ಶಾರುಖ್ 'ಡಂಕಿ' ಪ್ರೀರಿಲೀಸ್ ಬ್ಯುಸಿನೆಸ್‌ಗೆ ಬಿಟೌನ್ ಶಾಕ್: 155 ಕೋಟಿ ರೂ.ಗೆ ಓಟಿಟಿ ರೈಟ್ಸ್ ಡೀಲ್?
ಓಟಿಟಿ ಸಂಸ್ಥೆಗಳ ನಡುವೆ ಸ್ಪರ್ಧೆ ಹೆಚ್ಚಾಗ್ತಿದೆ. ಹೊಸದಾಗಿ ಈ ರಂಗಕ್ಕೆ ಇಳಿದಿರುವ ಜಿಯೋ ಸಿನಿಮಾಸ್ ದೊಡ್ಡ ಸಿನಿಮಾಗಳನ್ನು ವೀಕ್ಷಕರಿಗೆ ನೀಡಲು ಪ್ರಯತ್ನಿಸುತ್ತಿದೆ. ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಡಿಜಿಟಲ್ ಹಕ್ಕುಗಳನ್ನು ಈ ಸಂಸ್ಥೆ ಭಾರೀ ಮೊತ್ತಕ್ಕೆ ಕೊಂಡುಕೊಂಡಿದೆ ಎನ್ನಲಾಗ್ತಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 22ಕ್ಕೆ ತೆರೆಗಪ್ಪಳಿಸಲಿದೆ.
4 ವರ್ಷ ಸೈಲೆಂಟ್ ಆಗಿದ್ದ ಶಾರುಖ್ ಖಾನ್ 'ಪಠಾಣ್' ಸಿನಿಮಾ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಸದ್ಯ 'ಜವಾನ್' ಸಿನಿಮಾ ಕೆಲಸಗಳಲ್ಲಿ ಕಿಂಗ್ ಖಾನ್ ಬ್ಯುಸಿಯಾಗಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಅಬ್ಬರಿಸೋಕೆ ಬರ್ತಿದ್ದಾರೆ. ಸೆಪ್ಟೆಂಬರ್ 7ಕ್ಕೆ ಸಿನಿಮಾ ತೆರೆಗೆ ಬರ್ತಿದ್ದು ಬಳಿಕ 'ಡಂಕಿ' ಸಿನಿಮಾ ರಿಲೀಸ್ ಆಗಲಿದೆ. ಹಿರಾಜಿ- ಶಾರುಖ್ ಕಾಂಬಿನೇಷನ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ಇತ್ತೀಚೆಗೆ 'ಜವಾನ್' ಚಿತ್ರದ ಆಡಿಯೋ ಹಾಗೂ ಡಿಜಿಟಲ್ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದಾಗಿ ಹೇಳಲಾಗಿತ್ತು. ಅದಕ್ಕಿಂತ ದೊಡ್ಡ ಮೊತ್ತಕ್ಕೆ 'ಡಂಕಿ' ಸಿನಿಮಾ ಹಕ್ಕು ಬಿಕರಿಯಾಗಿದೆಯಂತೆ. ಶೂಟಿಂಗ್ ಮುಗಿಯೋಕು ಮೊದ್ಲೆ ಅಂದಾಜು 155 ಕೋಟಿ ರೂ.ಗೆ ಜಿಯೋ ಸಿನಿಮಾಸ್ ಓಟಿಟಿ ರೈಟ್ಸ್ ಕೊಂಡುಕೊಂಡಿರುವುದಾಗಿ ಹೇಳಲಾಗುತ್ತಿದೆ. ಕ್ಲಾಸ್ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್ ರಾಜ್‌ಕುಮಾರ್ ಹಿರಾನಿ ಜೊತೆ ಶಾರುಖ್ ಕೈ ಜೋಡಿಸಿರುವುದರಿಂದ ನಿರೀಕ್ಷೆ ದುಪ್ಪಟ್ಟಾಗಿದೆ.
'ಮುನ್ನಾಭಾಯ್ ಎಂಬಿಬಿಎಸ್', '3 ಇಡಿಯಟ್ಸ್', 'ಪೀಕೆ', 'ಸಂಜು' ರೀತಿಯ ಸೆನ್ಸೇಷನಲ್ ಸಿನಿಮಾಗಳ ಮೂಲಕ ರಾಜ್‌ಕುಮಾರ್ ಹಿರಾನಿ ಮ್ಯಾಜಿಕ್ ಮಾಡಿದ್ದರು. ಈ ಬಾರಿ ಕಿಂಗ್ ಖಾನ್ ಜೊತೆ ಸೇರಿ ಮತ್ತೊಂದು ಅದ್ಭುತ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ವಿಕ್ಕಿ ಕೌಶಲ್, ತಾಪ್ಸಿ ಪನ್ನು ಕೂಡ 'ಡಂಕಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಮೂವರು ಒಟ್ಟಿಗೆ ನಟಿಸುತ್ತಿದ್ದಾರೆ. ಶಾರುಕ್- ಹಿರಾನಿ ಒಟ್ಟಾಗಿರುವುದರಿಂದ ಓಟಿಟಿ ರೈಟ್ಸ್‌ಗೆ 155 ಕೋಟಿ ರೂ. ಅನ್ನೋದು ದೊಡ್ಡ ಮೊತ್ತ ಅಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.

'ಡಂಕಿ' ಪಕ್ಕಾ ರಾಜ್‌ಕುಮಾರ್ ಹಿರಾನಿ ಸ್ಟೈಲ್ ಸಿನಿಮಾ. ಸ್ವತಃ ಶಾರುಖ್ ಹಾಗೂ ಹಿರಾನಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಾಮಿಡಿ, ಎಮೋಷನ್, ರೊಮ್ಯಾನ್ಸ್ ಎಲ್ಲವೂ ಸಿನಿಮಾದಲ್ಲಿದೆ. ಟೈಟಲ್‌ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಕಳೆದ ವರ್ಷ ಶಾರುಖ್ ಈ ಸಿನಿಮಾ ಘೋಷಿಸಿದ್ದರು. ಆದರೆ 'ಜವಾನ್' ಸಿನಿಮಾ ತಡವಾಗುತ್ತಿರುವುದರಿಂದ ಇದು ಕೂಡ ತಡವಾಗುವಂತಾಗಿದೆ. ಸದ್ಯ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗುತ್ತದೆ ಎನ್ನಲಾಗ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಓಟಿಟಿ ಕ್ರೇಜ್ ಹೆಚ್ಚಾಗುತ್ತಿದೆ. ಥಿಯೇಟರ್‌ನಲ್ಲಿ ರಿಲೀಸ್ ಆದ ಸಿನಿಮಾ ಟಿವಿಗೆ ಬರೋಕು ಮುನ್ನ ಓಟಿಟಿ ಫ್ಲಾಟ್‌ಪಾರ್ಮ್‌ಗಳಲ್ಲಿ ಸದ್ದು ಮಾಡ್ತಿವೆ. ಅದೇ ಕಾರಣಕ್ಕೆ ದೊಡ್ಡ ಸಿನಿಮಾಗಳ ಡಿಜಿಟಲ್ ರೈಟ್ಸ್‌ಗೆ ಭಾರೀ ಬೇಡಿಕೆಯಿದೆ. ಡಿಮ್ಯಾಂಡ್‌ಗೆ ತಕ್ಕಂತೆ ವ್ಯವಹಾರ ನಡೆಯುತ್ತದೆ. 'ಜವಾನ್' ಆಡಿಯೋ ರೈಟ್ಸ್‌ನ ಟೀ ಸೀರಿಸ್ ಸಂಸ್ಥೆ 36 ಕೋಟಿ ರೂ.ಗೆ ಖರೀದಿಸಿತ್ತು. ಬರೀ ಆಡಿಯೋಗೆ 36 ಕೋಟಿ ಅಂದ್ರೆ 'ಡಂಕಿ' ಓಟಿಟಿ ರೈಟ್ಸ್ 155 ಕೋಟಿ ರೂ. ಇದ್ದರೂ ಇರಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ.
ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬಾಲಿವುಡ್ ಬಾದ್‌ಶಾ ನಟಿಸ್ತಿದ್ದಾರೆ. 'ಜಿರೋ' ಸಿನಿಮಾ ನಂತರ ಮೂರ್ನಾಲ್ಕು ವರ್ಷ ಶಾರುಖ್ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಆದರೆ 'ಪಠಾಣ್' ಸಿನಿಮಾ 1000 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು. ಇದೀಗ 'ಜವಾನ್' ಹಾಗೂ 'ಡಂಕಿ' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಕಿಂಗ್ ಖಾನ್ ಸಿದ್ಧರಾಗಿದ್ದಾರೆ.


Click it and Unblock the Notifications











