ನನ್ನ ಗೆಳೆಯರೇ ನನ್ನನ್ನು ತಮ್ಮ ಸಿನಿಮಾಗಳಿಗೆ ತೆಗೆದುಕೊಳ್ಳಲಿಲ್ಲ: ಹಿರಿಯ ನಟಿ ನೀನಾ

ಪ್ರತಿಭೆಗೆ ಸೂಕ್ತವಾದ ಪಾತ್ರಗಳು ಸಿಗಲಿಲ್ಲ, ಉದ್ಯಮ ನಮ್ಮನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಹಲವು ನಟ-ನಟಿಯರು ಹೇಳುತ್ತಿರುವುದು ಇತ್ತೀಚೆಗೆ ಕೇಳಿಬರುತ್ತಿದೆ.

ಆದರೆ ಸುಮಾರು 40 ವರ್ಷ ಸಿನಿಮಾ ರಂಗದಲ್ಲಿದ್ದು ಹಲವಾರು ಸಿನಿಮಾಗಳಲ್ಲಿ ನಟಿಸಿದ ಮೇಲೆ ನಟಿಯೊಬ್ಬರು ''ನನಗೆ ಸಿನಿಮಾಗಳಲ್ಲಿ ಸೂಕ್ತ ಪಾತ್ರ ಸಿಗಲಿಲ್ಲ'' ಎಂದು ಬೇಸರಸಿಕೊಂಡಿದ್ದಾರೆ.

ಇತ್ತೀಚೆಗಷ್ಟೆ ಬಿಡುಗಡೆ ಆದ ಆತ್ಮಕತೆ 'ಸಚ್ ಕಹು ತೊ' ಮೂಲಕ ಸುದ್ದಿಯಲ್ಲಿರುವ ಹಿರಿಯ ನಟಿ ನೀನಾ ಗುಪ್ತಾ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿ, ''ನಮಗೆ ಸೂಕ್ತ ಅವಕಾಶಗಳು ಸಿಗಲಿಲ್ಲ, ಗೆಳೆಯರೇ ನನಗೆ ತಮ್ಮ ಸಿನಿಮಾಗಳಲ್ಲಿ ಅವಕಾಶ ಕೊಡಲಿಲ್ಲ'' ಎಂದು ಹೇಳಿದ್ದಾರೆ.

 Shabana, Deepti Got Art Movies We Got Nothing Said Neena Gupta

''ಕಲಾತ್ಮಕ ಸಿನಿಮಾಗಳ ವಿಭಾಗದಲ್ಲಿ ಶಬಾನಾ ಆಜ್ಮಿ, ಸ್ಮಿತಾ ಪಾಟೀಲ್, ದೀಪ್ತಿ ಶರ್ಮಾ ಇವರುಗಳಿಗಷ್ಟೆ ಅವಕಾಶ ನೀಡಲಾಗುತ್ತಿತ್ತು. ನನ್ನನ್ನೂ ಸೇರಿ ಇನ್ನೂ ಹಲವು ನಟಿಯರು ಪ್ರತಿಭಾವಂತರಾಗಿದ್ದರೂ ನಮಗೆ ಅವಕಾಶ ನೀಡಲಾಗುತ್ತಿರಲಿಲ್ಲ'' ಎಂದಿದ್ದಾರೆ ನೀನಾ.

''ಹಲವು ಮಂದಿ ನನ್ನ ಗೆಳೆಯರೇ ನನಗೆ ಅವರ ಸಿನಿಮಾಗಳಲ್ಲಿ ಪಾತ್ರ ನೀಡಲಿಲ್ಲ. ಶ್ಯಾಮ್ ಬೆನಗಲ್, ಗೋವಿಂದ್ ನಿಹಲಾನಿ ಇನ್ನೂ ಕೆಲವರಿಗೆ ನನ್ನ ಪರಿಚಯವಿತ್ತು. ಆದರೆ ನನ್ನನ್ನು ಅವರೆಂದೂ ತಮ್ಮ ಸಿನಿಮಾಗಳಿಗೆ ತೆಗೆದುಕೊಳ್ಳಲಿಲ್ಲ'' ಎಂದು ಈಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ ನೀನಾ.

''ಸಿನಿಮಾ ಉದ್ಯಮದಲ್ಲಿ ಅವಕಾಶಗಳನ್ನು ಹೇಗೆ 'ಗಿಟ್ಟಿಸಿಕೊಳ್ಳಬೇಕು' ಎಂಬುದು ನನಗೆ ಗೊತ್ತಿರಲಿಲ್ಲ. ಉದ್ಯಮದಲ್ಲಿ ಆಕರ್ಷಣೀಯವಾಗಿ ಹೇಗೆ ವರ್ತಿಸಬೇಕು. ಹೇಗೆ ಮಾತನಾಡಬೇಕು ಇವೆಲ್ಲವೂ ನನಗೆ ಗೊತ್ತಾಗುತ್ತಿರಲಿಲ್ಲ ಹಾಗಾಗಿಯೇ ನನಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ'' ಎಂದಿದ್ದಾರೆ ಆಕೆ.

''ನನಗೆ ಈ ಉದ್ಯಮದ ವ್ಯವಹಾರ ಅರ್ಥವಾಗುತ್ತಿರಲಿಲ್ಲ. ನಾನು ತಪ್ಪುಗಳನ್ನು ಮಾಡಿದ್ದೇನೆ. ನನ್ನ ಅಮಾಯಕತನವನ್ನು ಬಳಸಿಕೊಂಡು ಕೆಲವರು ನನ್ನ ಮೂರ್ಖಳನ್ನಾಗಿ ಮಾಡಿದ್ದಾರೆ. ನಾನು ಪೆದ್ದು ಆಗಿದ್ದೆ. ಯಾವುದೇ ಒಂದು ವಿಷಯ ಅಥವಾ ವ್ಯಕ್ತಿಯಿಂದ ಯಾವಾಗ ದೂರಾಗಬೇಕು ಎಂಬುದು ನನಗೆ ಗೊತ್ತಿರಬೇಕಿತ್ತು'' ಎಂದಿದ್ದಾರೆ ನೀನಾ.

Recommended Video

Sudha Murty ಪ್ರಕಾರ ಸಿನಿಮಾವನ್ನ ಥಿಯೇಟರ್ನಲ್ಲೇ ನೋಡ್ಬೇಕು ಯಾಕೆ ಗೊತ್ತಾ? | Oneindia Kannada

1982 ರಿಂದಲೂ ನಟಿಸುತ್ತಿರುವ ನೀನಾ ಗುಪ್ತ ಹಲವಾರು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಅಮ್ಮ್, ಅತ್ತೆಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವೆಸ್ಟ್‌ ಇಂಡೀಸ್ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್‌ ಜೊತೆಗೆ ಪ್ರೀತಿಯಲ್ಲಿದ್ದ ನೀನಾಗೆ ಮಸಾಬಾ ಹೆಸರಿನ ಹೆಣ್ಣು ಮಗಳಿದ್ದಾಳೆ. ಬಹಳ ಇತ್ತೀಚೆಗೆ 2011 ರಲ್ಲಿ ನೀನಾ ಗುಪ್ತ ವಿವೇಕ್ ಮೆಹ್ರಾ ಎಂಬುವರನ್ನು ಮದುವೆಯಾದರು.

More from Filmibeat

English summary
Bollywood actress Neena Gupta said Shabana Azmi, Deepti, Smita Patil got art movies we got nothing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X