ಇಬ್ಬರು ಸ್ಟಾರ್‌ ನಟರು ಬೇಡವೆಂದ 'ಸ್ಪಿರಿಟ್'ಗೆ ಪ್ರಭಾಸ್ ನಾಯಕ?

'ಅರ್ಜುನ್ ರೆಡ್ಡಿ' ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆ ಪ್ರಭಾಸ್ ಹೊಸ ಸಿನಿಮಾ ಆರಂಭಿಸಿದ್ದಾರೆ. ಇದು ಪ್ರಭಾಸ್ ಅವರ 25ನೇ ಚಿತ್ರವಾಗಿದ್ದು, ಸಿನಿಮಾಗೆ 'ಸ್ಪಿರಿಟ್' ಎಂದು ಹೆಸರಿಡಲಾಗಿದೆ. ಅಕ್ಟೋಬರ್ 7 ರಂದು ಸ್ಪಿರಿಟ್ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಿದ್ದು, ಈಗಿರುವ ಕಮಿಟ್‌ಮೆಂಟ್‌ಗಳನ್ನು ಮುಗಿಸಿದ ನಂತರ ಶೂಟಿಂಗ್ ಶುರು ಮಾಡಲಿದ್ದಾರೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡ ಸೇರಿದಂತೆ ಜಪಾನಿಸ್, ಚೈನಿಸ್ ಹಾಗೂ ಕೊರಿಯನ್ ಸೇರಿ ಒಟ್ಟು 8 ಭಾಷೆಯಲ್ಲಿ ರಿಲೀಸ್ ಆಗಲಿದೆ.

'ಅರ್ಜುನ್ ರೆಡ್ಡಿ' ಸಿನಿಮಾ ಆದ್ಮೇಲೆ ಅದೇ ಚಿತ್ರವನ್ನು ಹಿಂದಿಯಲ್ಲಿ 'ಕಬೀರ್ ಸಿಂಗ್' ಹೆಸರಿನಲ್ಲಿ ರಿಮೇಕ್ ಮಾಡಿದ್ದರು ಸಂದೀಪ್ ರೆಡ್ಡಿ ವಂಗಾ. ತೆಲುಗು ಹಾಗೂ ಹಿಂದಿ ಎರಡರಲ್ಲೂ ಹಿಟ್ ಬಾರಿಸಿದರು. ಬಾಲಿವುಡ್‌ನಲ್ಲಿ ಸಕ್ಸಸ್ ಆಗುತ್ತಿದ್ದಂತೆ ಬಿಟೌನ್‌ನ ದೊಡ್ಡ ಪ್ರೊಡಕ್ಷನ್‌ಗಳಿಂದ ಸಂದೀಪ್‌ಗೆ ಅವಕಾಶ ಬರತೊಡಗಿದವು. ಟಿ-ಸಿರೀಸ್ ಮಾಲೀಕ ಭೂಷಣ್ ಕುಮಾರ್ ಜೊತೆ ಸೇರಿ ಈಗ ಪ್ರಭಾಸ್‌ಗೆ 'ಸ್ಪಿರಿಟ್' ಮಾಡಲು ಹೊರಟಿದ್ದಾರೆ.

ಪ್ರಭಾಸ್-ಸಂದೀಪ್ ರೆಡ್ಡಿ ವಂಗಾ ಮತ್ತು ಭೂಷಣ್ ಕುಮಾರ್ ಜೋಡಿಯಲ್ಲಿ 'ಸ್ಪಿರಿಟ್' ಪ್ರಕಟಿಸದ ನಂತರ ಈ ಸ್ಕ್ರಿಪ್ಟ್‌ ಬಗ್ಗೆ ಈಗ ಕೆಲವು ವದಂತಿಗಳು ಹಬ್ಬಿವೆ. ಪ್ರಭಾಸ್‌ಗೂ ಮುಂಚೆ ಈ ಸ್ಕ್ರಿಪ್ಟ್‌ ಇಬ್ಬರು ಸ್ಟಾರ್‌ ನಟರು ರಿಜೆಕ್ಟ್ ಮಾಡಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ. ಮುಂದೆ ಓದಿ...

ಮಹೇಶ್ ಬಾಬು ಬೇಡ ಎಂದಿದ್ದರಂತೆ

ಮಹೇಶ್ ಬಾಬು ಬೇಡ ಎಂದಿದ್ದರಂತೆ

ಅರ್ಜುನ್ ರೆಡ್ಡಿ ನಂತರ ಸಂದೀಪ್ ರೆಡ್ಡಿ ವಂಗಾ ಸ್ಪಿರಿಟ್ ಸ್ಕ್ರಿಪ್ಟ್ ಮಾಡಿಕೊಂಡಿದ್ದರು. ಅಂದ್ಹಾಗೆ ಈ ಚಿತ್ರದಲ್ಲಿ ನಾಯಕ ಪೊಲೀಸ್ ಆಫೀಸರ್. ಪೊಲೀಸ್ ಅಧಿಕಾರಿ ಪಾತ್ರಕ್ಕೆ ಯಾವ ನಟ ಸೂಕ್ತ ಎಂದು ಯೋಚಿಸಿದ ನಿರ್ದೇಶಕ ಸಂದೀಪ್ ಮೊದಲು ಹೋಗಿದ್ದು ನಟ ಮಹೇಶ್ ಬಾಬು ಬಳಿ. ಸ್ಕ್ರಿಪ್ಟ್ ಕೇಳಿದ ಪ್ರಿನ್ಸ್ ಕಾರಣಾಂತರಗಳಿಂದ ಈ ಚಿತ್ರ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದರು ಎಂಬ ಸುದ್ದಿ ಚಾಲ್ತಿಯಲ್ಲಿದೆ.

ರಾಮ್ ಚರಣ್ ಮನೆಗೆ ಹೋದ ಸ್ಪಿರಿಟ್

ರಾಮ್ ಚರಣ್ ಮನೆಗೆ ಹೋದ ಸ್ಪಿರಿಟ್

ಮಹೇಶ್ ಬಾಬು ಬೇಡ ಎಂದ ಮೇಲೆ ಮೆಗಾಪವರ್ ಸ್ಟಾರ್ ರಾಮ್ ಚರಣ್ ತೇಜ ಮನೆ ಬಾಗಿಲಿಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹೋದರು. ಮೆಗಾಪುತ್ರನಿಗೂ 'ಸ್ಪಿರಿಟ್' ಕಥೆ ಹೇಳಿದರಂತೆ. ಆದರೆ, ರಾಮ್ ಚರಣ್ ಸಹ ಈ ಸಿನಿಮಾ ಮಾಡಲು ಮನಸ್ಸು ಮಾಡಲಿಲ್ಲ. ಅಲ್ಲಿಗೆ ಇಬ್ಬರು ಸ್ಟಾರ್ ನಟರು ಈ ಸ್ಕ್ರಿಪ್ಟ್ ಬೇಡ ಎಂದು ನಿರಾಕರಿಸಿದರು.

ಇಬ್ಬರು ಬೇಡ ಎಂದ ಕಥೆಗೆ ಪ್ರಭಾಸ್ ನಾಯಕ

ಇಬ್ಬರು ಬೇಡ ಎಂದ ಕಥೆಗೆ ಪ್ರಭಾಸ್ ನಾಯಕ

ಮಹೇಶ್ ಬಾಬು, ರಾಮ್ ಚರಣ್ ತೇಜ ಇಬ್ಬರು ಮಾಡಲ್ಲ ಎಂದು ಚಿತ್ರಕ್ಕೆ ಪ್ರಭಾಸ್ ನಾಯಕರಾಗಿದ್ದಾರೆ ಎಂದು ಟಾಲಿವುಡ್‌ನಲ್ಲಿ ಸದ್ದು ಜೋರಾಗಿದೆ. 'ಸ್ಪಿರಿಟ್' ಎಂಬ ಹೆಸರಿನಲ್ಲಿ ಪ್ರಭಾಸ್ ನಾಯಕನಾಗಿ ಮಾಡುವಷ್ಟು ಧಮ್ ಇಲ್ಲ, ಟೈಟಲ್ ಬದಲಿಸಬೇಕು ಎಂಬ ಕೂಗು ಸಹ ಅಭಿಮಾನಿ ಬಳಗದಲ್ಲಿ ಚರ್ಚೆಯಾಗುತ್ತಿದೆ.

ಅದು ಬೇರೆ, ಇದು ಬೇರೆ

ಅದು ಬೇರೆ, ಇದು ಬೇರೆ

ಸಂದೀಪ್ ರೆಡ್ಡಿ ವಂಗಾ ಅವರು ಮಹೇಶ್ ಬಾಬು ಮತ್ತು ರಾಮ್ ಚರಣ್ ಅವರಿಗೆ ಕಥೆ ಹೇಳಿರುವುದು ನಿಜ. ಆದರೆ, ಅದು ಸ್ಪಿರಿಟ್ ಸ್ಕ್ರಿಪ್ಟ್ ಅಲ್ಲ. ಈ ಕಥೆಯನ್ನು ಎಕ್ಸ್‌ಕ್ಲೂಸಿವ್ ಆಗಿ ಪ್ರಭಾಸ್‌ ಅವರಿಗಾಗಿಯೇ ಬರೆದಿರುವುದು ಎಂದು ಸಂದೀಪ್ ಆಪ್ತರು ಹೇಳಿರುವುದಾಗಿ ವರದಿಯಾಗಿದೆ. ಮಹೇಶ್ ಮತ್ತು ರಾಮ್ ಚರಣ್ ಇಬ್ಬರಿಗೂ ಪ್ರತ್ಯೇಕ ಕಥೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಪ್ರಭಾಸ್ ಕಮಿಟ್‌ಮೆಂಟ್‌ಗಳು

ಪ್ರಭಾಸ್ ಕಮಿಟ್‌ಮೆಂಟ್‌ಗಳು

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಪ್ರಭಾಸ್ 'ಸಲಾರ್' ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಸಹ ನಡೆಯುತ್ತಿದ್ದು, ಎರಡ್ಮೂರು ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇದರ ಜೊತೆ ಜೊತೆಗೆ ಹಿಂದಿಯಲ್ಲಿ ಓಂ ರಾವತ್ ನಿರ್ದೇಶಿಸುತ್ತಿರುವ ಪೌರಾಣಿಕ ಚಿತ್ರ ಆದಿಪುರುಷ್ ಚಿತ್ರೀಕರಣ ಸಹ ಆಗ್ತಿದೆ. ಈ ಎರಡು ಚಿತ್ರಗಳನ್ನು ಏಕಕಾಲದಲ್ಲಿ ಸಮಯ ಬಿಡುವು ಮಾಡಿಕೊಂಡು ಚಿತ್ರೀಕರಣ ಮಾಡ್ತಿದ್ದಾರೆ ಪ್ರಭಾಸ್. ನಾಗ್ ಅಶ್ವಿನ್ ಜೊತೆ ಸಿನಿಮಾವೊಂದಕ್ಕೆ ಕಾಲ್‌ಶೀಟ್ ಕೊಟ್ಟಿರುವ ಪ್ರಭಾಸ್, ಈ ಎರಡು ಚಿತ್ರ ಮುಗಿಸಿ ಶುರು ಮಾಡಲಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅಭಿನಯಿಸುತ್ತಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ರಾಧೆಶ್ಯಾಮ್ ಚಿತ್ರ 2022ರ ಜನವರಿ 13ಕ್ಕೆ ತೆರೆಗೆ ಬರಲಿದೆ.

More from Filmibeat

English summary
Director Sandeep reddy vanga was Narrated 'Spirit' story to ram charan and Mahesh babu first. both are rejected this story said report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X