'ಪರಶುರಾಮ', 'ದೇವತಾ ಮನುಷ್ಯ' ಅಲ್ಲಾ....ಹೊಸ ಟೈಟಲ್ ಬಂತು.!
ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಸೆಟ್ಟೇರಲಿರುವ ಎರಡನೇ ಸಿನಿಮಾ ಭಾರಿ ಕುತೂಹಲ ಮೂಡಿಸಿದ್ದು, ಸದ್ಯ ಟೈಟಲ್ ಏನಿರಬಹುದು ಎಂಬುದು ಚರ್ಚೆಯಾಗ್ತಿದೆ.
ಸದ್ಯದ ಮಟ್ಟಿಗೆ ಪುನೀತ್ ಅವರ ಹೊಸ ಸಿನಿಮಾಗೆ ಡಾ ರಾಜ್ ಕುಮಾರ್ ಅವರ ಚಿತ್ರದ ಹೆಸರು ಇಡಬಹುದು ಎನ್ನಲಾಗುತ್ತಿದೆ. ಆದ್ರೆ, ಯಾವ ಸಿನಿಮಾದ ಹೆಸರು ಎಂಬುದು ಪಕ್ಕಾ ಆಗಿರಲಿಲ್ಲ.
ನವೆಂಬರ್ 1 ರಂದು ಸಂತೋಷ್ ನಿರ್ದೇಶನದ ಹೊಸ ಸಿನಿಮಾದ ಟೈಟಲ್ ನ್ನ ಅಭಿಮಾನಿಗಳಿಂದಲೇ ಬಹಿರಂಗಪಡಿಸಲಿದ್ದಾರೆ. ಆದ್ರೆ, ಅದಕ್ಕೂ ಮುಂಚೆ ಕೆಲವು ಹೆಸರು ಪ್ರಸ್ತಾಪವಾಗುತ್ತಿದೆ.

1989ರಲ್ಲಿ ತೆರೆಕಂಡಿದ್ದ 'ಪರಶುರಾಮ', 1988ರಲ್ಲಿ ಬಿಡುಗಡೆಯಾಗಿದ್ದ 'ದೇವತಾ ಮನುಷ್ಯ' ಚಿತ್ರಗಳ ಹೆಸರನ್ನ ಪುನೀತ್ ಸಿನಿಮಾಗೆ ಮತ್ತೆ ಮರು ಬಳಸಲಾಗುವುದು ಎನ್ನಲಾಗಿತ್ತು. ಇದೀಗ, ಇನ್ನೊಂದು ಸಿನಿಮಾದ ಹೆಸರು ಚರ್ಚೆಯಾಗ್ತಿದೆ. 1985ರಲ್ಲಿ ರಿಲೀಸ್ ಆಗಿದ್ದ 'ಜ್ವಾಲಾಮುಖಿ' ಶೀರ್ಷಕೆಯನ್ನ ಪುನೀತ್-ಸಂತೋಷ್ ಸಿನಿಮಾ ಹೆಸರಿಡಲಾಗುತ್ತಿದೆಯಂತೆ.
ಇದನ್ನ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ 1ನೇ ತಾರೀಖು ಘೋಷಣೆ ಮಾಡಲಾಗುತ್ತಿದೆಯಂತೆ. ಒಟ್ನಲ್ಲಿ ಒಂದಂತೂ ಸತ್ಯ. ಪುನೀತ್ ಹೊಸ ಸಿನಿಮಾಗೆ ಅಣ್ಣಾವ್ರ ಸಿನಿಮಾದ ಟೈಟಲ್ ಇಡುವುದು ಬಹುತೇಕ ಖಚಿತ.


Click it and Unblock the Notifications











