Mahesh Kumar: ನಿರ್ದೇಶಕ ಮಹೇಶ್‌ಗೆ ಬಾಲಿವುಡ್ ನಿರ್ಮಾಪಕರಿಂದ ಬಂತು ಬಂಪರ್ ಆಫರ್!
ಚಿತ್ರರಂಗ ಅಂದ್ರೇನೆ ಹಾಗೆ. ಇಲ್ಲಿದ್ದವ್ರು ನಾಳೆ ಇನ್ಯಾವ್ದೋ ಇಂಡಸ್ಟ್ರಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುತ್ತರೆ. ಸದಾ ಹರಿಯುವ ನೀರಿನಂತೆ ಬೆರೆತೆಕೊಳ್ಳುವ ಇಂಡಸ್ಟ್ರಿ ಮಂದಿ ಸ್ಯಾಂಡಲ್ ವುಡ್‌ನಿಂದ ಟಾಲಿವುಡ್, ಕಾಲಿವುಡ್‌ಗೆ ಹಾರೋದು ಕಾಮನ್.
ಅದರಲ್ಲೂ ಕಲಾವಿದರನ್ನು ಹೊರತು ಪಡಿಸಿ, ಸ್ಟಾರ್ ನಿರ್ದೇಶಕರು, ಸ್ಟಾರ್ ನಿರ್ಮಾಪಕರು ಕೆಲವೊಮ್ಮೆ ಬೇರೆ ಇಂಡಸ್ಟ್ರಿಗೆ ಕಾಲಿಟ್ಟು ಕಮಾಲ್ ಮಾಡುತ್ತಾರೆ. ಅಲ್ಲದೇ ತಮ್ಮ ಟ್ಯಾಲೆಂಟ್ ಏನು ಅನ್ನೋದನ್ನ ಪ್ರೂವ್ ಮಾಡಿಕೊಳ್ಳುತ್ತಾರೆ.
ಇದೀಗ ಹೆಮ್ಮೆಯ ವಿಚಾರ ಏನಪ್ಪಾ ಅಂದರೇ ನಮ್ಮ ಕನ್ನಡದ ಅಪ್ಪಟ ನಿರ್ದೇಶಕರೊಬ್ಬರು ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಬಾಲಿವುಡ್‌ನಲ್ಲಿ ಸಿನಿಮಾ ನಿರ್ದೇಶನ ಮಾಡಲು ಸಜ್ಜಾಗಿರುವ ಆ ಸ್ಟಾರ್ ಡೈರೆಕ್ಟರ್ ಯಾರು ಮುಂದೆ ಒದಿ.

'ಅಯೋಗ್ಯ' ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ
ನಿರ್ದೇಶಕ ಮಹೇಶ್ ಕುಮಾರ್ ಸುಮಾರು 10 ವರ್ಷ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 'ಅಯೋಗ್ಯ' ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಹೊಂದಿದ್ದಾರೆ. ಮೊದಲ ಚಿತ್ರದಲ್ಲೇ ಮಹೇಶ್ ಕುಮಾರ್ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದಾರೆ. 'ಅಯೋಗ್ಯ' ಕೊಟ್ಟ ಯಶಸ್ಸು ನಿರ್ದೇಶಕ ಮಹೇಶ್‌ನ್ನು ಉತ್ತಮ ನಿರ್ದೇಶಕ ಎಂದು ಸಾಬೀತು ಮಾಡಲಾಯಿತು. ಬಳಿಕ ಮದಗಜ ಚಿತ್ರದಲ್ಲಿ, ನಟ ಶ್ರೀ ಮುರುಳಿಗೆ ಆ್ಯಕ್ಷನ್ ಹೇಳಿದ್ದಾರೆ.

ಬಾಲಿವುಡ್‌ಗೆ ಹಾರಲು ಸಜ್ಜಾದ್ರು ನಿರ್ದೇಶಕ
ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರು ಸಂಪಾದಿಸಿರುವ ನಿರ್ದೇಶಕ ಮಹೇಶ್ ಅವರು ಇದೀಗ ಬಾಲಿವುಡ್ ನಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆ. ಬಾಲಿವುಡ್‌ನ ಹೆಸರಾಂತ ನಿರ್ಮಾಣ ಸಂಸ್ಥೆ ಮಹೇಶ್ ಅವರಿಗೆ ಕರೆಯನ್ನು ,ಮಾಡಿ ಈ ಆಫರ್ ನೀಡಿದೆಯಂತೆ. ಅಲ್ಲದೇ ಮಹೇಶ್ ಅವರ ಟ್ಯಾಲೆಂಟ್‌ಗೆ ಪ್ರಸಂಶೆ ವ್ಯಕ್ತ ಪಡಿಸಿರುವ ಅವರು ಆದಷ್ಟು ಬೇಗ ಬಾಲಿವುಡ್ ಪ್ರಾಜೆಕ್ಟ್‌ನ್ನು ಕೈಗೆತ್ತಿಕೊಳ್ಳಲು ತಿಳಿಸಿದ್ದಾರೆ. ಇದಕ್ಕಾಗಿ ನಿರ್ದೇಶಕ ಮಹೇಶ್ ಕುಮಾರ್ ಕಥೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ಗೆ ಒಪ್ಪುವಂತ ಕಥೆ ತಯಾರು ಮಾಡಿ ನಿರ್ದೇಶನಕ್ಕೆ ಇಳಿಯಲಿದ್ದಾರೆ ನಿರ್ದೇಶಕ ಮಹೇಶ್.

ಮಾಸ್ ಎಂಟರ್‌ಟೈನರ್ ಕಥೆಗೆ ಮಹೇಶ್ ಸಿದ್ಧತೆ
ಇನ್ನು ಮಹೇಶ್ ಬಾಲಿವುಡ್‌ನಲ್ಲಿ ಮತ್ತೊಂದು ಜಾಕ್ ಪಾಟ್ ಹೊಡೆದಿದ್ದಾರೆ. ಮೂಲಗಳ ಪ್ರಕಾರ ಮಹೇಶ್ ಅವರು ಸ್ಟಾರ್ ನಟನೊಬ್ಬನಿಗೆ ನಿರ್ದೇಶನ ಮಾಡಲಿದ್ದಾರಂತೆ. ನಿರ್ಮಾಣ ಸಂಸ್ಥೆ ಇದಕ್ಕಾಗಿಯೇ ಕೊಂಚ ಸಮಯ ತೆಗೆದುಕೊಂಡು ಉತ್ತಮ ಕಥೆ ತಯಾರು ಮಾಡಲು ಹೇಳಿದ್ದಾರಂತೆ. ಮಾಸ್ ಎಂಟರ್‌ಟೈನರ್ ಕಥೆ ಇರಲಿ ಎಂದು ಮಹೇಶ್‌ಗೆ ನಿರ್ಮಾಪಕರು ತಿಳಿಸಿದ್ದಾರೆ. ಇದಕ್ಕೆ ತಕ್ಕಂತ ಕಥೆಯನ್ನು ನಿರ್ದೇಶಕ ಮಹೇಶ್ ತಯಾರು ಮಾಡುತ್ತಿದ್ದಾರೆ.
Recommended Video


ಹೇಗಿರಲಿದೆ ಮಹೇಶ್ ಸಿನಿಮಾ ಗೊತ್ತಾ
ಎಲ್ಲವೂ ಅಂದುಕೊಂಡಂತೇ ಆದರೇ ಮುಂದಿನ ಮೂರು ತಿಂಗಳಲ್ಲಿ ಮಹೇಶ್ ಎಲ್ಲವೂ ತಯಾರಿ ಮಾಡಿಕೊಂಡು ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿಯೇ ಮದಗಜ ಸಿನಿಮಾ ಬಳಿಕಾ ನಿರ್ದೇಶಕ ಮಹೇಶ್ ಇನ್ಯಾವ ಸಿನಿಮಾವನ್ನು ಕನ್ನಡ ಸಿಸಿನಿಮಾ ಒಪ್ಪಿಕೊಂಡಿಲ್ಲಾ ಎಂಬ ಮಾತು ಕೇಳಿ ಬರುತ್ತಿದೆ. ಇದು ಅಲ್ಲದೇ ಮತ್ತೊಂದು ಮೂಲಗಳ ಪ್ರಕಾರ ಕನ್ನಡದ ಇಬ್ಬರು ಸ್ಟಾರ್ ನಟರಿಗೆ ಮಹೇಶ್ ನಿರ್ದೇಶನ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎಂಬುವ ಸುದ್ದಿ ಕೂಡ ಇದೆ.
"ಈ ಸುದ್ದಿ ನಿಜ ಆಗಲಿ ಎನ್ನುವುದು ಎಲ್ಲರ ಆಶಯ... ಆದರೆ ಸ್ವಲ್ಪ ಸಾವಧಾನ.. ಇಂದು ಏಪ್ರಿಲ್ 1 ಆಗಿದ್ದರಿಂದ... ಏಪ್ರಿಲ್ ಫೂಲ್‌ಗಾಗಿ ಈ ಸ್ಟೋರಿ... ತಾರೆಯರ ಒಪ್ಪಿಗೆಯ ಮೇರೆಗೆ ಈ ಸುದ್ದಿ ಪ್ರಕಟ ಮಾಡಲಾಗಿದೆ."


Click it and Unblock the Notifications











