For Quick Alerts
  ALLOW NOTIFICATIONS  
  For Daily Alerts

  ಶರಣ್ 'ಅವತಾರ್ ಪುರುಷ' ಚಿತ್ರದ ಬಗ್ಗೆ ಇಂತಹದೊಂದು ಸುದ್ದಿ ನಿಜನಾ?

  |

  ಕನ್ನಡ ನಟ ಶರಣ್ ಅಭಿನಯಿಸುತ್ತಿರುವ 'ಅವತಾರ್ ಪುರುಷ' ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ಕೊನೆಯ ಹಂತದ ಶೂಟಿಂಗ್ ಮಾತ್ರ ಬಾಕಿ ಉಳಿಸಿಕೊಂಡಿದ್ದ ಚಿತ್ರತಂಡ ಲಾಕ್‌ಡೌನ್ ಬಳಿಕ ಅದನ್ನು ಪೂರ್ಣಗೊಳಿಸಿದೆ.

  ಇದೀಗ 'ಅವತಾರ್ ಪುರುಷ' ಚಿತ್ರದ ಬಗ್ಗೆ ಕುತೂಹಲಕಾರಿ ಸಂಗತಿಯೊಂದು ಗಾಂಧಿನಗರದಲ್ಲಿ ಚರ್ಚೆಯಾಗ್ತಿದೆ. ಅದೇನಪ್ಪಾ ಅಂದ್ರೆ ಅವತಾರ್ ಪುರುಷ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಈಗಾಗಲೇ ಮೊದಲನೇ ಭಾಗದ ಚಿತ್ರೀಕರಣ ಮುಗಿದಿದೆ.

  'ಅವತಾರ್ ಪುರುಷ'ನ ಜೊತೆ ಹೊಸ ಅವತಾರವೆತ್ತಿದ ಡೈಲಾಗ್ ಕಿಂಗ್'ಅವತಾರ್ ಪುರುಷ'ನ ಜೊತೆ ಹೊಸ ಅವತಾರವೆತ್ತಿದ ಡೈಲಾಗ್ ಕಿಂಗ್

  ಕೊನೆಯ ಘಳಿಗೆಯಲ್ಲಿ ಇಂತಹದೊಂದು ಸುದ್ದಿ ಅಭಿಮಾನಿಗಳನ್ನು ಅಚ್ಚರಿಗೆ ತಳ್ಳಿದೆ. ಚಿತ್ರತಂಡ ಆಪ್ತವಲಯದಿಂದ ಇಂತಹ ಸುದ್ದ ಹೊರಬಿದ್ದಿದ್ದು, ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ.

  ಆಶಿಕಾ ರಂಗನಾಥ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟಿ ಸುಧಾರಾಣಿ, ಭವ್ಯ, ಸಾಯಿಕುಮಾರ್, ಸಾಧು ಕೋಕಿಲಾ, ಶ್ರೀನಗರ ಕಿಟ್ಟಿ, ಬಿ ಸುರೇಶ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

  ಶರಣ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶಿಸಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

  English summary
  Kannada actor Sharan's film 'Avatar Purusha' to be released in two parts. the movie has directed by simple suni.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X