'ಬಾಹುಬಲಿ- 2' ದಾಖಲೆ ಮುರಿದ 'ಪಠಾಣ್' ಓಟಿಟಿ ರಿಲೀಸ್ ಡೇಟ್ ಫಿಕ್ಸ್
ಜಗತ್ತಿನಾದ್ಯಂತ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿರುವ 'ಪಠಾಣ್' ಸಿನಿಮಾ ಶೀಘ್ರದಲ್ಲೇ ಓಟಿಟಿಗೆ ಬರ್ತಿದೆ. ಶಾರುಕ್ ಖಾನ್ ನಟನೆಯ ಆಕ್ಷನ್ ಎಂಟರ್‌ಟೈನರ್ ಸಿನಿಮಾ ವರ್ಷದ ದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿದೆ. ಹಿಂದಿಯಲ್ಲಿ 'ಬಾಹುಬಲಿ'- 2 ದಾಖಲೆಯನ್ನು ಮುರಿದು ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ 'ಪಠಾಣ್' ಎನಿಸಿಕೊಂಡಿದೆ.
ಸಿದ್ದಾರ್ಥ್ ಆನಂದ್ ನಿರ್ದೇಶನದ 'ಪಠಾಣ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಮಿಂಚಿದ್ದಾರೆ. ಜಾನ್ ಅಬ್ರಹಾಂ ವಿಲನ್ ಆಗಿ ಅಬ್ಬಿಸಿರಿದ್ದು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. ಕಳೆದ 4 ವರ್ಷಗಳಿಂದ ಸೈಲೆಂಟ್ ಆಗಿದ್ದ ಶಾರುಕ್ ಬ್ಲಾಕ್‌ಬಸ್ಟರ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಚಿತ್ರದಲ್ಲಿ ಸೈನಿಕನ ಅವತಾರದಲ್ಲಿ ಸಿನಿರಸಿಕರನ್ನು ರಂಜಿಸಿದ್ದಾರೆ. ಸದ್ಯ ಸಿನಿಮಾ 1025 ಕೋಟಿ ರೂ.ಗೂ ಅಧಿಕ ಬಾಚಿದೆ.

ಬಾಕ್ಸಾಫೀಸ್‌ನಲ್ಲಿ ಈ ಪಾಟಿ ಸೌಂಡ್ ಮಾಡುತ್ತಿರುವ 'ಪಠಾಣ್' ಮುಂದಿನ ವಾರ ಓಟಿಟಿಗೆ ಬರುತ್ತೆ ಎನ್ನಲಾಗ್ತಿದೆ. ಅಮೇಜಾನ್ ಪ್ರೈಮ್‌ನಲ್ಲಿ ಹಿಂದಿ, ತಮಿಳು, ತೆಲುಗು ವರ್ಷನ್ ಸ್ಟ್ರೀಮಿಂಗ್ ಆಗುತ್ತೆ ಎನ್ನುವ ಮಾತುಗಳು ಕೇಳಿಬರ್ತಿದೆ. ಒಂದು ವಾರ ಬಾಡಿಗೆಗೆ ಸಿಗಲಿರುವ ಸಿನಿಮಾ ಮಾರ್ಚ್ 17ಕ್ಕೆ ಮಾಮೂಲಿಯಂತೆ ಎಲ್ಲಾ ಚಂದದಾರರಿಗೂ 'ಪಠಾಣ್' ಆರ್ಭಟದ ದರ್ಶನ ಸಿಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ರಿಲೀಸ್ ಆಗಿ 49 ದಿನಗಳ ನಂತರ ಓಟಿಟಿ ರಿಲೀಸ್ ಒಪ್ಪಂದ ಆಗಿರುತ್ತದೆ. ಕೆಲವರು ಏಪ್ರಿಲ್‌ನಲ್ಲಿ ಸಿನಿಮಾ ಓಟಿಟಿ ಬರುತ್ತೆ ಎನ್ನುತ್ತಿದ್ದಾರೆ.

ರಿಲೀಸ್‌ಗೂ ಮೊದಲೇ ಸಿನಿಮಾ ವಿವಾದಗಳಿಂದ ಭಾರೀ ಸದ್ದು ಮಾಡಿತ್ತು. 'ಬೇಷರಂ ರಂಗ್' ಸಿನಿಮಾ ಹಾಡು ವಿವಾದದ ಕಿಡಿ ಹೊತ್ತಿಸಿತ್ತು. ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ತೊಟ್ಟು ಕಾಣಿಸಿಕೊಂಡಿದ್ದು ಕೆಲವರ ಕೆಂಗಣ್ಣಿಗೆ ಗುರಿ ಆಗಿತ್ತು. ಚಿತ್ರವನ್ನ ರಿಲೀಸ್ ಮಾಡಲು ಬಿಡಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಸೆನ್ಸಾರ್ ಮಂಡಳಿ ಕೂಡ ಒಂದು ಸನ್ನಿವೇಶಗಳಿಗೆ ಕತ್ತರಿ ಹಾಕಿತ್ತು. ಆದರೆ 'ಪಠಾಣ್' ಸಿನಿಮಾ ರಿಲೀಸ್ ಆಗಿ ಎಲ್ಲಾ ವಿವಾದಗಳನ್ನು ಮರೆಸಿ ಗೆದ್ದಿದೆ.
'ಜೀರೋ' ಸಿನಿಮಾ ಸೋಲಿನ ನಂತರ ಸೈಲೆಂಟ್ ಆಗಿದ್ದ ಶಾರುಕ್ ಖಾನ್ 'ಪಠಾಣ್' ಆಗಿ ಜನವರಿ 25ಕ್ಕೆ ಪ್ರೇಕ್ಷಕರ ಮುಂದೆ ಬಂದಿದ್ದರು. ಸಲ್ಮಾನ್ ಖಾನ್ ಟೈಗರ್ ರಾಥೋರ್ ಆಗಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು ಚಿತ್ರಕ್ಕೆ ಪ್ಲಸ್ ಆಗಿದೆ. ಭರ್ಜರಿ ಕಂಬ್ಯಾಕ್ ಮಾಡಿರುವ ಕಿಂಗ್ ಖಾನ್ ಸದ್ಯ 'ಜವಾನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ವರ್ಷವೇ ಆ ಸಿನಿಮಾ ಕೂಡ ತೆರೆಗೆ ಬರಲಿದೆ. 'ಡಂಕಿ' ಎನ್ನುವ ಮತ್ತೊಂದು ಸಿನಿಮಾ ಮೂಲಕ ಮುಂದಿವ ವರ್ಷ ಶಾರುಕ್ ಅಬ್ಬರಿಸಲಿದ್ದಾರೆ.


Click it and Unblock the Notifications











