For Quick Alerts
  ALLOW NOTIFICATIONS  
  For Daily Alerts

  ಸ್ಮಶಾನದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ ಕಡೆಯಿಂದ ಕುರಿಬಲಿ.?

  |
  ಸ್ಮಶಾನದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ ಕಡೆಯಿಂದ ಕುರಿಬಲಿ.?

  'ಭೈರಾದೇವಿ' ಎಂಬ ಚಿತ್ರದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ನಟಿಸುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇದೇ ಚಿತ್ರಕ್ಕಾಗಿ ಕಾಳಿ ಮಾತೆಯ ಅವತಾರ ತಾಳಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಮೊನ್ನೆಮೊನ್ನೆಯಷ್ಟೇ ಶಾಂತಿನಗರದ ಸ್ಮಶಾನದಲ್ಲಿ ಗೋರಿ ಮೇಲಿಂದ ಬಿದ್ದಿದ್ದರು. ಪರಿಣಾಮ ರಾಧಿಕಾ ಕುಮಾರಸ್ವಾಮಿ ರವರ ಸ್ಪೈನಲ್ ಕಾರ್ಡ್ ಗೆ ಏಟಾಗಿತ್ತು.

  ಅಮಾವಾಸ್ಯೆಯಂದು ಸ್ಮಶಾನದಲ್ಲಿ ಬಿದ್ದು ರಾಧಿಕಾ ಕುಮಾರಸ್ವಾಮಿ ಪೆಟ್ಟು ಮಾಡಿಕೊಂಡ ಮೇಲೆ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದ್ಯಂತೆ. ಹೀಗಾಗಿ, ಕುರಿಯನ್ನು ಬಲಿ ಕೊಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  ಅಮಾವಾಸ್ಯೆಯಂದು ಸ್ಮಶಾನದಲ್ಲಿ ಬಿದ್ದು ಬೆನ್ನಿಗೆ ಪೆಟ್ಟು ಮಾಡಿಕೊಂಡ ರಾಧಿಕಾ ಕುಮಾರಸ್ವಾಮಿ.!

  ಇತ್ತ ಪೆಟ್ಟು ಮಾಡಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಒಂದು ತಿಂಗಳ ಕಾಲ ವೈದ್ಯರು ಬೆಡ್ ರೆಸ್ಟ್ ಸೂಚಿಸಿರುವ ಕಾರಣ, ಚಿತ್ರೀಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ಭಾಗಿ ಆಗುತ್ತಿಲ್ಲ.

  'ಭೈರಾ ದೇವಿ' ಚಿತ್ರಕ್ಕಾಗಿ ಖಾಕಿ ತೊಟ್ಟ ನಟ ರಮೇಶ್ ಅರವಿಂದ್

  ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ 'ಭೈರಾದೇವಿ' ಚಿತ್ರ ತಯಾರಾಗುತ್ತಿದೆ. ಈ ಹಿಂದೆ ದುನಿಯಾ ವಿಜಯ್ ನಟಿಸಿದ್ದ 'ಆರ್.ಎಕ್ಸ್.ಸೂರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶ್ರೀಜೈ 'ಭೈರಾದೇವಿ' ಸಿನಿಮಾದ ನಿರ್ದೇಶಕ. ಇದೇ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ ಕೂಡ ಅಭಿನಯಿಸುತ್ತಿದ್ದಾರೆ.

  English summary
  According to the latest Grapevine, Sheep has been sacrificed in Kannada Movie 'Bhairadevi' shooting set. 'Bhairadevi' movie features Radhika Kumaraswamy and Ramesh Aravind in lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X