'ದೊಡ್ಮನೆ ಹುಡುಗ' ಬಂದ ತಕ್ಷಣ 'ಟಗರು' ಪಳಗಿಸ್ತಾರಾ ಸೂರಿ.?
ದುನಿಯಾ ಸೂರಿ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ 'ದೊಡ್ಮನೆ ಹುಡುಗ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿ ಇದೀಗ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳಲ್ಲಿ ಬ್ಯುಸಿಯಾಗಿದೆ.
ಆದಷ್ಟು ಬೇಗ ಬೇಗ ಎಲ್ಲವನ್ನು ಮುಗಿಸಿ ಮೊದಲ ಕಾಪಿ ತೆಗೆದು ಸೆನ್ಸಾರ್ ಮಂಡಳಿಗೆ ಸಲ್ಲಿಸಿ, ಆಗಸ್ಟ್ 11 ಕ್ಕೆ 'ದೊಡ್ಮನೆ ಹುಡುಗ'ನನ್ನು ತೆರೆ ಮೇಲೆ ತರಲು ನಿರ್ದೇಶಕ ದುನಿಯಾ ಸೂರಿ ಅವರು ಯೋಜನೆ ಹಾಕಿಕೊಂಡಿದ್ದಾರೆ.['ಅಭಿಮಾನಿ'ಗಳನ್ನು ಬಣ್ಣಿಸಿ ಕುಂಬಳಕಾಯಿ ಒಡೆದ 'ದೊಡ್ಮನೆ ಹುಡುಗ']

ಅಂದಹಾಗೆ ಎಲ್ಲವೂ ಅಂದುಕೊಂಡಂತೆ ನಡೆದು 'ದೊಡ್ಮನೆ ಹುಡುಗ' ಆಗಸ್ಟ್ 11ಕ್ಕೆ ತೆರೆ ಕಂಡರೆ, ಆದಾದ ಹತ್ತೇ ದಿನಕ್ಕೆ ಸೂರಿ ಅವರು ಮತ್ತೊಂದು ಹೊಸ ಚಿತ್ರದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ.
ಹೌದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ನಾಯಕ ನಟನಾಗಿ ಕಾಣಿಸಿಕೊಳ್ಳಲಿರುವ 'ಟಗರು-ಮೈಯೆಲ್ಲಾ ಪೊಗರು' ಚಿತ್ರಕ್ಕೆ ದುನಿಯಾ ಸೂರಿ ಅದ್ದೂರಿಯಾಗಿ ಚಾಲನೆ ನೀಡಲಿದ್ದಾರೆ.[ಗುರಾಯ್ಸಿದ್ರೆ ಗುಮ್ಮುವ 'ಟಗರು' ಮೈ ತುಂಬಾ ಪೊಗರು!]

ಈ ಮೊದಲೇ ಹೇಳಿರುವಂತೆ ಚಿತ್ರಕ್ಕೆ ಕೆ.ಪಿ ಶ್ರೀಕಾಂತ್ ಅವರು ಬಂಡವಾಳ ಹೂಡುತ್ತಿದ್ದಾರೆ. ಸದ್ಯಕ್ಕೆ ಶಿವಣ್ಣ ಅವರನ್ನು ಬಿಟ್ಟರೆ ಉಳಿದಂತೆ ಯಾವುದೇ ತಾರಾಬಳಗವನ್ನು ಆಯ್ಕೆ ಮಾಡಿಲ್ಲ.
ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಈ ಬಾರಿ 'ಟಗರು' ಚಿತ್ರದಲ್ಲಿ ಆಸ್ಥಾನ ಕಲಾವಿದರು ಕೈ ಜೋಡಿಸುತ್ತಿಲ್ಲ, ಬದ್ಲಾಗಿ ಬೇರೆ ತಂತ್ರಜ್ಞಾನರು ಕೆಲಸ ಮಾಡಲಿದ್ದಾರೆ. ಸತ್ಯ ಹೆಗಡೆ ಮತ್ತು ವಿ ಹರಿಕೃಷ್ಣ ಅವರ ಬದಲು ಈ ಸಾರಿ ಮಹೇಂದ್ರ ಸಿಂಗ್ ಮತ್ತು ಚರಣ್ ರಾಜ್ ಅವರು ಕ್ಯಾಮೆರಾ ಮತ್ತು ಸಂಗೀತ ಟಚ್ ನೀಡಲಿದ್ದಾರೆ.['ಟಗರು' ಹೊಡ್ಕೊಂಡು, ಗಾಂಧಿನಗರಕ್ಕೆ ಬಂದ ದುನಿಯಾ ಸೂರಿ]

ಅಂತೂ-ಇಂತೂ ಒಂಚೂರು ರೆಸ್ಟ್ ಇಲ್ಲದೇ, ದುನಿಯಾ ಸೂರಿ ಮತ್ತು ಶಿವಣ್ಣ ಅವರು ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಶಿವಣ್ಣ ಅವರು 'ಶ್ರೀಕಂಠ' ಚಿತ್ರೀಕರಣ ಮುಗಿಸಿದ್ದು, 'ಸಂತೆಯಲ್ಲಿ ನಿಂತ ಕಬೀರ' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.


Click it and Unblock the Notifications











