James satellite rights : ಸ್ಯಾಟಲೈಟ್ ರೈಟ್ಸ್ ವಿಚಾರದಲ್ಲಿ 'ಕೆಜಿಎಫ್' ದಾಖಲೆಯನ್ನು ಹಿಂದಿಕ್ಕಿದ 'ಜೇಮ್ಸ್'

'ಜೇಮ್ಸ್' ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇವತ್ತು ಹಬ್ಬದಂತೆ ಜೇಮ್ಸ್ ಸಿನಿಮಾವನ್ನು ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ 5 ಗಂಟೆಯಿಂದಲೆ. 'ಜೇಮ್ಸ್' ಸಿನಿಮಾದ ಶೋಗಳು ಆರಂಭವಾಗಿವೆ.

Recommended Video

Appu Fans | ಜೇಮ್ಸ್ ನೋಡೋದಕ್ಕಿನ್ನ ನಮಗೆ ಇದೇ ಮುಖ್ಯ ಸರ್, ಅಪ್ಪು ಹೇಳಿಕೊಟ್ಟಿದ್ದು ಇದನ್ನೇ | Puneeth Rajkumar

ಇವತ್ತಿನ ದಿನ ಪುನೀತ್ ಹುಟ್ಟುಹಬ್ಬ ಕೂಡ ಹೌದು ಜೊತೆಗೆ ಅವರ ಸಿನಿಮಾ ಕೂಡ ತೆರೆಕಂಡಿದೆ. ಅಪ್ಪು ನಮ್ಮೊಂದಿಗೆ ಇಲ್ಲ ಅನ್ನೋ ಬೇಸರದ ನಡುವಲ್ಲೂ ಪುನೀತ್‌ರನ್ನು ಜೀವಂತವಾಗಿರಿಸಲು ಅದೆಷ್ಟೋ ತಯಾರಿಗಳನ್ನು ಫ್ಯಾನ್ಸ್ ಇಂದು ಮಾಡಿಕೊಂಡಿದ್ದಾರೆ.

'ಜೇಮ್ಸ್' ಸಿನಿಮಾ ಜೊತೆಗೆ ಅಪ್ಪು ಹುಟ್ಟುಹಬ್ಬದ ನಡುವೆ ಇದೀಗ ಮತ್ತೊಂದು ಖುಷಿ ವಿಚಾರ ಹೊರಬಂದಿದೆ. 'ಜೇಮ್ಸ್' ಚಿತ್ರ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದ್ದು, ಇದೀಗ 'ಜೇಮ್ಸ್' ಚಿತ್ರದ ಸ್ಯಾಟಲೈಟ್ ರೈಟ್ಸ್ ಕೂಡ ಹಿಂದಿನ ರೆಕಾರ್ಡ್ಸ್‌ಗಳನ್ನು ಬ್ರೇಕ್ ಮಾಡಿದೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ.

 ಸಿನಿಮಾದ ಬಗ್ಗೆ ಮತ್ತೊಂದು ಖುಷಿ ವಿಚಾರ

ಸಿನಿಮಾದ ಬಗ್ಗೆ ಮತ್ತೊಂದು ಖುಷಿ ವಿಚಾರ

'ಜೇಮ್ಸ್' ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಾಕಷ್ಟು ರೆಕಾರ್ಡ್ಸ್‌ಗಳನ್ನು ಬ್ರೇಕ್ ಮಾಡಿಕೊಂಡೆ ಬಂದಿದೆ. ಚಿತ್ರತಂಡ ಕೂಡ ಈ ಸಿನಿಮಾದ ಯಶಸ್ಸಿಗಾಗಿ ಸಾಕಷ್ಟು ಎಫರ್ಟ್ ಹಾಕಿದೆ. ಇದೀಗ ಸಿನಿಮಾದ ಬಗ್ಗೆ ಮತ್ತೊಂದು ಖುಷಿ ವಿಚಾರ ಕೇಳಿ ಬರುತ್ತಿದೆ. ಅದುವೇ ಜೇಮ್ಸ್ ಸಿನಿಮಾ ಸ್ಯಾಟಲೈಟ್ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್ ಆಗಿರೋದು. ಹೌದು ಮೂಲಗಳ ಪ್ರಕಾರ ಚೇತನ್ ಕುಮಾರ್ ನಿರ್ದೇಶನದ 'ಜೇಮ್ಸ್' ಚಿತ್ರ 13.80 ಕೋಟಿಗೆ ಮಾರಾಟವಾಗಿದೆಯಂತೆ. ಈ ಮೂಲಕ 'ಜೇಮ್ಸ್' ಯಶ್ ನಟನೆಯ 'ಕೆಜಿಎಫ್' ದಾಖಲೆಯನ್ನು ಪುಡಿ ಪುಡಿ ಮಾಡಿದೆ.

 'ಜೇಮ್ಸ್' ಸಿನಿಮಾದ ಟಿವಿ ರೈಟ್ಸ್ 13.80 ಕೋಟಿಗೆ ಮಾರಾಟ?

'ಜೇಮ್ಸ್' ಸಿನಿಮಾದ ಟಿವಿ ರೈಟ್ಸ್ 13.80 ಕೋಟಿಗೆ ಮಾರಾಟ?

ಸಿನಿಮಾರಂಗದಲ್ಲಿ ಒಂದು ಸಿನಿಮಾದ ರೆಕಾರ್ಡ್‌ ಮತ್ತೊಂದು ಸಿನಿಮಾ ಬ್ರೇಕ್ ಮಾಡೋದು ಸಹಜ. ಇದೀಗ 'ಜೇಮ್ಸ್' ಚಿತ್ರ ಕೆಜಿಎಫ್ ಸಿನಿಮಾದ ದಾಖಲೆಯನ್ನು ಬ್ರೇಕ್ ಮಾಡಿದೆ. ಕೆಜಿಎಫ್ ಸಿನಿಮಾ 6 ಕೋಟಿಗೆ ಸ್ಯಾಟಲೈಟ್ ರೈಟ್ಸ್‌ ಮಾರಾಟವಾಗಿತ್ತು. ಆದರೇ ಇದೀಗ ಪುನೀತ್ ಅಭಿನಯದ 'ಜೇಮ್ಸ್' ಸಿನಿಮಾದ ಟಿವಿ ರೈಟ್ಸ್ 13.80 ಕೋಟಿಗೆ ಮಾರಾಟವಾಗಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ಮೂಲಕ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಜೇಮ್ಸ್ ಬ್ರೇಕ್ ಮಾಡಿ ಮುನ್ನುಗುತ್ತಿದೆ. ಈ ಸುದ್ದಿ ತಿಳಿದು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

2.70 ಕೋಟಿ ಕೊಟ್ಟು 'ಜೇಮ್ಸ್' ಟಿವಿ ರೈಟ್ಸ್ ಖರೀದಿಸಿದ ಸೋನಿ

2.70 ಕೋಟಿ ಕೊಟ್ಟು 'ಜೇಮ್ಸ್' ಟಿವಿ ರೈಟ್ಸ್ ಖರೀದಿಸಿದ ಸೋನಿ

ಇನ್ನು ಮೂಲಗಳ ಪ್ರಕಾರ ಮೂಲಗಳ ಪ್ರಕಾರ ವಿವಿಧ ಭಾಷೆಗಳು ಸೇರಿ 'ಜೇಮ್ಸ್' ಚಿತ್ರ 80 ಕೋಟಿಗೆ ಟಿವಿ ರೈಟ್ಸ್ ಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಸೋನಿ ಡಿಜಿಟಲ್​ಗೆ 40 ಕೋಟಿ, ಕನ್ನಡ ಸುವರ್ಣ ವಾಹಿನಿಗೆ 13.80 ಕೋಟಿ ಮತ್ತು ತೆಲುಗು ಮಾ ಟಿವಿಗೆ ಸುಮಾರು 5.70 ಕೋಟಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಹಾಗೇ ತಮಿಳಿನಲ್ಲಿ ಸನ್ ನೆಟ್ ವರ್ಕ್​ಗೆ 5.17 ಕೋಟಿ, ಮಲೆಯಾಳಂ 1.2 ಕೋಟಿ, ಭೋಜಪುರಿ 5.50 ಕೋಟಿ, ಹಿಂದಿ ಸೋನಿಗೆ 2.70 ಕೋಟಿಗೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದ್ದು, 'ಜೇಮ್ಸ್' ಚಿತ್ರದ ಮತ್ತೊಂದು ದಾಖಲೆಗೆ ಫ್ಯಾನ್ಸ ಫಿದಾ ಆಗಿದ್ದಾರೆ.

 ’ಜೇಮ್ಸ್’ ಚಿತ್ರಕ್ಕೆ ಕಿಶೋರ್ ಪಾತಿಕೊಂಡ ಬಂಡವಾಳ

’ಜೇಮ್ಸ್’ ಚಿತ್ರಕ್ಕೆ ಕಿಶೋರ್ ಪಾತಿಕೊಂಡ ಬಂಡವಾಳ

'ಜೇಮ್ಸ್' ಚಿತ್ರವನ್ನು 'ಬಹದ್ದೂರ್', 'ಭರ್ಜರಿ', 'ಭರಾಟೆ' ಚಿತ್ರಗಳ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. 'ಜೇಮ್ಸ್' ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. 'ಜೇಮ್ಸ್' ಚಿತ್ರದಲ್ಲಿ ಕಲಾವಿದರ ದೊಡ್ಡ ದಂಡೇ ಇದೆ. ರಂಗಾಯಣ ರಘು, ಅನು ಪ್ರಭಾಕರ್ ಮುಖರ್ಜಿ, ಕಾಮಿಡಿ ಕಿಲಾಡಿಗಳು ನಯನಾ, ಹಂಸಾ ಪ್ರತಾಪ್, ಕಾವ್ಯಾ ಶಾಸ್ತ್ರೀ, ಸಮೀಕ್ಷಾ, ಹರ್ಷ, ಶೈನಾ ಶೆಟ್ಟಿ, ತೆಲುಗು ನಟ ಶ್ರೀಕಾಂತ್ ಮುಂತಾದವರು 'ಜೇಮ್ಸ್' ಚಿತ್ರದಲ್ಲಿ ನಟಿಸಿದ್ದಾರೆ. 'ಜೇಮ್ಸ್' ಚಿತ್ರಕ್ಕೆ ಕಿಶೋರ್ ಪಾತಿಕೊಂಡ ಬಂಡವಾಳ ಹೂಡಿದ್ದಾರೆ.

More from Filmibeat

English summary
Puneeth Rajkumar James film satellite rights sold for more than 80 crores in all languages.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X