ಕಾಮಸೂತ್ರ 3ಡಿ ಚಿತ್ರದಿಂದ ಶೆರ್ಲಿನ್ ಗೆ ಗೇಟ್ ಪಾಸ್
ಕಾಮಸೂತ್ರ 3 ಡಿ ಸಿನಿಮಾದ ಶೂಟಿಂಗ್ ಆರಂಭವಾದ ನಂತರ, ಚೋಪ್ರಾ ಹಾಲಿವುಡ್ ನಟಿಯರನ್ನು ಮೀರಿಸುವಂತೆ ದೇಹಸಿರಿ ಪ್ರದರ್ಶಿಸಿ ಪಡ್ಡೆಗಳ ನಿದ್ದೆ ಕದ್ದಿದ್ದಳು. ಕೇವಲ ಖಾಸಗಿಯಾಗಿ ನೋಡುವ ಇಂತಹ ಚಿತ್ರಗಳನ್ನು ಈಕೆ ಸಾಮಾಜಿಕ ತಾಣಗಳಲ್ಲಿ ಪ್ರಕಟಿಸಿ ವಿವಾದಕ್ಕೆ ಸಿಲುಕಿದ್ದಾಳೆ.
ಶೆರ್ಲಿನ್ ಟಾಪ್ ಲೆಸ್ ಪೋಟೋವನ್ನು ವೆಬ್ ನಲ್ಲಿ ನೋಡಿದ ಚಿತ್ರದ ನಿರ್ದೇಶಕ ರೂಪೇಶ್ ಪೌಲ್ ಕೋಪಗೊಂಡಿದ್ಧಾರೆ. ಕಾಮಸೂತ್ರ 3 ಡಿ ಸಿನಿಮಾವನ್ನು ಖಾಸಗಿಯಾಗಿ ನೋಡುವವರಿಗೆ ಮಾತ್ರ ದೊರೆಯಬೇಕಾಗಿದ್ದ ಫೋಟೋ ವೆಬ್ ತಾಣಗಳಲ್ಲಿ ಹರಿದಾಡುತ್ತಿರುವುದರಿಂದ ಶೆರ್ಲಿನ್ ರನ್ನು ಚಿತ್ರತಂಡದಿಂದಲೇ ಹೊರಹಾಕುವ ಗಂಭೀರ ನಿರ್ಧಾರ ಅವರದು.
ಕಾಮಸೂತ್ರ ಸಿನಿಮಾದಿಂದ ಶೆರ್ಲಿನ್ ಗೆ ಗೇಟ್ ಪಾಸ್ ನೀಡಿ ಹಾಲಿವುಡ್ ನಟಿಯರಾದ ಇವಾ ಲಂಗೋರಿಯಾ ಅಥವಾ ಮಿಲಾ ಕುನೀಸ್ ಅವರನ್ನು ಕರೆತರುವ ಬಗ್ಗೆ ಆಲೋಚಿಸುತ್ತಿದ್ದಾರೆ.
ನಿರ್ದೇಶಕ ರೂಪೇಶ್ ಪೌಲ್ ನಿರ್ಧಾರಕ್ಕೆ ಟಿಟ್ವರ್ ಮೂಲಕ ವ್ಯಂಗ್ಯವಾಗೇ ಪ್ರತಿಕ್ರಿಯಿಸಿರುವ ಶೆರ್ಲಿನ್, ಚಿತ್ರದ ಇದುವರೆಗಿನ ಪ್ರಚಾರಕ್ಕೆ ನನ್ನ ಫೋಟೋ, ವಿಡಿಯೋಗಳು ಬೇಕಾಗಿತ್ತು.
ಚಿತ್ರಕ್ಕೆ ಇವಾ ಲಂಗೋರಿಯಾ ಮತ್ತು ಮಿಲಾ ಕುನೀಸ್ ಅವರನ್ನು ಕರೆತರುವುದಾದರೆ ನನ್ನಿಂದ ಒಪ್ಪಂದಕ್ಕೆ ಏಕೆ? ಸಹಿ ಹಾಕಿಸಿಕೊಂಡರು ಎಂದು ಬೇಸರ ವ್ಯಕ್ತಪಡಿಸಿದ್ದಾಳೆ. ಚಿತ್ರ ಪ್ರಾರಂಭವಾಗುವ ಮೊದಲೆ ಹಾಲಿವುಡ್ ನಟಿಯರ ಕಾಲ್ ಶೀಟ್ ದೊರೆತಿರಲಿಲ್ಲವೇ ಎಂದು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. (ಏಜೆನ್ಸೀಸ್)


Click it and Unblock the Notifications












