ಶಂಕರ್ ನಿರ್ದೇಶನದಲ್ಲಿ ಶಾರುಖ್- ವಿಜಯ್ ಮಲ್ಟಿಸ್ಟಾರರ್? ಸಿನಿಮಾ ಬಜೆಟ್ ₹900 ಕೋಟಿ!

ತಮಿಳು ನಿರ್ದೇಶಕ ಶಂಕರ್ ಅದ್ಭುತ ಸಿನಿಮಾಗಳನ್ನು ಕಟ್ಟಿಕೊಟ್ಟು ಗೆದ್ದಿದ್ದಾರೆ. 'ಜೆಂಟಲ್‌ಮನ್', 'ಇಂಡಿಯನ್‌', 'ಎಂದಿರನ್' ಹೀಗೆ ಶಂಕರ್ ಕೊಟ್ಟ ಹಿಟ್ ಸಿನಿಮಾಗಳ ಪಟ್ಟಿ ದೊಡ್ಡದ್ದಿದೆ. ಈ ಅದ್ಧೂರಿ ಸಿನಿಮಾಗಳ ಸರದಾರ ಸದ್ಯ ರಾಮ್‌ಚರಣ್ ಜೊತೆ ಸಿನಿಮಾ ಮಾಡ್ತಿದ್ದಾರೆ. ಕಮಲ್ ಜೊತೆ 'ಇಂಡಿಯನ್'- 2 ಚಿತ್ರಕ್ಕೂ ಕೈ ಹಾಕಿದ್ದಾರೆ. ಶಂಕರ್ ಮಲ್ಟಿಸ್ಟಾರರ್ ಸಿನಿಮಾವೊಂದಕ್ಕೆ ಪ್ಲ್ಯಾನ್ ಮಾಡ್ತಿದ್ದಾರೆ ಎನ್ನಲಾಗ್ತಿದೆ.

ಹೌದು ಬಾಲಿವುಡ್ ಹಾಗೂ ಕಾಲಿವುಡ್ ಸೂಪರ್ ಸ್ಟಾರ್‌ಗಳನ್ನು ಸೇರಿಸಿ ಒಂದು ಹೈ ಬಜೆಟ್ ಮಲ್ಟಿಸ್ಟಾರರ್ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರಂತೆ ಶಂಕರ್. ಈ ಬಗ್ಗೆ ತೆರೆಮರೆಯಲ್ಲಿ ಕಸರತ್ತು ನಡೀತಿದೆ ಎನ್ನಲಾಗ್ತಿದೆ. ಶಂಕರ್ ನಿರ್ದೇಶನದಲ್ಲಿ ಬಾಲಿವುಡ್‌ ಬಾದ್‌ಶಾ ಶಾರುಖ್ ಹಾಗೂ ದಳಪತಿ ವಿಜಯ್ ಜೈ ಜೋಡಿಸ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಗ್ಗೆ ಕಾಲಿವುಡ್‌ನಲ್ಲೀಗ ಬಿಸಿಬಿಸಿ ಚರ್ಚೆ ನಡೀತಿದೆ.

ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿರೋದ್ರಿಂದ ಶಾರುಖ್- ವಿಜಯ್ ಇಬ್ಬರು ಒಟ್ಟಿಗೆ ನಟಿಸಿದ್ರು ಅಚ್ಚರಿ ಪಡಬೇಕಿಲ್ಲ. ಸದ್ಯ ಇಬ್ಬರು ಸೂಪರ್ ಹಿಟ್ ಸಿನಿಮಾಗಳಿಂದ ಭಾರೀ ಚರ್ಚೆಯಲ್ಲಿದ್ದಾರೆ.

ವಿಜಯ್- ಶಾರುಖ್ ಮಲ್ಟಿಸ್ಟಾರರ್?

ವಿಜಯ್- ಶಾರುಖ್ ಮಲ್ಟಿಸ್ಟಾರರ್?

ಕಮರ್ಷಿಯಲ್ ಅಂಶಗಳ ಜೊತೆಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸುವಂತಹ ಸಿನಿಮಾಗಳನ್ನು ಶಂಕರ್ ಮಾಡುತ್ತಿರುತ್ತಾರೆ. 30 ವರ್ಷಗಳ ಹಿಂದೆಯೇ ಬಾಲಿವುಡ್ ಮಂದಿ ಕೂಡ ಕಾಲಿವುಡ್ ಕಡೆ ತಿರುಗಿ ನೋಡುವಂತಹ ಸಿನಿಮಾಗಳನ್ನು ಶಂಕರ್ ಕಟ್ಟಿಕೊಟ್ಟಿದ್ದರು. ಇದೀಗ ಶಾರುಖ್- ವಿಜಯ್ ಜೊತೆ ಒಂದು ಅಂಡರ್ ವಾಟರ್ ಸೈನ್ಸ್ ಫಿಕ್ಷನ್ ಸಿನಿಮಾ ಮಾಡ್ತಾರೆ ಎನ್ನಲಾಗ್ತಿದೆ. ಇಲ್ಲ ಸದ್ಯದ ವಿದ್ಯಮಾನಗಳನ್ನು ಸೇರಿಸಿಕೊಂಡು ಒಂದು ಆಕ್ಷನ್ ಸಿನಿಮಾ ಮಾಡ್ತಾರೆ ಎನ್ನುವುದು ಕೆಲವರ ಲೆಕ್ಕಾಚಾರ.

900 ಕೋಟಿ ಬಜೆಟ್‌ ಸಿನಿಮಾ

900 ಕೋಟಿ ಬಜೆಟ್‌ ಸಿನಿಮಾ

ಶಂಕರ್‌ ಜೊತೆಗೆ ಶಾರುಖ್ ಹಾಗೂ ವಿಜಯ್ ಕೈ ಜೋಡಿಸ್ತಾರೆ ಅಂದ್ಮೇಲೆ ಸಿನಿಮಾ ಬಜೆಟ್ ಎಷ್ಟಾಗಬಹುದು ಎಂದು ಬಿಡಿಸಿ ಹೇಳಬೇಕಿಲ್ಲ. ತ್ರಿಮೂರ್ತಿಗಳು ಒಂದಾದರೆ 1000 ಕೋಟಿ ಬಂಡವಾಳ ಸುರಿಯಲು ನಿರ್ಮಾಪಕರು ಸಿದ್ಧರಿರುತ್ತಾರೆ. ಅಂದಾಜು 900 ಕೋಟಿ ಬಜೆಟ್‌ನಲ್ಲಿ ಈ ಮಲ್ಟಿಸ್ಟಾರರ್ ಸಿನಿಮಾ ನಿರ್ಮಾಣ ಆಗುತ್ತೆ ಎನ್ನಲಾಗ್ತಿದೆ. ಈ ಹಿಂದೆ ಹಿಂದಿಯ 'ತ್ರಿ ಈಡಿಯಟ್ಸ್' ಶಂಕರ್ ರೀಮೆಕ್ ಮಾಡಿದ್ದರು. ಚಿತ್ರದಲ್ಲಿ ವಿಜಯ್ ಹೀರೊ ಆಗಿ ನಟಿಸಿದ್ದರು. ತಮ್ಮದೇ 'ಮುದಲ್ವನ್' ಹಿಂದೆಗೆ ರೀಮೆಕ್ ಮಾಡಿದ್ದರು. ಇನ್ನು 2.O ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರು. ಹಾಗಾಗಿ ಶಂಕರ್‌ಗೆ ಬಾಲಿವುಡ್ ಹೊಸದೇನು ಅಲ್ಲ.

ಮಲ್ಟಿಸ್ಟಾರರ್ ಚಿತ್ರಗಳಲ್ಲಿ ಶಾರುಖ್

ಮಲ್ಟಿಸ್ಟಾರರ್ ಚಿತ್ರಗಳಲ್ಲಿ ಶಾರುಖ್

ಶಾರುಖ್ ಖಾನ್‌ಗೆ ಕೂಡ ಮಲ್ಟಿಸ್ಟಾರರ್ ಸಿನಿಮಾಗಳು ಹೊಸದಲ್ಲ. ಶೀಘ್ರದಲ್ಲೇ ಸಲ್ಮಾನ್ ಖಾನ್ ಜೊತೆ ಒಂದು ಭಾರೀ ಸಿನಿಮಾ ಪ್ಲ್ಯಾನ್ ಮಾಡ್ತಿದ್ದಾರೆ. ಈ ಹಿಂದೆ ಕಮಲ್ ಹಾಸನ್ ನಿರ್ದೇಶಿಸಿ ನಟಿಸಿದ್ದ 'ಹೇ ರಾಮ್' ಚಿತ್ರದಲ್ಲೂ ಕಿಂಗ್ ಖಾನ್ ನಟಿಸಿದ್ದರು. ಸದ್ಯ 'ಪಠಾಣ್' ಸಿನಿಮಾ ಸಕ್ಸಸ್ ಅಲೆಯಲ್ಲಿ ಶಾರುಖ್ ತೇಲುತ್ತಿದ್ದಾರೆ. ಸಿನಿಮಾ ವಿಶ್ವದಾದ್ಯಂತ 900 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. 'ಪಠಾಣ್' ನಂತರ 'ಜವಾನ್' ಚಿತ್ರದಲ್ಲಿ ಶಾರುಖ್ ನಟಿಸುತ್ತಿದ್ದಾರೆ.

2 ಸಿನಿಮಾಗಳಲ್ಲಿ ಶಂಕರ್ ಬ್ಯುಸಿ

2 ಸಿನಿಮಾಗಳಲ್ಲಿ ಶಂಕರ್ ಬ್ಯುಸಿ

ಇತ್ತೀಚಿನ ವರ್ಷಗಳಲ್ಲಿ ಶಂಕರ್ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಸದ್ಯ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ನಿರ್ದೇಶಕ ರಾಮ್‌ಚರಣ್ ಜೊತೆ ಇನ್ನು ಹೆಸರಿಡದ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ವೈಜಾಕ್‌ನಲ್ಲಿ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಜೊತೆ ಜೊತೆಗೆ 'ಇಂಡಿಯನ್'- 2 ಸಿನಿಮಾ ಮುಗಿಸುವ ಪ್ರಯತ್ನ ಕೂಡ ನಡೀತಿದೆ. ಇತ್ತ ದಳಪತಿ ವಿಜಯ್ ನಟನೆಯ 'ವಾರಿಸು' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಸದ್ಯ ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಚಿತ್ರದಲ್ಲಿ ವಿಜಯ್ ಬಣ್ಣ ಹಚ್ಚಿದ್ದಾರೆ.

More from Filmibeat

English summary
Shahrukh Khan and Thalapathy Vijay to join hands with Shankar for a multi-starrer? Shankar Planning sci-fi film with a budget close to Rs 900 crores. Knwo more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X