್ ಕುಮಾರ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. "ನಿರ್ದೇಶಕ ಪವನ್ ಕುಮಾರ್ ಹೇಳಿದ ಕಥೆ ಇಷ್ಟವಾಗಿದ್ದು, ಅವರೊಂದಿಗೆ ನಾನು ಸಿನಿಮಾ ಮಾಡುತ್ತೇನೆ." ಎಂದು ಹೇಳಿದ್ದಾರೆ. ಹೀಗಾಗಿ ಪವನ್ ಕುಮಾರ್ ಹಾಗೂ ವಿಕ್ರಮ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರೋದು ಪಕ್ಕಾ ಆಗಿದೆ. ಹೀಗಾಗಿ ಚಿಯಾನ್‌ ವಿಕ್ರಮ್ ಕನ್ನಡ ಸಿನಿಮಾದಲ್ಲಿ ನಟಿಸೋದು ಕನ್ಫರ್ಮ್ ಆದಂತೆ. ಮೂಲಗಳ ಪ್ರಕಾರ, ಕನ್ನಡ ಹಾಗೂ ತಮಿಳು ಎರಡು ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ವಿಕ್ರಮ್ ಹಾಗೂ ಪವನ್ ಸಿನಿಮಾ ಬಗ್ಗೆನೇ ಚರ್ಚೆ ಶುರುವಾಗಿದೆ.

  ವಿಕ್ರಮ್ 'ದ್ವಿತ್ವ' ಕಥೆ ಹೇಳಿದ್ರಾ ಪವನ್?

  ವಿಕ್ರಮ್ 'ದ್ವಿತ್ವ' ಕಥೆ ಹೇಳಿದ್ರಾ ಪವನ್?

  ಪವನ್ ಕುಮಾರ್ ತಮಿಳು ನಟನಿಗೆ ಯಾವ ಕಥೆ ಹೇಳಿದ್ದಾರೆ? ಅನ್ನೋ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಅಪ್ಪುಗಾಗಿ ಮಾಡಬೇಕಿದ್ದ ಸಿನಿಮಾ 'ದ್ವಿತ್ವ'ದ ಕತೆಯನ್ನೇ ಹೇಳಿರಬಹುದಾ? ಅನ್ನೋ ಚರ್ಚೆ ನಡೆಯುತ್ತಿದೆ. ಅಪ್ಪು ಮಾಡಬೇಕಿದ್ದ ಪಾತ್ರದಲ್ಲಿ ವಿಕ್ರಮ್ ನಟಿಸಬಹುದು ಎಂದೂ ಹೇಳಲಾಗುತ್ತಿದೆ. ಹೀಗಾಗಿ ವಿಕ್ರಮ್‌ಗೆ ಪವನ್ ಹೇಳಿದ ಕಥೆ ಯಾವುದು? ಅನ್ನೋದು ಗೊತ್ತಾಗದ ಹೊರತು ದ್ವಿತ್ವ ಚರ್ಚೆಯಲ್ಲಿರುತ್ತೆ.

  ಇಬ್ಬರ ಸಿನಿಮಾ ಯಾವಾಗ ಶುರು?

  ಇಬ್ಬರ ಸಿನಿಮಾ ಯಾವಾಗ ಶುರು?

  ತಮಿಳು ನಟನಿಗೆ ಪವನ್ ಹೇಳಿದ ಕಥೆ ಇಷ್ಟ ಆಗಿರೋದ್ರಿಂದ ಸಿನಿಮಾ ಅನೌನ್ಸ್‌ಮೆಂಟ್ ಅಷ್ಟೇ ಬಾಕಿ ಉಳಿದೆ. ಆದರೆ, ಪವನ್ ಮಾತ್ರ 'ದ್ವಿತ್ವ' ಸಿನಿಮಾ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಅಂತಾನೇ ಹೇಳುತ್ತಿದ್ದಾರೆ. ಹೀಗಾಗಿ ಬೇರೆ ಕಥೆಯನ್ನು ಹೇಳಿರಲಿಕ್ಕೂ ಸಾಧ್ಯತೆ ಇದೆ. ಈ ಸಿನಿಮಾ ಅನೌನ್ಸ್ ಆದಾಗ ಕಥೆ ಬಗ್ಗೆ ರಿವೀಲ್ ಆಗಬಹುದು. ಸದ್ಯ ಚಿಯಾನ್ ವಿಕ್ರಮ್ 'ಕೋಬ್ರಾ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಹಿಂದೆನೇ ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವನ್' ಸಿನಿಮಾ ಕೂಡ ಬಿಡುಗಡೆಯಾಗಬೇಕಿದೆ.

  Recommended Video

  ದ್ವಾರಕೀಶ್ ಪಟ್ಟ ಕಷ್ಟ ನೆನೆದು ಬಾವುಕಾರದ ಶ್ರೀನಾಥ್ | Filmibeat Kannada
  English summary
  Sandalwood Director Pawan Kumar to Direct a Film for Chiyaan Vikram? Speculation Is that he is Doing Dvitva. Know More.
  Monday, August 29, 2022, 14:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X