ಟಗರು 2 ಪಕ್ಕ ಎಂದ ಸೂರಿ: ಆದರೆ ಹೀರೋ ಶಿವಣ್ಣನಾ.. ಡಾಲಿನಾ...? ಗಾಂಧಿನಗರದ ಗಾಸಿಪ್ ಇದು!

ಟಗರು... ಯಾರಿಗೆ ತಾನೇ ಈ ಸಿನಿಮಾ ನೆನಪಿಲ್ಲ ಹೇಳಿ. 2017ರಲ್ಲಿ ಬಿಡುಗಡೆಯಾಗಿ ಇಂದಿಗೂ ತನ್ನ ಖದರ್ ಉಳಿಸಿಕೊಂಡಿರುವ ಟಗರು ಸಿನಿಮಾದ ಸೀಕ್ವೆಲ್ ಬರುತ್ತಿದೆ ಎಂಬುದು ಶಿವಣ್ಣನ ಹುಟ್ಟುಹಬ್ಬದಂದು ಘೋಷಣೆಗೊಂಡಿದೆ. ಆದರೆ, ಈಗ ಮತ್ತೆ ಟಗರು 2 ಭಾರೀ ಚರ್ಚೆಯಲ್ಲಿದೆ. ಗಾಂಧಿನಗರದ ಗಲ್ಲಿಗಳಲ್ಲಿ ಗಾಸಿಪ್ ಒಂದು ಓಡಾಡುತ್ತಿದೆ.

2017ರಲ್ಲಿ ತೆರೆಗೆ ಅಪ್ಪಳಿಸಿದ್ದ ಟಗರು ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು. ಆದರೂ, ಟಗರುನಲ್ಲಿ ನೆಗೆಟಿವ್ ಶೆಟ್‌ನಲ್ಲಿ ನಟಿಸಿದ್ದ ನಟ ಧನಂಜಯ್ ಡಾಲಿ ಪಾತ್ರದಲ್ಲಿ ಅಬ್ಬರಿಸಿದ್ದರು. ಅಂದಿನಿಂದ ಧನಂಜಯ್ ನಟ ರಾಕ್ಷಸ ಎಂಬ ಬಿರುದು ಪಡೆದು ಡಾಲಿ ಧನಂಜಯ್ ಆಗಿ ಬದಲಾದರು. ಅಷ್ಟರ ಮಟ್ಟಿಗೆ ಡಾಲಿ ಪಾತ್ರ ಜನರಿಗೆ ಹುಚ್ಚು ಹಿಡಿಸಿತ್ತು. ಸಿನಿಮಾದಲ್ಲಿನ ಒಂದೊಂದು ಪಾತ್ರಗಳು ತೆರೆಯ ಮೇಲೆ ತಮ್ಮದೇ ಛಾಪು ಮೂಡಿಸಿದ್ದವು. ಆ ಸಿನಿಮಾದ ಸೀಕ್ವೆಲ್‌ಗಾಗಿ ಜನ ಕಾಯುತ್ತಿದ್ದರು.

tagaru-2-movie-latest-updates

ಎಸ್... ಜನರ ನಿರೀಕ್ಷೆಯಂತೆ ಟಗರು 2 ಸಿನಿಮಾ ಸೆಟ್ಟೆರುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಲಹರಿ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟಗರು ಚಿತ್ರದ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಈ ಪೋಸ್ಟರ್ ಮೇಲೆ 'ಅಟೆನ್ಷನ್ ಹೀ ಈಸ್ ಕಮಿಂಗ್ ಬ್ಯಾಕ್' ಎಂದು ಬರೆದುಕೊಂಡಿದೆ. ಪೋಸ್ಟರ್‌ನಲ್ಲಿ ಶಿವರಾಜ್ ಕುಮಾರ್ ಅವರ ಟಗರು ಸಿನಿಮಾದ ಝಲಕ್ ಇದೆ.

ಇನ್ನು, ಇತ್ತೀಚೆಗೆ ನಟ ಡಾಲಿ ಧನಂಜಯ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಟಗರು ನಿರ್ದೇಶಕ ಸೂರಿ ಶುಭಾಶಯ ಹೇಳಿದ್ದಾರೆ. ಇದರ ಜೊತೆಗೆ ಒಂದು ವಿಷಯವನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ... ಟಗರು 2 ಸಿನಿಮಾದಲ್ಲಿ ಧನಂಜಯ್ ಇರುತ್ತಾರೆ ಎಂದು. ಅದು ಬಂದು ಹೋಗೋ ಚಿಕ್ಕ ಪಾತ್ರವಲ್ಲ ಎಂಬುದು ಗಮನಿಸಬೇಕಾಗಿರೋದು.

tagaru-2-movie-latest-updates

ಟಗರು 2 ನಲ್ಲಿ ಹೀರೋ ಯಾರು...?

ಈಗ ಸಿನಿಮಾ ಘೋಷಣೆಯಾಗಿದೆ. ಡಾಲಿ ಧನಂಜಯ್, ಶಿವರಾಜ್‌ಕುಮಾರ್ ಇಬ್ಬರು ಇರೋದು ಪಕ್ಕ ಆಗಿದೆ. ಆದರೆ, ಇದರಲ್ಲಿ ಹೀರೋ ಯಾರು ಎಂಬುದೇ ಸಿನಿಪ್ರಿಯರನ್ನು ಕಾಡುತ್ತಿರುವ ಪ್ರಶ್ನೆ. ಮತ್ತೆ ಶಿವಣ್ಣನ ಜೊತೆ ಧನಂಜಯ್ ನಟಿಸುತ್ತಾರಾ? ಹೀರೋ ಯಾರು, ವಿಲನ್ ಯಾರು..ಎಂಬುದಕ್ಕೆ ಡೈರೆಕ್ಟರ್ ಸೂರಿನೇ ಉತ್ತರ ನೀಡಬೇಕು.

ಈಗಾಗಲೇ ಟಗರು ನಿರ್ದೇಶಕ ಸೂರಿ ಮುಂದಿನ ಸೀಕ್ವೆಲ್‌ಗಾಗಿ ಸ್ಕ್ರೀಪ್ಟ್ ರೆಡಿ ಮಾಡಿಕೊಂಡಿದ್ದಾರೆ ಎಂಬ ವದಂತಿ ಗಾಂಧಿನಗರದ ಗಲ್ಲಿಗಳಲ್ಲಿ ಓಡಾಡುತ್ತಿದೆ. ಒಟ್ಟಾರೆ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಸ್ಥಾನ ಪಡೆದಿರುವ ಟಗರು 2 ಆದಷ್ಟು ಬೇಗ ಸೆಟ್ಟೇರಿ ಸಿನಿಪ್ರೇಮಿಗಳನ್ನು ರಂಜಿಸಲಿ ಎಂಬುದು ಅಭಿಮಾನಿಗಳ ಆಶಯ.

More from Filmibeat

English summary
Tagaru-2 movie latest updates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X