ಶಾರುಕ್- ಅಟ್ಲಿ ಜೋಡಿಯ 'ಜವಾನ್' ಕಥೆಗೆ ಕಮಲ್ ನಟನೆಯ ಆ ಸಿನಿಮಾ ಪ್ರೇರಣೆ

'ಪಠಾಣ್' ಸಕ್ಸಸ್ ಬೆನ್ನಲ್ಲೇ ಶಾರುಕ್ ಖಾನ್ ನಟನೆಯ 'ಜವಾನ್' ಸಿನಿಮಾ ನಿರೀಕ್ಷೆ ಹೆಚ್ಚಾಗಿದೆ. ತಮಿಳು ನಿರ್ದೇಶಕ ಅಟ್ಲಿ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ನಯನತಾರಾ ನಟಿಸ್ತಿದ್ದು ವಿಜಯ್ ಸೇತುಪತಿ, ಸಂಜಯ್ ದತ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

'ಜವಾನ್' ಸಿನಿಮಾ ಕಥೆ ಬಗ್ಗೆ ಭಾರೀ ನಿರೀಕ್ಷೆ ಇದೆ. ಬಾಲಿವುಡ್ ಕಿಂಗ್ ಖಾನ್ ಜೊತೆ ಸಿನಿಮಾ ಮಾಡಲು ಸ್ಟಾರ್ ನಿರ್ದೇಶಕರು ಕ್ಯೂ ನಿಂತಿದ್ದಾರೆ. ಅವರನ್ನೆಲ್ಲಾ ಬಿಟ್ಟ ಶಾರುಕ್ ಅದು ಹೇಗೆ ಅಟ್ಲಿ ಹೇಳಿದ ಕಥೆ ಒಪ್ಪಿ ಸಿನಿಮಾ ಮಾಡ್ತಿದ್ದಾರೆ ಎನ್ನುವ ಅನುಮಾನ ಕೆಲವರಲ್ಲಿದೆ. ಬರೀ ನಟಿಸೋದು ಮಾತ್ರವಲ್ಲ ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಹಳ ದೊಡ್ಡದಾಗಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

ShahRukh Khan Starrer jawan movie slightly inspired by Kamal Haasans Super hit Oru Kaidhiyin Diary

ಸದ್ಯ ಈ ಸಿನಿಮಾ ಕಥೆ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಯೊಂದು ಹರಿದಾಡುತ್ತಿದೆ. ಕಮಲ್ ಹಾಸನ್ ನಟನೆಯ ತಮಿಳು ಸಿನಿಮಾ ಕಥೆಯಿಂದ ಪ್ರೇರಣೆಗೊಂಡು ಅಟ್ಲಿ 'ಜವಾನ್' ಸಿನಿಮಾ ಕಟ್ಟಿಕೊಡುತ್ತಿದ್ದಾರಂತೆ. ಇದೇ ಚಿತ್ರ ಹಿಂದಿ, ತೆಲುಗಿಗೂ ರೀಮೆಕ್ ಆಗಿತ್ತು. ಅಟ್ಲಿ ಆ ಚಿತ್ರವನ್ನು ರೀಮೆಕ್ ಮಾಡ್ತಿಲ್ಲ ಬದಲಿಗೆ ಆ ಕಥೆಯ ಕೇಂದ್ರ ಬಿಂದುವನ್ನು ಆಧಾರವಾಗಿ ಇಟ್ಟುಕೊಂಡು 'ಜವಾನ್' ಕಥೆ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಭಾರತಿರಾಜಾ ನಿರ್ದೇಶನದ 'ಒರು ಕೈದಿಯಿನ್ ಡೈರಿ' 80ರ ದಶಕದಲ್ಲಿ ಸೂಪರ್ ಹಿಟ್ ಆಗಿತ್ತು. ರಾಧ, ರೇವತಿ ಚಿತ್ರದ ಮುಖ್ಯಭೂಮಿಕೆಯಲ್ಲಿ ಇದ್ದರು, "ಡೇವಿಡ್ ಸೂರ್ಯಪ್ರಕಾಶ್ ಎಂಬ ರಾಜಕಾರಣಿಗೆ ನಿಷ್ಠನಾಗಿದ್ದರೂ, ಅವನು ಡೇವಿಡ್‌ನ ಹೆಂಡತಿಯನ್ನು ಅತ್ಯಾಚಾರ ಮಾಡಿ ಕೊಂದು ಜೈಲಿಗೆ ಕಳುಹಿಸುತ್ತಾನೆ. ತನ್ನ ಸೇಡು ತೀರಿಸಿಕೊಳ್ಳಲು ಜೀವಾವಧಿ ಶಿಕ್ಷೆಯನ್ನು ಅನುಭವಿಸಿದ ನಂತರ ಅವನು ಜೈಲಿನಿಂದ ಹಿಂತಿರುಗುತ್ತಾನೆ. ಅಲ್ಲಿಂದ ಮುಂದೆ ಸಿನಿಮಾ ಹೇಗೆ ಸಾಗುತ್ತದೇ ಅನ್ನೋದೇ ಇಂಟ್ರೆಸ್ಟಿಂಗ್.

'ಒರು ಕೈದಿಯಿನ್ ಡೈರಿ' ಸಿನಿಮಾ ಯಾವ ರೇಂಜಿಗೆ ಹಿಟ್ ಆಗಿತ್ತು ಅಂದ್ರೆ ಮುಂದೆ ಹಿಂದಿ, ತೆಲುಗಿಗೆ ರೀಮೆಕ್ ಆಗುವಂತೆ ಆಯಿತು. ಕಮಲ್ ಅಭಿಮಾನಿ ಆಗಿರುವ ಅಟ್ಲಿ 'ಜವಾನ್' ಚಿತ್ರಕ್ಕಾಗಿ ತಮ್ಮ ಮೆಚ್ಚಿನ ನಟನ ಚಿತ್ರದಿಂದ ಪ್ರೇರಣೆಗೊಂಡಿದ್ದಾರೆ. 'ರಾಜಾ ರಾಣಿ', 'ತೇರಿ', 'ಮೆರ್ಸಲ್', 'ಬಿಗಿಲ್' ನಂತರ ಅಟ್ಲಿ ಜವಾನ್ ಚಿತ್ರಕ್ಕೆ ಕೈ ಹಾಕಿದ್ದಾರೆ. ಹಾಗಂತ ಇದು ಹಳೇ ಸಿನಿಮಾ ರೀಮೆಕ್ ಅಲ್ಲ. ಬದಲಿಗೆ ಹೊಸ ಸಿನಿಮಾ.

ಕಮಲ್ ನಟನೆಯ ರಿವೇಂಜ್ ಡ್ರಾಮಾ 'ಒರು ಕೈದಿಯಿನ್ ಡೈರಿ' ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿತ್ತು. ಅದೇ ಕಥೆಯ ಎಳೆಯನ್ನಿಟ್ಟುಕೊಂಡು 'ಜವಾನ್' ಸಿನಿಮಾ ಕಥೆ ಸಿದ್ದವಾಗಿದೆಯಂತೆ. ಚಿತ್ರದಲ್ಲಿ ಶಾರುಕ್ ಖಾನ್ ತಂದೆ ಮಗನಾಗಿ ಡಬಲ್ ರೋಲ್ ಪ್ಲೇ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಎರಡು ಸಿನಿಮಾಗಳ ಕಥೆ ಸೇಮ್ ಅಲ್ಲದಿದ್ರು ಪಾತ್ರಗಳಲ್ಲಿ ಎಮೋಷನ್‌ನಲ್ಲಿ ಸಾಮ್ಯತೆ ಇರಲಿದೆ ಅನ್ನುವ ಚರ್ಚೆ ನಡೆಯಲಿದೆ.

'ಜವಾನ್' ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಜೊತೆಗೆ ತಮಿಳು, ತೆಲುಗು ಹಾಗೂ ಬಾಲಿವುಡ್‌ನ ಸೂಪರ್ ಸ್ಟಾರ್‌ಗಳು ಗೆಸ್ಟ್ ಅಪಿಯರೆನ್ಸ್ ಮಾಡ್ತಿದ್ದಾರೆ. ಶಾರುಕ್ ಖಾನ್, ನಯನತಾರಾ, ವಿಜಯ್ ಸೇತುಪತಿ ಜೊತೆಗೆ ಪ್ರಿಯಾಮಣಿ, ಯೋಗಿಬಾಬು ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ದೀಪಿಕಾ ಪಡುಕೋಣೆ, ದಳಪತಿ ವಿಜಯ್, ಸಂಜಯ್ ದತ್, ಅಲ್ಲು ಅರ್ಜುನ್ ಗೆಸ್ಟ್ ಅಪಿಯರೆನ್ಸ್ ಇರಲಿದೆ. ಜೂನ್ 2ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.

More from Filmibeat

English summary
'ಜವಾನ್' ಸಿನಿಮಾ ಕಥೆ ಬಗ್ಗೆ ಭಾರೀ ನಿರೀಕ್ಷೆ ಇದೆ. ಬಾಲಿವುಡ್ ಕಿಂಗ್ ಖಾನ್ ಜೊತೆ ಸಿನಿಮಾ ಮಾಡಲು ಸ್ಟಾರ್ ನಿರ್ದೇಶಕರು ಕ್ಯೂ ನಿಂತಿದ್ದಾರೆ. ಅವರನ್ನೆಲ್ಲಾ ಬಿಟ್ಟ ಶಾರುಕ್ ಅದು ಹೇಗೆ ಅಟ್ಲಿ ಹೇಳಿದ ಕಥೆ ಒಪ್ಪಿ ಸಿನಿಮಾ ಮಾಡ್ತಿದ್ದಾರೆ ಎನ್ನುವ ಅನುಮಾನ ಕೆಲವರಲ್ಲಿದೆ. ಬರೀ ನಟಿಸೋದು ಮಾತ್ರವಲ್ಲ ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X