»   » ಶಾರುಖ್ ಹೇಳಿದರೆ ಬಟ್ಟೆಬಿಚ್ಚಲು ಸಿದ್ಧ ಎಂದ ಪೂನಂ

ಶಾರುಖ್ ಹೇಳಿದರೆ ಬಟ್ಟೆಬಿಚ್ಚಲು ಸಿದ್ಧ ಎಂದ ಪೂನಂ

Posted By:
Subscribe to Filmibeat Kannada

ವಿವಾದಾತ್ಮಕ ರೂಪದರ್ಶಿ, ನಟಿ ಪೂನಂ ಪಾಂಡೆ ಸುದ್ದಿಯಾದಲು ಇದೀಗ ಮತ್ತೊಂದು ದಾರಿ ಹುಡುಕಿದ್ದಾರೆ. ಅವರೀಗ ಶಾರುಖ್ ಖಾನ್ ಹೇಳಿದರೆ ತಾವು ಕೊಲ್ಕತ್ತಾ ನೈಟ್ ರೈಡರ್ಸ್ ಕ್ರಿಕೆಟ್ ಟೀಮಿಗೆ ಉತ್ತೇಜನ ಕೊಡುವುದಕ್ಕಾಗಿ ಬೆತ್ತಲಾಗಲು ಸಿದ್ಧ ಎಂದಿದ್ದಾರೆ. ಆದರೆ ಕೇವಲ ಶಾರುಖ್ ಹೇಳಿದರೆ ಮಾತ್ರ ಎಂಬುದನ್ನು ಪೂನಂ ಒತ್ತೊತ್ತಿ ಹೇಳಿದ್ದಾರೆ.

ಮೊದಲೇ ಪೂನಂಗೆ ಕ್ರಿಕೆಟ್ ಕ್ರೇಜ್. ಅದಕ್ಕಿಂತಲೂ ಹೆಚ್ಚು ಶಾರುಖ್ ಹುಚ್ಚು. ಜೊತೆಗೆ ತಮ್ಮ ಬೆತ್ತಲೆ ಮೈಯನ್ನು ಪ್ರಪಂಚಕ್ಕೇ ಪ್ರದರ್ಶಿಸುವ ಹುಚ್ಚು. ಅದಕ್ಕಾಗಿ ಆಕೆ ಪ್ರಪಂಚದಾದ್ಯಂತ ಹಬ್ಬಿರುವ ಕ್ರಿಕೆಟ್ ಎಂಬ ಜ್ವರಕ್ಕೆ ಅಂಟಿಕೊಂಡಿದ್ದಾರೆ. ಈಗ ಆಕೆ ಶಾರುಖ್ ಕಡೆಯಿಂದ ಬರುವ ವಿಸಿಲ್ ಗಾಗಿ ಕಾದಿದ್ದಾರೆ. ಶಾರುಖ್ ಏನಾದರೂ 'ಓಕೆ' ಎಂಬ ಗ್ರೀನ್ ಸಿಗ್ನಲ್ ಕೊಟ್ಟರೆ ಪೂನಂಗಿಂತ ಪುಣ್ಯವಂತರು ಯಾರಿದ್ದಾರೆ ಹೇಳಿ!

ಒಟ್ಟಿನಲ್ಲಿ ತಮಗಿಷ್ಟವಾದ ಶಾರುಖ್, ಕ್ರಿಕೆಟ್ ಹಾಗೂ ಬೆತ್ತಲಾಗುವುದು ಈ ಮೂರನ್ನು ಒಟ್ಟಾಗಿಸಿ ಮಿಕ್ಸಿಗೆ ಹಾಕಿ ರುಬ್ಬಿ ಬೊಂಬಾಟ್ ರಸ ಕುಡಿಸಲು ರೆಡಿಯಾಗಿದ್ದಾರೆ ಪೂನಂ ಪಾಂಡೆ. ಆದರೆ ಅದಕ್ಕೆ ಶಾರುಖ್ ಏನೆನ್ನುತ್ತಾರೆ ಎನ್ನುವುದೀಗ ಎಲ್ಲರಿಗೂ ಕುತೂಹಲದ ವಿಷಯ. ಶಾರುಖ್ ಅಸ್ತು ಎಂದುಬಿಟ್ಟರೆ ಪೂನಂ ಹಿಡಿಯುವವರಾರು? ನಂತರ ಪ್ರಪಂಚದಲೆಲ್ಲಾ ಪೂನಂ ಭಜನೆ...(ಏಜೆನ್ಸೀಸ್)

English summary
Poonam Pandey wants to strip for Shahrukh Khan and his cricket team Kolkata Knight Riders.
 
Please Wait while comments are loading...