For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟಿ ಜೊತೆ ಕ್ರಿಕೆಟಿಗ ಶುಭಮನ್‌ ಗಿಲ್ ಡೇಟಿಂಗ್: ವಿಡಿಯೋ ವೈರಲ್

  |

  ಬಾಲಿವುಡ್ ಹಾಗೂ ಕ್ರಿಕೆಟ್ ನಡುವೆ ದಶಕಗಳ ಸಂಬಂಧ. ಮನ್ಸೂರ್ ಅಲಿ ಖಾನ್ ಪಟೌಡಿ ಕಾಲದಿಂದಲೂ ಕ್ರಿಕೆಟ್ ಆಟಗಾರರು ಬಾಲಿವುಡ್ ನಟಿಯರನ್ನು ಮದುವೆಯಾಗುವುದು ನಡೆಯುತ್ತಲೇ ಬಂದಿದೆ.

  ಕ್ರಿಕೆಟ್ ಆಟಗಾರರು ಬಾಲಿವುಡ್ ನಟಿಯರನ್ನು ಡೇಟ್ ಮಾಡುವುದು ಮೊದಲಿನಿಂದಲೂ ನಡೆದು ಬಂದಿದೆ. ಹಲವು ಕ್ರಿಕೆಟಿಗರು ನಟಿಯರನ್ನು ವಿವಾಹವಾಗಿ ನೆಮ್ಮದಿಯ ಜೀವನ ಸಹ ನಡೆಸುತ್ತಿದ್ದಾರೆ.

  'ಹೊಯ್ಸಳ' ಸೆಟ್ ಗೆ ಖ್ಯಾತ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಭೇಟಿ'ಹೊಯ್ಸಳ' ಸೆಟ್ ಗೆ ಖ್ಯಾತ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಭೇಟಿ

  ಕ್ರಿಕೆಟಿಗರು, ನಟಿಯರನ್ನು ಡೇಟ್ ಮಾಡುವ ಪದ್ಧತಿ ಇತ್ತೀಚೆಗೆ ತುಸು ಹೆಚ್ಚಾಗಿದೆ. ಅದರಲ್ಲಿಯೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಯುವಕರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಇನ್ನೂ 25 ದಾಟದ ಯುವಕರು ಸಹ ತಂಡದಲ್ಲಿದ್ದಾರೆ. ಇವರುಗಳ ಹೆಸರುಗಳೊಂದಿಗೆ ಬಾಲಿವುಡ್ ನಟಿಯರ ಹೆಸರು ಥಳುಕು ಹಾಕಿಕೊಂಡಿದೆ.

  ಭಾರತ ಕ್ರಿಕೆಟ್ ತಂಡದ ಭರವಸೆಯ ಓಪನರ್ ಶುಭಮನ್ ಗಿಲ್‌ ಜೊತೆ ಇದೀಗ ಖ್ಯಾತ ಬಾಲಿವುಡ್ ಯುವನಟಿಯ ಹೆಸರು ಕೇಳಿಬರುತ್ತಿದೆ. ಖ್ಯಾತ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಮೊಮ್ಮಗಳು, ನಟ ಸೈಫ್ ಅಲಿ ಖಾನ್ ಪುತ್ರಿ ನಟಿ ಸಾರಾ ಅಲಿ ಖಾನ್ ಹಾಗೂ ಶುಭಮನ್‌ ಗಿಲ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಪೂರಕವಾಗಿ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಜೋಡಿ

  ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಜೋಡಿ

  ಟಿಕ್‌ಟಾಕ್‌ ಸೆಲೆಬ್ರಿಟಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದು, ವಿಡಿಯೋದಲ್ಲಿ ರೆಸ್ಟೊರೆಂಟ್ ಒಂದರಲ್ಲಿ ಸಾರಾ ಅಲಿ ಖಾನ್ ಹಾಗೂ ಶುಭ್‌ಮನ್ ಗಿಲ್ ಅವರುಗಳು ಹೋಟೆಲ್‌ನಲ್ಲಿ ಕೂತಿದ್ದಾರೆ. ದುಬೈನಲ್ಲಿ ಈ ಜೋಡಿ ರೆಸ್ಟೊರೆಂಟ್‌ನಲ್ಲಿ ಭೇಟಿಯಾಗಿದೆ ಎಂದು ಹೇಳಲಾಗುತ್ತಿದೆ.

  ಶುಭ್‌ಮನ್ ಗಿಲ್ ಗೆ ಇನ್ನೂ 22 ವರ್ಷವಷ್ಟೆ ವಯಸ್ಸು

  ಶುಭ್‌ಮನ್ ಗಿಲ್ ಗೆ ಇನ್ನೂ 22 ವರ್ಷವಷ್ಟೆ ವಯಸ್ಸು

  ಶುಭ್‌ಮನ್ ಗಿಲ್ ಗೆ ಇನ್ನೂ 22 ವರ್ಷವಷ್ಟೆ ವಯಸ್ಸು, ಸಾರಾ ಅಲಿ ಖಾನ್ ವಯಸ್ಸು 27. ಆದರೆ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ. ಇದಕ್ಕೆ ಮುನ್ನ ಶುಭ್‌ಮನ್ ಗಿಲ್ ಹೆಸರು ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಅಲಿ ಖಾನ್ ಜೊತೆ ಕೇಳಿ ಬಂದಿತ್ತು. ಆದರೆ ಅದು ಖಾತ್ರಿಯಾಗಿರಲಿಲ್ಲ. ಇನ್ನು ನಟಿ ಸಾರಾ ಅಲಿ ಖಾನ್ ಹೆಸರು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆ ಕೇಳಿ ಬಂದಿತ್ತು. ಆದರೆ ಈ ಜೋಡಿ ಬ್ರೇಕ್‌ ಅಪ್ ಮಾಡಿಕೊಂಡ ಬಳಿಕ ಸುಶಾಂತ್ ರಿಯಾ ಚಕ್ರವರ್ತಿ ಜೊತೆ ಪ್ರೀತಿಗೆ ಬಿದ್ದಿದ್ದರು.

  ರಿಷಬ್ ಪಂತ್-ಊರ್ವಶಿ ರೌಟೆಲ್ಲಾ

  ರಿಷಬ್ ಪಂತ್-ಊರ್ವಶಿ ರೌಟೆಲ್ಲಾ

  ಶುಭ್‌ಮನ್ ಗಿಲ್‌ ಮಾತ್ರವೇ ಅಲ್ಲದೆ ಮತ್ತೊಬ್ಬ ಯುವ ಕ್ರಿಕೆಟಿಗ ರಿಷಬ್ ಪಂತ್ ಹೆಸರು ನಟಿ ಊರ್ವಶಿ ರೌಟೆಲಾ ಜೊತೆ ಕೇಳಿ ಬರುತ್ತಿದೆ. ಊರ್ವಶಿ ಹಾಗೂ ರಿಷಬ್ ಪಂತ್ ಪರಸ್ಪರ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಊರ್ವಶಿ ರೌಟೆಲಾ ಹೋದಲ್ಲೆಲ್ಲ ಅಭಿಮಾನಿಗಳು ರಿಷಬ್ ಪಂತ್ ಹೆಸರು ಹೇಳುತ್ತಾರೆ. ರಿಷಬ್ ಪಂತ್‌ ಹೋದ ಕಡೆ ಊರ್ವಶಿ ಹೆಸರು ಕಿರುಚುತ್ತಾರೆ ಅಭಿಮಾನಿಗಳು. ಇಬ್ಬರೂ ಸಹ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ಹಲವು ಜೋಡಿಗಳಿವೆ

  ಹಲವು ಜೋಡಿಗಳಿವೆ

  ಕ್ರಿಕೆಟಿಗರು, ನಟಿಯರನ್ನು ವಿವಾಹವಾಗಿ ಸುಖ ಸಂಸಾರ ನಡೆಸಿರುವ ಸಾಲು-ಸಾಲು ಉದಾಹರಣೆಗಳು ಇವೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಮನ್ಸೂರ್ ಅಲಿ ಖಾನ್ ಪಟೌಡಿ-ಶರ್ಮಿಳಾ ಟ್ಯಾಗೂರ್, ಯುವರಾಜ್ ಸಿಂಗ್ ನಟಿ ಹೇಜಲ್ ಕೀಚ್, ಮೊಹಮ್ಮದ್ ಅಜರುದ್ದೀನ್ ನಟಿ ಸಂಗೀತ ಬಿಜಲಾನಿ, ಜಹೀರ್ ಖಾನ್ ಸಾಗರಿಕಾ, ಹಾರ್ದಿಕ್ ಪಾಂಡ್ಯಾ ನತಾಶಾ, ಮೋನಿನ್ ಖಾನ್-ರೀನಾ ರಾಯ್, ಹರ್ಬಜನ್ ಸಿಂಗ್-ಗೀತಾ ಬಸ್ರಾ ಇನ್ನೂ ಕೆಲವರಿದ್ದಾರೆ. ಇದೀಗ ಕ್ರಿಕೆಟಿಗ ಕೆ.ಎಲ್.ರಾಹುಲ್, ಸುನಿಲ್ ಶೆಟ್ಟಿ ಪುತ್ರಿ, ನಟಿ ಆಥಿಯಾ ಶೆಟ್ಟಿಯನ್ನು ವಿವಾಹವಾಗಲಿದ್ದಾರೆ.

  English summary
  Actress Sara Ali Khan and cricketer Shubman Gill dating each other. A video of them both sitting in a restaurant went viral.
  Tuesday, August 30, 2022, 16:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X