»   » 'ಕುರುಕ್ಷೇತ್ರ'ಕ್ಕಾಗಿ ಶಿವಣ್ಣನಿಗೆ ಆಹ್ವಾನ ಬಂದಿದ್ದು ನಿಜ! ಯಾವ ಪಾತ್ರಕ್ಕೆ?

'ಕುರುಕ್ಷೇತ್ರ'ಕ್ಕಾಗಿ ಶಿವಣ್ಣನಿಗೆ ಆಹ್ವಾನ ಬಂದಿದ್ದು ನಿಜ! ಯಾವ ಪಾತ್ರಕ್ಕೆ?

Posted By:
Subscribe to Filmibeat Kannada

ಚಾಲೆಂಜಿಂಗ್ ದರ್ಶನ್ ಅಭಿನಯಿಸಲಿರುವ 'ಕುರುಕ್ಷೇತ್ರ'ಕ್ಕೆ ದಿನಗಣನೆ ಶುರುವಾಗಿದ್ದು, ಇನ್ನು ಕೆಲವು ಪಾತ್ರಗಳು ಆಯ್ಕೆ ಆಗಬೇಕಿದೆ. ಹೀಗಿರುವಾಗ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಕುರುಕ್ಷೇತ್ರ'ದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿತ್ತು.

ಆದ್ರೆ, ಯಾವ ಪಾತ್ರಕ್ಕೆ ಎಂಬ ನಿಖರವಾದ ಮಾಹಿತಿ ಸಿಕ್ಕಿರಲಿಲ್ಲ. ಈಗ, ಸೆಂಚುರಿಸ್ಟಾರ್ ಗೆ ದರ್ಶನ್ 'ಕುರುಕ್ಷೇತ್ರ'ದಲ್ಲಿ ಯಾವ ಪಾತ್ರಕ್ಕೆ ಆಫರ್ ಮಾಡಲಾಗಿತ್ತು ಎಂಬುದನ್ನ ಸ್ವತಃ ಶಿವಣ್ಣ ಬಿಚ್ಚಿಟ್ಟಿದ್ದಾರೆ.

'ಕುರುಕ್ಷೇತ್ರ'ದಲ್ಲಿ ಸೆಂಚುರಿಸ್ಟಾರ್ ಗಾಗಿ ಯಾವ ಪಾತ್ರ ಮೀಸಲಿಟ್ಟಿದ್ದರು ಎಂಬ ಕುತೂಹಲ ಕಾಡುತ್ತಿತ್ತು. ಈ ಕಾತುರಕ್ಕೆ ಈಗ ಉತ್ತರ ಸಿಕ್ಕಿದೆ. ಮುಂದೆ ಓದಿ....

'ಕುರುಕ್ಷೇತ್ರ'ದಲ್ಲಿ ಸೆಂಚುರಿಸ್ಟಾರ್

ಸದ್ಯದ ಮಾಹಿತಿ ಪ್ರಕಾರ ಶಿವರಾಜ್ ಕುಮಾರ್ ಅವರನ್ನ 'ಕುರುಕ್ಷೇತ್ರ' ಚಿತ್ರದಲ್ಲಿ ನಟಿಸುವಂತೆ ಆಹ್ವಾನಿಸಲಾಗಿದೆ ಎನ್ನಲಾಗಿತ್ತು. ಈ ಸುದ್ದಿಯನ್ನ ಸ್ವತಃ ಶಿವರಾಜ್ ಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ. ಹೌದು, ಕುರುಕ್ಷೇತ್ರದಲ್ಲಿ ಅಭಿನಯಿಸಲು ಆಹ್ವಾನ ಬಂದಿದೆ ಎಂದು ತಿಳಿಸಿದ್ದಾರೆ.

ಶಿವಣ್ಣನ ಆಸೆ ಈಡೇರುತ್ತಾ.? 'ಕುರುಕ್ಷೇತ್ರ'ದಲ್ಲಿ ಸೆಂಚುರಿ ಸ್ಟಾರ್ 'ಅರ್ಜುನ'.?

'ಕರ್ಣ'ನ ಪಾತ್ರಕ್ಕೆ ಶಿವಣ್ಣ!

ಶಿವರಾಜ್ ಕುಮಾರ್ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿನಯಿಸುವುದು ಖಚಿತವಾದ್ರೆ, ಈ ಲೆಜೆಂಡ್ ನಟನಿಗೆ ಯಾವ ಪಾತ್ರ ನೀಡಬೇಕು ಎಂಬುದು ಚಿತ್ರತಂಡ ಮೊದಲೇ ನಿರ್ಧರಿಸಿದೆಯಂತೆ. ಮೂಲಗಳ ಪ್ರಕಾರ ಶಿವಣ್ಣನಿಗಾಗಿ ಕರ್ಣನ ಪಾತ್ರ ಮೀಸಲಾಗಿಡಲಾಗಿದೆಯಂತೆ.

ಶಿವಣ್ಣ ಇಲ್ಲ ಎನ್ನಲ್ಲ ಎಂಬ ನಂಬಿಕೆ

ಹೇಗಿದ್ದರೂ ಶಿವಣ್ಣನಿಗೆ 'ದರ್ಶನ್ ಜೊತೆ ನಟಿಸುವ ಆಸೆ ಇದೆ'. ಅಂದ್ಮೇಲೆ, 'ಕುರುಕ್ಷೇತ್ರ' ಚಿತ್ರಕ್ಕಾಗಿ ಆಹ್ವಾನ ಬಂದಿದ್ದೇ ಆದಲ್ಲಿ, ಶಿವಣ್ಣ 'ನೋ' ಎನ್ನಲು ಸಾಧ್ಯ ಇಲ್ಲ ಅನ್ನೋದು ಗಾಂಧಿನಗರದ ಪಂಡಿತರ ಅಭಿಪ್ರಾಯ. ಅದ್ರೆ, ತಮ್ಮ ಸಾಲು ಸಾಲು ಚಿತ್ರಗಳ ನಡುವೆಯೂ 'ಕುರುಕ್ಷೇತ್ರ'ಕ್ಕೆ ಕಾಲ್ ಶೀಟ್ ಕೊಡ್ತಾರ ಎಂಬುದು ಸದ್ಯದ ಕುತೂಹಲ.

'ಡಿ' ಬಾಸ್ ದರ್ಶನ್ ಜೊತೆ ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ ಶಿವಣ್ಣ.!

ದರ್ಶನ್ ದ್ವಿಪಾತ್ರ ಅಂದಿದ್ದು?

ಮೊದಲೇ ನಿರ್ಧರಿಸಿದ್ದ ಹಾಗೆ, ಕುರುಕ್ಷೇತ್ರ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟರು ಅಭಿನಯಿಸುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದ್ರೆ, ನಂತರ ದಿನಗಳಲ್ಲಿ ಅದು ಸಾಧ್ಯವಾಗಲಿಲ್ಲ. ಈ ಮಧ್ಯೆ ದರ್ಶನ್ ಅವರೇ ದುರ್ಯೋಧನ ಮತ್ತು ಕರ್ಣನ ಪಾತ್ರ ನಿರ್ವಹಿಸಬಹುದು ಎಂಬ ಆಲೋಚನೆ ಮೂಡಿತ್ತು. ಒಂದು ಪಕ್ಷ ಶಿವಣ್ಣ ಈ ಚಿತ್ರಕ್ಕೆ ಸಿಗದಿದ್ದರೇ, ಬಹುಶಃ ಕರ್ಣನ ಪಾತ್ರವನ್ನ ದರ್ಶನ್ ಅವರೇ ನಿರ್ವಹಿಸಿದರೂ ಅಚ್ಚರಿಯಿಲ್ಲ.

ಆಗಸ್ಟ್ 6ಕ್ಕೆ ಎಲ್ಲದಕ್ಕು ಉತ್ತರ

'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್, ರವಿಚಂದ್ರನ್ ಹೊರತುಪಡಿಸಿ ಉಳಿದವರೆಲ್ಲವೂ ಅಂತೆ-ಕಂತೆ ಎನ್ನಲಾಗಿದೆ. ಯಾಕಂದ್ರೆ, ಇದುವರೆಗೂ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹೀಗಾಗಿ, ಎಲ್ಲಾ ಪಾತ್ರಗಳು ಬಗ್ಗೆ ಕ್ಲಾರಿಟಿ ಸಿಗಬೇಕಾದ್ರೆ ಆಗಸ್ಟ್ 6 ರವರೆಗೆ ಕಾಯಲೇಬೇಕು.

English summary
According to sources, Kannada Actor Shiva Rajkumar to Play karna role in kurukshetra. Darshan's 50th Movie Direcetd By Naganna, and Produced by Munirathna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada