27 ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ ಶಾರುಖ್ ಖಾನ್-ಸಲ್ಮಾನ್ ಖಾನ್

By ಫಿಲ್ಮಿಬೀಟ್ ಡೆಸ್ಕ್

ಶಾರುಖ್ ಖಾನ್-ಸಲ್ಮಾನ್ ಖಾನ್ ಒಟ್ಟಿಗೆ ಹಲವು ಬಾರಿ ಒಟ್ಟಿಗೆ ನಟಿಸಿದ್ದಾರೆ, ಇತ್ತೀಚೆಗೆ ಬಿಡುಗಡೆ ಆದ 'ಪಠಾಣ್' ಸಿನಿಮಾದಲ್ಲಿಯೂ ಒಟ್ಟಿಗೆ ನಡಿಸಿದ್ದಾರೆ, 27 ವರ್ಷಗಳ ಬಳಿಕ ಒಟ್ಟಿಗೆ ನಟಿಸುತ್ತಿದ್ದಾರೆ ಎಂದರೇನು? ಶೀರ್ಷಿಕೆ ತಪ್ಪಾಗಿದೆ ಎಂದೆನಿಸಬಹುದು ಆದರೆ ಅದು ನಿಜವಲ್ಲ!

ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಒಟ್ಟಿಗೆ ಹಲವು ಬಾರಿ ಒಂದೇ ಸಿನಿಮಾದಲ್ಲಿ ನಟಿಸಿದ್ದಾರಾದರೂ ಅವು ಅತಿಥಿ ಪಾತ್ರಗಳಷ್ಟೆ. ಇಬ್ಬರೂ ಒಟ್ಟಿಗೆ ಒಂದು ಸಿನಿಮಾದಲ್ಲಿ ಪ್ರಧಾನ ನಾಯಕ ಪಾತ್ರಗಳಲ್ಲಿ ನಟಿಸಿ ಬರೋಬ್ಬರಿ 27 ವರ್ಷಗಳಾಗಿವೆ.

27 ವರ್ಷಗಳ ಹಿಂದೆ ಅಂದರೆ 1995 ರಲ್ಲಿ ಬಿಡುಗಡೆ ಆಗಿದ್ದ ಸೂಪರ್ ಹಿಟ್ ಸಿನಿಮಾ 'ಕರಣ್ ಅರ್ಜುನ್' ನಲ್ಲಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾದ ಬಳಿಕ ಮತ್ತೆಂದೂ ಇವರಿಬ್ಬರೂ ಒಟ್ಟಿಗೆ ಒಂದು ಸಿನಿಮಾದಲ್ಲಿ ಹೀರೋಗಳಾಗಿ ನಟಿಸಿಲ್ಲ. ಆದರೆ ಈಗ ಮತ್ತೆ ಸಮಯ ಕೂಡಿಬಂದಿದೆ. ಇಬ್ಬರು ನಾಯಕರಾಗಿ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ!

ಒಟ್ಟಿಗೆ ಶಾರುಖ್-ಸಲ್ಮಾನ್ ಖಾನ್

ಒಟ್ಟಿಗೆ ಶಾರುಖ್-ಸಲ್ಮಾನ್ ಖಾನ್

ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರವನ್ನು ಅಭಿಮಾನಿಗಳು ಸಖತ್ ಎಂಜಾಯ್ ಮಾಡಿದ್ದಾರೆ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಒಟ್ಟಿಗೆ ತೆರೆಯ ಮೇಲೆ ಆಕ್ಷನ್ ಮಾಡುವುದನ್ನು ಕಂಡು ಇಬ್ಬರೂ ಸ್ಟಾರ್ ನಟರ ಅಭಿಮಾನಿಗಳು ಪುಳಕಿತಗೊಂಡಿದ್ದಾರೆ. ಹಾಗಾಗಿ ಈ ಇಬ್ಬರನ್ನೂ ಪ್ರಧಾನವಾಗಿರಿಸಿಕೊಂಡು ಆಕ್ಷನ್ ಸಿನಿಮಾ ಒಂದನ್ನು ನಿರ್ಮಾಣ ಮಾಡುವ ಯೋಜನೆಗೆ ನೀಲ ನಕ್ಷೆ ಯಶ್ ರಾಜ್ ಫಿಲಮ್ಸ್ ನಿರ್ಮಾಣ ಸಂಸ್ಥೆಯ ಕಚೇರಿಯಲ್ಲಿ ತಯಾರಾಗುತ್ತಿದೆ!

ದೊಡ್ಡ ಯೋಜನೆ ಹಾಕಿರುವ ನಿರ್ಮಾಣ ಸಂಸ್ಥೆ

ದೊಡ್ಡ ಯೋಜನೆ ಹಾಕಿರುವ ನಿರ್ಮಾಣ ಸಂಸ್ಥೆ

'ಪಠಾಣ್' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಯಶ್ ರಾಜ್ ಅವರೇ ಈಗ ಭಾರತದ ಇಬ್ಬರು ಸೂಪರ್ ಸ್ಟಾರ್‌ಗಳನ್ನು ಒಟ್ಟಿಗೆ ತಂದು ಒಂದು ಮೆಗಾ ಮಲ್ಟಿಸ್ಟಾರರ್ ಸಿನಿಮಾ ನಿರ್ಮಾಣ ಮಾಡಲು ಸಿದ್ಧರಾಗಿದ್ದಾರೆ. ಯಶ್ ರಾಜ್ ಫಿಲಮ್ಸ್‌ನಿಂದಲೇ ನಿರ್ಮಾಣಗೊಂಡಿರುವ ಸಲ್ಮಾನ್ ಖಾನ್‌ರ 'ಏಕ್ ಥಾ ಟೈಗರ್' ಸಿನಿಮಾದ ನಾಯಕ ಟೈಗರ್ ಅಥವಾ ಅವಿನಾಶ್ ಹಾಗೂ 'ಪಠಾಣ್' ಸಿನಿಮಾದ ನಾಯಕ ಪಠಾಣ್ ಅನ್ನು ಒಂದೇ ಕತೆಯೊಳಗೆ ಹಾಕಿ ಸಿನಿಮಾ ಮಾಡುವ ಯೋಜನೆಯನ್ನು ಯಶ್ ರಾಜ್ ಫಿಲಮ್ಸ್ ಮಾಡಿದೆ.

ಒಂದಾಗಲಿರುವ ಟೈಗರ್ ಹಾಗೂ ಪಠಾಣ್

ಒಂದಾಗಲಿರುವ ಟೈಗರ್ ಹಾಗೂ ಪಠಾಣ್

'ಟೈಗರ್' ಹಾಗೂ 'ಪಠಾಣ್' ಮಾದರಿಯಲ್ಲಿ ಇದೂ ಸಹ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರಲಿದ್ದು, ಸಿನಿಮಾಕ್ಕೆ ಭಾರಿ ದೊಡ್ಡ ಬಂಡವಾಳವನ್ನು ಹೂಡಲು ಯಶ್ ರಾಜ್ ಸಂಸ್ಥೆ ತಯಾರಾಗಿದೆ. 'ಪಠಾಣ್' ಸಿನಿಮಾದ ಚಿತ್ರಕತೆ ಬರೆದಿರುವ ಶ್ರೀಧರ್ ರಾಘವನ್ ಹಾಗೂ ಅಬ್ಬಾಸ್ ಟೈರ್‌ವಾಲಾ ಅವರು ಈ ಬಿಗ್ ಬಜೆಟ್‌ಗೆ ಕತೆ, ಚಿತ್ರಕತೆ ಬರೆಯಲಿದ್ದಾರೆ. ಆದರೆ ಸಿನಿಮಾವನ್ನು ನಿರ್ದೇಶನ ಯಾರು ಮಾಡಲಿದ್ದಾರೆ ಎಂಬ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕಿದೆ. 'ಪಠಾಣ್' ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರೇ ನಿರ್ದೇಶಿಸುತ್ತಾರಾ ಅಥವಾ 'ಟೈಗರ್' ಸಿನಿಮಾ ಸರಣಿಯ ಯಾವುದಾದರೂ ನಿರ್ದೇಶಕರು ನಿರ್ದೇಶನ ಮಾಡುತ್ತಾರೆಯೋ ನೋಡಬೇಕಿದೆ.

'ಟೈಗರ್ 3' ನಲ್ಲಿ ಶಾರುಖ್ ಖಾನ್

'ಟೈಗರ್ 3' ನಲ್ಲಿ ಶಾರುಖ್ ಖಾನ್

ಶಾರುಖ್ ಖಾನ್ ನಟನೆಯ ಹಲವು ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಅಂತೆಯೇ ಸಲ್ಮಾನ್ ಖಾನ್ ನಟಿಸಿರುವ ಹಲವು ಸಿನಿಮಾಗಳಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಪಠಾಣ್' ಸಿನಿಮಾದಲ್ಲಿ ಸಲ್ಮಾನ್ ಖಾನ್ ಬಂದಂತೆ, ಸಲ್ಮಾನ್ ಖಾನ್‌ರ 'ಟೈಗರ್ 3' ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದ್ದು, ಶೀಘ್ರದಲ್ಲಿಯೇ ತೆರೆಗೆ ಅಪ್ಪಳಿಸಲಿದೆ.

More from Filmibeat

English summary
Shah Rukh Khan and Salman Khan acting in one movie after 27 years. Yash Raj Films planing a huge action movie for them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X