Salaar Vs Dunki: ಪ್ರಭಾಸ್ ವರ್ಸಸ್ ಶಾರುಖ್ ಕದನ ವಿರಾಮ: ಬಾಕ್ಸಾಫೀಸ್‌ ಫೈಟ್‌ನಿಂದ ಹಿಂದೆ ಸರಿದಿದ್ದು ಯಾರು?

ಈ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲಿ ಪ್ರಭಾಸ್ 'ಸಲಾರ್' ಹಾಗೂ ಶಾರುಖ್ ಖಾನ್ 'ಡಂಕಿ' ಸಿನಿಮಾಗಳ ರಿಲೀಸ್ ಡೇಟ್ ಘೋಷಿಸಲಾಗಿದೆ. ಎರಡೂ ಕೂಡ ದೊಡ್ಡ ಸಿನಿಮಾಗಳೇ ಆಗಿರುವುದರಿಂದ ಬಾಕ್ಸಾಫೀಸ್‌ನಲ್ಲಿ ಭಾರೀ ಕ್ಲ್ಯಾಶ್ ಏರ್ಪಡುವ ಸಾಧ್ಯತೆಯಿದೆ. ಡಿಸೆಂಬರ್ 22ಕ್ಕೆ ಎರಡೂ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡಗಳು ಘೋಷಿಸಿವೆ.

ಈ ವರ್ಷ ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಬೇಕಿದ್ದ 'ಸಲಾರ್' ಸಿನಿಮಾ ಡಿಸೆಂಬರ್ 22ಕ್ಕೆ ಪೋಸ್ಟ್‌ಪೋನ್ ಆಗಿದ್ದೇ ಇಷ್ಟೆಲ್ಲಾ ಚರ್ಚೆ ಕಾರಣವಾಗಿದೆ. ಕಳೆದ ವರ್ಷ ಬರಬೇಕಿದ್ದ 'ಸಲಾರ್' ಈ ವರ್ಷಕ್ಕೆ ಪೋಸ್ಟ್‌ಪೋನ್ ಆಗಿತ್ತು. ಆದರೆ ಗ್ರಾಫಿಕ್ಸ್ ವರ್ಕ್‌ ಚೆನ್ನಾಗಿ ಆಗಲ್ಲ ಎಂದು ಮತ್ತೆ 3 ತಿಂಗಳ ಸಿನಿಮಾ ರಿಲೀಸ್ ಮುಂದೂಡಲಾಯಿತು. ಆದರೆ ಬಹಳ ಹಿಂದೆಯೇ ಡಿಸೆಂಬರ್ 22ಕ್ಕೆ 'ಡಂಕಿ' ಸಿನಿಮಾ ರಿಲೀಸ್ ಘೋಷಿಸಿದ್ದ ಶಾರುಖ್ ಖಾನ್‌ಗೆ ಶಾಕ್ ಆಗಿದೆ.

ShahRukh Khan Dunki Postponed, Prabhass Salaar solo release on 22nd December?

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ ಈ ಚಿತ್ರವನ್ನು 2 ಭಾಗಗಳಾಗಿ ತೆರೆಗೆ ತರಲಾಗುತ್ತಿದೆ. 'KGF' ಸರಣಿಗೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರದ ಜವಾಬ್ದಾರಿ ವಹಿಸಿಕೊಂಡಿದೆ. ಬರೀ ಪೋಸ್ಟರ್ ಹಾಗೂ ಟೀಸರ್‌ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಪ್ರಭಾಸ್‌ಗೆ ಉತ್ತರ ಭಾರತದಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಾಗಿ 'ಡಂಕಿ' ಹಾಗೂ 'ಸಲಾರ್' ಸಿನಿಮಾಗಳು ಒಟ್ಟಿಗೆ ಬಂದರೆ ಯಾವುದಾದರೂ ಒಂದು ಚಿತ್ರಕ್ಕೆ ಪೆಟ್ಟು ಬೀಳುವ ಸಾಧ್ಯತೆಯಿದೆ.

ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸಿನಿಮಾ ಕೂಡ ಬಹಳ ಕುತೂಹಲ ಮೂಡಿಸಿದೆ. ಈ ವರ್ಷ ಬ್ಯಾಕ್ ಟು ಬ್ಯಾಕ್ 2 ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಕಿಂಗ್ ಖಾನ್ 'ಡಂಕಿ' ಚಿತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ಈ ಸಿನಿಮಾ ಬಗ್ಗೆಯೂ ಪ್ರೇಕ್ಷಕರಲ್ಲಿ ನಿರೀಕ್ಷೆಯಿದೆ. ಡಿಸೆಂಬರ್ 22ಕ್ಕೆ 'ಸಲಾರ್' ರಿಲೀಸ್ ಘೋಷಿಸಿದ ಬಳಿಕವೂ 'ಡಂಕಿ' ಚಿತ್ರವನ್ನು ಅದೇ ದಿನ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿತ್ತು. ಇದು ಬಾಕ್ಸಾಫೀಸ್ ಕ್ಲ್ಯಾಶ್ ಖಚಿತ ಎನ್ನುವ ಚರ್ಚೆಗೆ ವೇದಿಕೆಯಾಯಿತು.

ಸದ್ಯ 'ಡಂಕಿ' ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಆಗುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಡಿಸೆಂಬರ್ 22ರ ಬದಲು ಜನವರಿ ಅಂತ್ಯಕ್ಕೆ ಸಿನಿಮಾ ರಿಲೀಸ್ ಮಾಡಲು ಶಾರುಖ್ ಖಾನ್ ಮನಸ್ಸು ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಒಟ್ಟಿಗೆ ರಿಲೀಸ್ ಆಗುವುದರಿಂದ ಎರಡೂ ಸಿನಿಮಾಗಳಿಗೆ ತೊಂದರೆ ಆಗುತ್ತದೆ. ಹಾಗಾಗಿ ರಿಲೀಸ್ ಡೇಟ್ ಮುಂದೂಡುವ ಬಗ್ಗೆ ಚಿತ್ರತಂಡ ಆಲೋಚಿಸುತ್ತಿದೆಯಂತೆ. ಈ ವರ್ಷ ಶಾರುಖ್ ನಟನೆಯ 'ಪಠಾಣ್' ಹಾಗೂ 'ಜವಾನ್' ಸಿನಿಮಾಗಳು ಬಂದು ಗೆದ್ದಿದೆ. ಹಾಗಾಗಿ ಇಷ್ಟು ಬೇಗ ಇನ್ನೊಂದು ಸಿನಿಮಾ ಬೇಡ ಎನ್ನುವ ಕೋನದಲ್ಲೂ ಶಾರುಖ್ ಅಂಡ್ ಟೀಂ ಚರ್ಚಿಸುತ್ತಿದೆ ಎಂದು ಬಾಲಿವುಡ್ ಮೂಲಗಳು ಹೇಳುತ್ತಿವೆ.

ಮತ್ತೊಮ್ಮೆ 'ಸಲಾರ್' ಮುಂದೂಡಲಾಗುತ್ತದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಈಗಾಗಲೇ 2 ಬಾರಿ 'ಸಲಾರ್' ರಿಲೀಸ್ ಡೇಟ್ ಬದಲಾಯಿಸಿರುವುದರಿಂದ ಅಭಿಮಾನಿಗಳು ರೋಸಿ ಹೋಗಿದ್ದಾರೆ. ಹಾಗಾಗಿ ಡಿಸೆಂಬರ್ 22ಕ್ಕೆ 'ಸಲಾರ್' ಪ್ರಭಾಸ್ ಎಂಟ್ರಿ ಕನ್ಫರ್ಮ್‌ ಎನ್ನುವ ಮಾತುಗಳು ಕೇಳಿಬರ್ತಿದೆ. ಹಾಗಾಗಿ ಕಿಂಗ್ ಖಾನ್ ನಟನೆಯ 'ಡಂಕಿ' ರಿಲೀಸ್ ಡೇಟ್ ಮುಂದಕ್ಕೆ ಹೋಗುವುದು ಬಹುತೇಕ ಖಚಿತ ಎನ್ನುವ ವಾದವೂ ಇದೆ.

ಬಾಲಿವುಡ್‌ನಲ್ಲಿ ಇನ್ನು 'ಪಠಾಣ್', 'ಜವಾನ್' ಫೀವರ್ ಕಮ್ಮಿ ಆಗಿಲ್ಲ. 'ಜವಾನ್' ಸಿನಿಮಾ ಇನ್ನು ಓಟಿಟಿಗೂ ಬಂದಿಲ್ಲ. ನವೆಂಬರ್‌ನಲ್ಲಿ ಓಟಿಟಿಗೆ ಬರುವ ಸಾಧ್ಯತೆಯಿದೆ. ಹಾಗಾಗಿ 'ಡಂಕಿ' ಸಿನಿಮಾ ಮುಂದಕ್ಕೆ ಹೋಗುವುದು ಖಚಿತ ಎನ್ನುವ ಊಹಾಪೋಹ ಶುರುವಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡೀತಿದ್ದು ಒಂದು ವೇಳೆ ಡಿಸೆಂಬರ್ 22ಕ್ಕೆ ಸಿನಿಮಾ ಬರುವಂತಿದ್ದರೆ ಮತ್ತೊಮ್ಮೆ ರಿಲೀಸ್ ಡೇಟ್ ಖಚಿತಪಡಿಸುತ್ತಿದ್ದರು. ಆದರೆ ಆ ರೀತಿ ಮಾಡಲಿಲ್ಲ.

ಸದ್ಯ 'ಡಂಕಿ' ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದ್ದು ಟೀಸರ್ ಸಮೇತ ಹೊಸ ರಿಲೀಸ್ ಡೇಟ್ ಹೊರಬೀಳುತ್ತದೆ ಎನ್ನುವ ನಿರೀಕ್ಷೆಯಿದೆ. ಡಿಸೆಂಬರ್ 22ಕ್ಕೆ 'ಸಲಾರ್' ರಿಲೀಸ್ ಎನ್ನುತ್ತಿದ್ದಂತೆ ಕಿಂಗ್‌ ಖಾನ್ ಫ್ಯಾನ್ಸ್ ಶಾಕ್ ಆಗಿದ್ದರು. ಇದೇ ಕಾರಣಕ್ಕೆ 'ಸಲಾರ್' ಚಿತ್ರವನ್ನು ಟ್ರೋಲ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಡಂಕಿ ಚಿತ್ರವನ್ನು ಪ್ರಭಾಸ್ ಫ್

More from Filmibeat

English summary
Salaar Vs Dunkil: ShahRukh Khan's Dunki Postponed To Summers 2024.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X