For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಸ್ನೇಹಿತನ ಪಾತ್ರದಲ್ಲಿ ಶಿವಣ್ಣ: ರಜನಿ 169ನೇ ಚಿತ್ರದ ಮಾಹಿತಿ ಇಲ್ಲಿದೆ!

  |

  ನಟ ಶಿವರಾಜ್‌ಕುಮಾರ್ ಮೊದಲ ಬಾರಿಗೆ ತಮಿಳು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಸೂಪರ್‌ ಸ್ಟಾರ್ ರಜನಿಕಾಂತ್ ಜೊತೆಗೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಾ ಇತ್ತು. ಚಿತ್ರದ ನಿರ್ದೇಶಕ ಬೆಂಗಳೂರಿಗೆ ಬಂದು ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ಚಿತ್ರದ ಕಥೆಯನ್ನು ಕೂಡ ಹೇಳಿ ಹೋಗಿದ್ದಾರೆ.

  ಪ್ಯಾನ್ ಇಂಡಿಯಾ ಸಿನಿಮಾಗಳು ಬರಲು ಶುರುವಾದ ಬಳಿಕ ಭಾರತೀಯ ಚಿತ್ರರಂಗಗಳ ನಡುವೆ ಇದ್ದ ಬೇಲಿ ಶಮನಗೊಂಡಿದ. ಎಲ್ಲಾ ಚಿತ್ರರಂಗದವರು, ಬೇರೆ ಬೇರೆ ಭಾಷೆಗಳಲ್ಲಿ ನಟಿಸಲು ಶುರು ಮಾಡಿದ್ದಾರೆ. ಹಾಗಾಗಿ ಇಷ್ಟು ವರ್ಷಗಳು ಚಿತ್ರರಂಗದಲ್ಲೇ ಇದ್ದರೂ, ಈಗ ರಜನಿಕಾಂತ್ ಮತ್ತು ಶಿವಣ್ಣ ಒಟ್ಟಿಗೆ ನಟಿಸುತ್ತಿದ್ದಾರೆ.

  ಸೂಪರ್‌ಸ್ಟಾರ್ ರಜನಿ ಜೊತೆಗೆ ಸೆಂಚುರಿ ಸ್ಟಾರ್ ಶಿವಣ್ಣ ಸಿನಿಮಾಸೂಪರ್‌ಸ್ಟಾರ್ ರಜನಿ ಜೊತೆಗೆ ಸೆಂಚುರಿ ಸ್ಟಾರ್ ಶಿವಣ್ಣ ಸಿನಿಮಾ

  ತಮಿಳು ಸೂಪರ್ ಸ್ಟಾರ್ ಮತ್ತು ಕನ್ನಡದ ಸೂಪರ್ ಸ್ಟಾರ್‌ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ಅದು ಪರದೆಯ ಮೇಲೆ ಹಬ್ಬವೇ ಆಗಲಿದೆ. ಇನ್ನು ಈ ಜೋಡಿ ತೆರೆಮೇಲೆ ಯಾವ ಪಾತ್ರಗಳನ್ನು ಕಾಣಿಸಿಕೊಳ್ಳಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿತ್ತು. ಅದಕ್ಕೆ ಉತ್ತರ ಇಲ್ಲಿದೆ. ಮುಂದೆ ಓದಿ...

  ರಜನಿಕಾಂತ್, ಶಿವರಾಜ್ ಕುಮಾರ್ ಸಿನಿಮಾ!

  ರಜನಿಕಾಂತ್, ಶಿವರಾಜ್ ಕುಮಾರ್ ಸಿನಿಮಾ!

  ನಟ ರಜನಿಕಾಂತ್ ಜೊತೆಗೆ ಶಿವರಾಜ್ ಕುಮಾರ್ ಅಭಿನಯಿಸುತ್ತಾರೆ ಎನ್ನುವುದು ಈಗ ಖಚಿತವಾಗಿದೆ. ನಟ ಶಿವರಾಜ್ ಕುಮಾರ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಅಭಿಮಾನಿಗಳು ರಜನಿಕಾಂತ್ ಮತ್ತು ನಾನು ಒಟ್ಟಿಗೆ ತೆರೆಮೇಲೆ ಬರುವುದನ್ನು ನೋಡಲು ಅಭಿಮಾನಿಗಳು ಇಷ್ಟ ಪಡುತ್ತಾರೆ" ಎಂದಿದ್ದಾರೆ. ಈ ಮೂಲಕ ರಜನಿಕಾಂತ್ ಜೊತೆಗೆ ತಮಿಳು ಚಿತ್ರದಲ್ಲಿ ಅಭಿನಯಿಸುವ ವಿಚಾರವನ್ನು ಖಚಿತ ಪಡಿಸಿದ್ದಾರೆ ಶಿವರಾಜ್ ಕುಮಾರ್.

  ರಜನಿಕಾಂತ್, ನಾನು ವೈರಿಗಳಲ್ಲ: ಕಮಲ್ ಹಾಸನ್!ರಜನಿಕಾಂತ್, ನಾನು ವೈರಿಗಳಲ್ಲ: ಕಮಲ್ ಹಾಸನ್!

  ರಜನಿಕಾಂತ್ ಸ್ನೇಹಿತನ ಪಾತ್ರದಲ್ಲಿ ಶಿವಣ್ಣ!

  ರಜನಿಕಾಂತ್ ಸ್ನೇಹಿತನ ಪಾತ್ರದಲ್ಲಿ ಶಿವಣ್ಣ!

  ರಜನಿಕಾಂತ್ ಜೊತೆಗೆ ಶಿವರಾಜ್‌ಕುಮಾರ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹೊರ ಬರುತ್ತಲೇ, ಚಿತ್ರದಲ್ಲಿ ಶಿವರಾಜ್ ಕುಮಾರ್ ಪಾತ್ರ ಹೇಗೆ ಇರಲಿದೆ ಎನ್ನುವ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ನಟ ಶಿವರಾಜ್ ಕುಮಾರ್ ರಜನಿಕಾಂತ್ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇದನ್ನು ಚಿತ್ರತಂಡ ಖಚಿತ ಪಡಿಸಬೇಕಷ್ಟೆ.

  ಆಗಸ್ಟ್‌ನಲ್ಲಿ ಸಿನಿಮಾ ಶುರು!

  ಆಗಸ್ಟ್‌ನಲ್ಲಿ ಸಿನಿಮಾ ಶುರು!

  ಈ ಚಿತ್ರದ ಶೂಟಿಂಗ್‌ಗೆ ಎಲ್ಲಾ ತಯಾರಿ ಕೂಡ ಆಗಿದೆ. ಪಾತ್ರವರ್ಗ ಕೂಡ ಅಂತಿಮ ಆಗಿದ್ದು, ಆಗಸ್ಟ್‌ನಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ. ಈ ವರ್ಷ ಬಹುತೇಕ ಚಿತ್ರೀಕರಣವನ್ನು ಮುಗಿಸಿ ಮುಂದಿನ ವರ್ಷದ ಆರಂಭದಲ್ಲೇ ಸಿನಿಮಾ ರಿಲೀಸ್ ಮಾಡುವ ಯೋಜನೆ ಚಿತ್ರ ತಂಡಕ್ಕಿದೆ. ಆಗಾಗಿ ಚಿತ್ರದ ಚಿತ್ರೀಕರಣ ಆರಂಭಕ್ಕೂ ಮುನ್ನ ಒಂದಷ್ಟು ಅಧಿಕೃತ ಮಾಹಿತಿಯನ್ನು ಸಿನಿಮಾ ತಂಡ ರಿವೀಲ್ ಮಾಡುವ ಸಾಧ್ಯತೆ ಇದೆ.

  ರಜನಿಕಾಂತ್ ಸಂಭಾವನೆ ಹೆಚ್ಚಳ: ಭಾರತದ ನಂ1 ನಟ ಆದ ತಲೈವಾ!ರಜನಿಕಾಂತ್ ಸಂಭಾವನೆ ಹೆಚ್ಚಳ: ಭಾರತದ ನಂ1 ನಟ ಆದ ತಲೈವಾ!

  ರಜನಿಕಾಂತ್ ರಾಜ್ ಕುಟುಂಬಕ್ಕೆ ಹತ್ತಿರ!

  ರಜನಿಕಾಂತ್ ರಾಜ್ ಕುಟುಂಬಕ್ಕೆ ಹತ್ತಿರ!

  ರಜನಿಕಾಂತ್ ಕರ್ನಾಟಕದ ಜನರು ಮತ್ತು ಸ್ಯಾಂಡಲ್‌ವುಡ್‌ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರಲ್ಲೂ ವಿಶೇಷವಾಗಿ ರಾಜ್‌ಕುಮಾರ್ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಇದೆ. ಹಾಗಾಗಿ ರಜನಿಕಾಂತ್ ಜೊತೆಗೆ ನಟಿಸುವ ವಿಚಾರವನ್ನು ಶಿವರಾಜ್ ಕುಮಾರ್ ಅಷ್ಟು ಸುಲಭವಾಗಿ ತಳ್ಳಿ ಹಾಕುವುದಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಾಗಾಗಿ ಈ ಬಗ್ಗೆ ಈಗ ತಮಿಳು, ಕನ್ನಡದಲ್ಲಿ ಚರ್ಚೆ ಶುರುವಾಗಿದೆ.

  English summary
  Shiva Rajkumar Play As Rajinikanth Friend In Rajinikanth's 169th Film, Know More,
  Thursday, June 9, 2022, 16:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X