For Quick Alerts
  ALLOW NOTIFICATIONS  
  For Daily Alerts

  ಎನ್‌ಟಿಆರ್- ಕೊರಟಾಲ ಶಿವ ಚಿತ್ರದಲ್ಲಿ ಆ ಕಾಲದ ಲೇಡಿ ಸೂಪರ್ ಸ್ಟಾರ್?

  |

  'RRR' ಸಿನಿಮಾ ಸೂಪರ್ ಸಕ್ಸಸ್‌ ಬೆನ್ನಲ್ಲೇ ಎನ್‌ಟಿಆರ್ ಹೊಸ ಚಿತ್ರಕ್ಕೆ ವೇದಿಕೆ ಸಿದ್ಧವಾಗ್ತಿದೆ. ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ತಾರಕ್ ನಟಿಸುವುದು ಪಕ್ಕಾ ಆಗಿದೆ. 'ಆಚಾರ್ಯ' ಸಿನಿಮಾ ಸೋಲಿನ ಹಿನ್ನೆಲೆಯಲ್ಲಿ ಸಿಕ್ಕಾಪಟ್ಟೆ ಯೋಚಿಸಿ ಒಂದೊಂದು ಹೆಜ್ಜೆ ಇಡುತ್ತಿದ್ದಾರೆ ನಿರ್ದೇಶಕರು. ಇದೀಗ ಚಿತ್ರಕ್ಕೆ ಅಂದಕಾಲತ್ತಿಲ್ ಲೇಡಿ ಸೂಪರ್ ಸ್ಟಾರ್ ವಿಜಯಶಾಂತಿ ಆಯ್ಕೆ ಆಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

  ಎನ್‌ಟಿಆರ್-ಕೊರಟಾಲ ಶಿವ ಕಾಂಬಿನೇಷನ್‌ ಸಿನಿಮಾ ಪ್ರೀಪ್ರೊಡಕ್ಷನ್ ವರ್ಕ್‌ ಭರದಿಂದ ಸಾಗ್ತಿದೆ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣಕ್ಕೆ ಸಿದ್ಧತೆ ನಡೀತಿದೆ. ಇದರ ಬೆನ್ನಲ್ಲೇ ಕಲಾವಿದರ ಆಯ್ಕೆಯೂ ಶುರುವಾಗಿದೆ. ಖಳನಾಯಕನ ಪಾತ್ರಕ್ಕೆ ಜಗಪತಿ ಬಾಬು ಎಂಟ್ರಿ ಕೊಡುತ್ತಿದ್ದಾರೆ. ಮತ್ತೊಂದು ಪವರ್‌ಫುಲ್ ರೋಲ್‌ನಲ್ಲಿ ವಿಜಯಶಾಂತಿ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ಒಂದ್ಕಾಲದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ತೆಲುಗಿನ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿದ ವಿಜಯ ಶಾಂತಿ ಆ ನಂತರ ಚಿತ್ರರಂಗದಿಂದ ದೂರಾಗಿ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಜಬರ್‌ದಸ್ತ್ ರೋಲ್‌ನಲ್ಲಿ ನಟಿಸಿದ್ದರು.

  ದಿಲ್ ರಾಜು ಬಗ್ಗೆ ಯಾರೂ ಮಾತಾಡಲ್ಲ: ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದ 'ಲೈಗರ್' ವಿತರಕ!ದಿಲ್ ರಾಜು ಬಗ್ಗೆ ಯಾರೂ ಮಾತಾಡಲ್ಲ: ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದ 'ಲೈಗರ್' ವಿತರಕ!

  ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ವಿಜಯಶಾಂತಿ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲೂ ಒಂದೊಳ್ಳೆ ಪಾತ್ರಕ್ಕಾಗಿ ಮಾತುಕತೆ ನಡೀತಿದೆಯಂತೆ. 'ಸರಿಲೇರು ನೀಕೆವ್ವರು' ಚಿತ್ರದ ಪಾತ್ರ ಇಷ್ಟ ಆಗಿದ್ದಕ್ಕೆ ನಟಿಸಿದ್ದೀನಿ, ಮತ್ತೆ ಇಂತಹ ಪಾತ್ರ ಸಿಕ್ಕರೆ ಮಾತ್ರ ನಟಿಸ್ತೀನಿ ಎಂದು ಹೇಳಿದ್ದರು. ಹಾಗಾಗಿ ಕೊರಟಾಲ ಕೂಡ ಅಂತದ್ದೇ ಪಾತ್ರ ಡಿಸೈನ್ ಮಾಡಿದ್ದಾರಾ? ನೋಡಬೇಕು.

  ಎನ್‌ಟಿಆರ್ ಮುಂದಿನ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಇದು ಅವರ 30ನೇ ಸಿನಿಮಾ ಆಗಿರುವುದರಿಂದ #NTR30 ಅನ್ನುವ ಟೆಂಟಿಟೀವ್ ಟೈಟಲ್‌ನಲ್ಲಿ ಪ್ರೀ ಪ್ರೊಡಕ್ಷನ್ ವರ್ಕ್‌ ನಡೀತಿದೆ. ಇನ್ನು ನಾಯಕಿ ಪಾತ್ರಕ್ಕೂ ಹುಡುಕಾಟ ನಡೀತಿದೆ. ಸಮಂತಾ, ಜಾನ್ವಿ ಕಪೂರ್ ಹೆಸರುಗಳು ಕೇಳಿ ಬಂದಿತ್ತಾದರೂ ಆದರೆ ಇನ್ನು ಯಾರೊಬ್ಬರು ಫೈನಲ್ ಆಗಿಲ್ಲ. ಕೊರಟಾಲ ಶಿವ ನಿರ್ದೇಶನದ 'ಆಚಾರ್ಯ' ಸಿನಿಮಾ ಸೋಲು ತಾರಕ್ ಅಭಿಮಾನಿಗಳಲ್ಲಿ ಆತಂಕ ತಂದಿದೆ.

  Senior Actress Vijayashanthi Plays important Role in Ntr 30 Movie

  'ಮಿರ್ಚಿ', 'ಶ್ರೀಮಂತುಡು', 'ಜನತಾ ಗ್ಯಾರೇಜ್','ಭರತ್ ಅನೇ ನೇನು' ರೀತಿಯ ಸೆನ್ಸೇಷನಲ್‌ ಹಿಟ್ ಸಿನಿಮಾಗಳನ್ನು ಕೊರಟಾಲ ಶಿವ ಕೊಟ್ಟಿದ್ದಾರೆ. 'ಜನತಾ ಗ್ಯಾರೇಜ್' ಚಿತ್ರದಲ್ಲಿ ಸ್ವತಃ ಎನ್‌ಟಿಆರ್ ನಟಿಸಿ ಅಬ್ಬರಿಸಿದ್ದರು. ಆ ಚಿತ್ರದಲ್ಲಿ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್‌ ಹಾಗೂ ತಾರಕ್‌ನ ಒಟ್ಟಿಗೆ ತೋರಿಸಿ ನಿರ್ದೇಶಕರು ಸಕ್ಸಸ್ ಕಂಡಿದ್ದರು. ಹಾಗಾಗಿ ಕೊಂಚ ಮಟ್ಟಿಗೆ ನಿರೀಕ್ಷೆ ಇದೆ. ಎನ್‌ಟಿಆರ್‌ ಆರ್ಟ್ಸ್ ಹಾಗೂ ಯುವಸುಧಾ ಆರ್ಟ್ಸ್ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡ್ತಿದ್ದು, ತಮಿಳಿನ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಚಿತ್ರಕ್ಕಿದೆ. ಒಟ್ನಲ್ಲಿ #NTR30 ಸಿನಿಮಾ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ವಿಜಯಶಾಂತಿ ತಂಡಕ್ಕೆ ಎಂಟ್ರಿ ಕೊಟ್ಟರೆ ಮತ್ತಷ್ಟು ಬಲ ಬರುವುದು ಗ್ಯಾರೆಂಟಿ.

  English summary
  Senior Actress Vijayashanthi Plays important Role in Ntr 30 Movie. Know More
  Tuesday, September 6, 2022, 9:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X