2 ಕೋಟಿ ವೆಚ್ಚದ 'ಸರ್ಕಾರಿ ಶಾಲೆ ಕಾಸರಗೂಡು' ಗಳಿಸಿದ್ದು 25 ಕೋಟಿ.!
Recommended Video

ಕನ್ನಡದಲ್ಲಿ ಈಗ ಒಳ್ಳೆಯ ಸಿನಿಮಾಗಳು ಬರ್ತಿವೆ. ಅದರಲ್ಲೂ ಹೊಸಬರ ಸಿನಿಮಾಗಳಂತೂ ಕಥೆ, ಗಳಿಕೆ ವಿಚಾರದಲ್ಲಿ ಸ್ಟಾರ್ ಗಳನ್ನ ಮೀರಿಸುತ್ತಿದ್ದಾರೆ. 'ಒಂದು ಮೊಟ್ಟೆಯ ಕಥೆ', 'ಗುಳ್ಟು', 'ಒಂದಲ್ಲಾ ಎರಡಲ್ಲಾ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಅಂತಹ ಚಿತ್ರಗಳು ಜನಮನ ಗೆದ್ದಿದೆ.
ರಿಷಬ್ ಶೆಟ್ಟಿ ನಿರ್ದೇಶನ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು' ಸಿನಿಮಾ ಈಗ ಗಳಿಕೆಯಲ್ಲಿ ದಾಖಲೆ ಮಾಡಿದೆ. ಯಶಸ್ವಿ 50 ದಿನ ಪೂರೈಸಿ ಮುನ್ನುಗ್ಗುತ್ತಿರುವ ಈ ಸಿನಿಮಾ ಸುಮಾರು 25 ಕೋಟಿ ಕಲೆಕ್ಷನ್ ಮಾಡಿದೆಯಂತೆ.
ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆ ಎನ್ನಬಹುದು. ಯಾಕಂದ್ರೆ, ಸ್ಯಾಂಡಲ್ ವುಡ್ ಸಿನಿಮಾಗಳು ನಿಖರವಾದ ಬಜೆಟ್ ಮತ್ತು ಕಲೆಕ್ಷನ್ ಗುಟ್ಟು ಬಿಟ್ಟು ಕೊಡುವುದಿಲ್ಲ. ಅಂತಹದರಲ್ಲಿ ಕಡಿಮೆ ಬಜೆಟ್ ನಲ್ಲಿ ತಯಾರಾಗಿದ್ದ ಈ ಸಿನಿಮಾ 25 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ.

ಅಂದ್ಹಾಗೆ, ಈ ಸಿನಿಮಾ ಕೇವಲ 2 ಕೋಟಿ ವೆಚ್ಚದಲ್ಲಿ ಮೂಡಿ ಬಂದಿತ್ತಂತೆ. ಇನ್ನು ಭಾರತವಷ್ಟೇ ಅಲ್ಲದೇ ಗಡಿಯಾಚೆಯೂ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಸಿನಿಮಾ ಅಮೆರಿಕಾದಲ್ಲೂ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಎನಿಸಿಕೊಂಡಿದೆಯಂತೆ. ವರದಿಗಳ ಪ್ರಕಾರ ಅಮೆರಿಕಾದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1 ಕೋಟಿ ಬಿಸಿನೆಸ್ ಮಾಡಿದೆಯಂತೆ.

ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅನಂತ್ ನಾಗ್, ಮಾ.ರಂಜನ್, ಮಾ.ಸಂಪತ್, ಮಾ.ಮಹೇಂದ್ರ, ಪ್ರಮೋದ್ ಶೆಟ್ಟಿ, ಪ್ರಕಾಶ್ ತೂಮಿನಾಡ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಆಗಸ್ಟ್ 23 ರಂದು ಬಿಡುಗಡೆಯಾಗಿತ್ತು.


Click it and Unblock the Notifications











