61ನೇ ವರ್ಷದಲ್ಲಿ ಸದ್ದಿಲ್ಲದೇ ಗೌರಿ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ್ರಾ ಆಮಿರ್ ಖಾನ್ ? ಅಪರೂಪದ ಉಂಗುರದ ಅಸಲಿ ಕಥೆಯೇನು?

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್‌ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು.

ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಬ್ರೇಕಪ್ಪು.. ಲವ್ವು.. ಡವ್ವು.. ಕಡಿಮೆ ಇಲ್ಲ. ಒಬ್ಬರ ನಂತರ ಒಬ್ಬರನ್ನು ಮದುವೆಯಾಗುವುದು ಆ ನಂತರ ಅವರಿಗೂ ಕೂಡ ಗುಡ್ ಬೈ ಹೇಳಿ ಹೊರನಡೆಯುವುದು ಹೊಸದೇನೂ ಅಲ್ಲ. ಇಲ್ಲಿ ಹಲವರಿಗೆ ಎಲ್ಲವೂ ಬಟ್ಟೆ ಬದಲಿಸಿದಷ್ಟೇ ಸುಲಭ.

Secret Engagement The 812-Hour Mystery Behind Aamir Khan s Rare Gift to Gauri Spratt

ಹೀಗಾಗಿ ಇವರ ವ್ಯೆಯಕ್ತಿಕ ಬದುಕಿನ ಮೇಲೆ ಹಲವರ ಕಣ್ಣಿರುತ್ತೆ. ಇವರ ಸೋಶಿಯಲ್ ಮೀಡಿಯಾ ಮೇಲೆ ಒಂದು ವರ್ಗ ನಿಗಾ ವಹಿಸಿರುತ್ತೆ. ಇದಕ್ಕೆ ಇನ್ನೊಂದು ಉದಾಹರಣೆಯಂತೆ ಸದ್ಯ ಆಮಿರ್ ಖಾನ್ ಸದ್ದಿಲ್ಲದೇ ತಮ್ಮ 61ನೇ ವರ್ಷದಲ್ಲಿ ತಮ್ಮ ಪ್ರೇಯಸಿ ಗೌರಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ಧಾರೆ ಎನ್ನುವ ಸುದ್ದಿ ಸದ್ಯ ಉತ್ತರದಿಂದ ದಕ್ಷಿಣದವರೆಗೆ ಕೇಳಿ ಬರುತ್ತಿದೆ.

ಹೌದು, ಅಸಲಿಗೆ ಬಾಲಿವುಡ್‌ನ ಪ್ರಖ್ಯಾತ ಸಿನೆಮಾ ವಿಮರ್ಶಕ ಕೋಮಲ್ ನಾಹ್ತಾ ಅವರ ಮಗನ ಮದುವೆ ಆರತಕ್ಷತೆ ಸಮಾರಂಭದಲ್ಲಿ ಗೌರಿ ಜೊತೆ ಆಮಿರ್ ಖಾನ್ ಭಾಗವಹಿಸಿದ್ದರು. ನವ ಜೋಡಿಗೆ ಶುಭ ಕೋರಿದರು. ಇದೇ ಸಮಯದಲ್ಲಿ ಅಲ್ಲಿದ್ದವರ ಕಣ್ಮನ ಸೆಳೆದಿದ್ದು ಗೌರಿ ಧರಿಸಿದ್ದ ಉಂಗುರ. ಕ್ಯಾಮೆರಾಗಳ ಕಣ್ಣು ಅವರ ಕೈಬೆರಳುಗಳ ಮೇಲೆಯೇ ಇತ್ತು.

ಈ ಉಂಗುರವನ್ನು ಕಂಡು ಸದ್ಯ ಹಲವರು ಆಮಿರ್ ಖಾನ್ ಮತ್ತು ಗೌರಿ ನಿಶ್ಚಿತಾರ್ಥ ಸಮಾರಂಭ ಸದ್ದಿಲ್ಲದೇ ನಡೆದಿದೆ ಎಂಬ ಸುದ್ದಿಯನ್ನು ಹಬ್ಬಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆಯನ್ನು ಮಾಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಗೌರಿಯ ಮೇಲೆ ತಮಗೆ ಇರುವ ಪ್ರೀತಿಯನ್ನು ಆಮಿರ್ ಖಾನ್ ವ್ಯಕ್ತಪಡಿಸಿದ್ದಾರೆ. ದುಬಾರಿ ಉಡುಗೊರೆಯನ್ನು ನೀಡಿದ್ಧಾರೆ. ಈ ಉಂಗುರಗಳ ಹಿಂದಿನ ಕಥೆ ಕೇಳಿದರೆ ನೀವು ನಿಬ್ಬೇರಗಾಗುವುದು ಗ್ಯಾರಂಟಿ.

ಉಂಗುರಗಳ ವಿಶೇಷತೆಯೇನು..?

ಗೌರಿಗೆ ಆಮಿರ್ ಖಾನ್ ಎರಡು ಉಂಗುರು ನೀಡಿದ್ದಾರೆ. ಆದರೆ ಈ ಉಂಗುರ ಸಾಮಾನ್ಯವಾದದ್ದಲ್ಲ. ಅಪರೂಪದ ರಿಂಗ್ ಗಳಿವು. ಇದರಲ್ಲಿನ ಒಂದು ಉಂಗುರ ತಯಾರಿಸಲು ಬರೋಬ್ಬರಿ 812 ಗಂಟೆಗಳ ಕಾಲ ಕುಶಲಕರ್ಮಿಗಳು ಶ್ರಮಿಸಿದ್ದಾರೆ ಎಂದರೆ ನೀವು ನಂಬಲೇಬೇಕು.

Secret Engagement The 812-Hour Mystery Behind Aamir Khan s Rare Gift to Gauri Spratt

ಹೌದು, ಆಮಿರ್ ಖಾನ್ ನೀಡಿದ ಎರಡು ಉಂಗುರಗಳಲ್ಲಿ ಒಂದು ಉಂಗುರಿನ ಹೆಸರು ರೂಬಿ.
ಮಡಗಾಸ್ಕರ್‌ನಿಂದ ತರಿಸಲಾದ ನೈಸರ್ಗಿಕ 'ರೂಬಿ' ಉಂಗುರ ಇದು. ಜಗತ್ತಿನಲ್ಲಿ ಸಿಗುವ ಮಾಣಿಕ್ಯಗಳಲ್ಲಿ ಕೇವಲ 0.1% ರಷ್ಟು ಮಾತ್ರ ಇಷ್ಟು ಶುದ್ಧ ಮತ್ತು ಗಾಢ ಬಣ್ಣವನ್ನು ಹೊಂದಿರುತ್ತವೆ. ಇದನ್ನು ರೂಪಿಸಲು 812 ಗಂಟೆಗಳ ಕಾಲ ತಜ್ಞ ಕುಶಲಕರ್ಮಿಗಳು ಕೆಲಸ ಮಾಡಿದ್ದಾರೆ.

ಇನ್ನು ಎರಡನೇ ಉಂಗುರ ಬ್ರೆಜಿಲ್‌ನ 'ಅಕ್ವಾಮರೀನ್' ಎಂಬ ಅಪರೂಪದ ರತ್ನದ್ದು. ಇದರ ಸುತ್ತಲೂ 40 ನೈಸರ್ಗಿಕ ವಜ್ರಗಳನ್ನು ಅಳವಡಿಸಲಾಗಿದ್ದು, ಇದನ್ನು ತಯಾರಿಸಲು 363 ಗಂಟೆ ಹಿಡಿದಿರುವುದು ವಿಶೇಷ.

ಇನ್ನೂ ಈ ಎರಡು ಉಂಗುರಗಳನ್ನು 'ಕ್ಯೂವೀನ್' ಎಂಬ ಐಷಾರಾಮಿ ಆಭರಣ ಬ್ರಾಂಡ್ ಅಡಿಯಲ್ಲಿ ತಯಾರಿಸಲಾಗಿದೆ. ವಿಶೇಷವೆಂದರೆ, ಆಮಿರ್ ಖಾನ್ ಈ ಸಂಸ್ಥೆಯ ಹೂಡಿಕೆದಾರ ಕೂಡ ಹೌದು. ಮಾರುಕಟ್ಟೆಗೆ ಬರುವ ಮೊದಲೇ ಈ ವಿಶಿಷ್ಟ ಉಂಗುರಗಳನ್ನು ತಮ್ಮ ಗೆಳತಿಗಾಗಿ ಮಾಡಿಸಿದ್ದಾರೆ ಆಮಿರ್ ಖಾನ್.

ಈ ಮೂಲಕ ಗೌರಿಗೆ ಜಗತ್ತಿನಲ್ಲೇ ಅತ್ಯಂತ ಅಪರೂಪದ ಮತ್ತು ಬೆಲೆಬಾಳುವ ವಸ್ತುವನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಸದ್ಯ ಗೌರಿಯ ಕೈಯಲ್ಲಿನ ಈ ಎರಡು ಉಂಗುರ ನಿಶ್ಚಿತಾರ್ಥದ ವದಂತಿಗೆ ಕಾರಣವಾಗಿದೆ‌. ಈ ಹಿನ್ನೆಲೆ ಸ್ಪಷ್ಟೀಕರಣ ನೀಡುವ ಪ್ರಯತ್ನವನ್ನು ಆಮಿರ್ ಖಾನ್ ಆಪ್ತ ಮೂಲ ಮಾಡಿದ್ದು ನಿಶ್ಚಿತಾರ್ಥಕ್ಕಿಂತ ಹೆಚ್ಚಾಗಿ ಅದೊಂದು ಪ್ರೀತಿಯ ಸಂಕೇತ ಮಾತ್ರ ಎಂದು ಹೇಳಿದೆ. ಇನ್ನೂ ಈ ಹಿಂದೆ ಮೂರನೇ ಮದುವೆಯ ಬಗ್ಗೆ ಪ್ರಶ್ನೆ ಮಾಡಿದಾಗ ಆಮಿರ್ ತಾವು ಈಗಾಗಲೇ ಮನಸಿನಲ್ಲಿ ಗೌರಿಯನ್ನು ಮದುವೆಯಾಗಿರುವುದಾಗಿ ಹೇಳಿದ್ದರು. ಕಾನೂನುಬದ್ಧ ದಾಖಲೆಗಳಿಗಿಂತ ಭಾವನಾತ್ಮಕ ಸಂಬಂಧ ಮುಖ್ಯ ಎಂದಿದ್ದರು.

More from Filmibeat

English summary
812 hours of work, 40 natural diamonds, and two of the world's rarest gemstones. Inside Aamir Khan’s breathtaking gift to Gauri Spratt that has everyone asking: Are they finally engaged? Get the exclusive details on the QWEEN rings.
Read more about: aamir khan bollywood rumors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X