Shivarajkumar: 'ಜೈಲರ್' ಚಿತ್ರದಲ್ಲಿ ಶಿವಣ್ಣ ಪಾತ್ರ ಸಣ್ಣದು.. ಸಂಭಾವನೆ ಮೊತ್ತ ಭಾರೀ ದೊಡ್ಡದು
ಮೊದಲ ಬಾರಿಗೆ ತಮಿಳಿನಲ್ಲಿ ಶಿವಣ್ಣ: 'ಜೈಲರ್' ಚಿತ್ರದ 10 ನಿಮಿಷದ ಪಾತ್ರಕ್ಕೆ ಪಡೆದ ಸಂಭಾವನೆ ಎಷ್ಟು?
ರಜಿನಿಕಾಂತ್ ನಟನೆಯ 'ಜೈಲರ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಈಗಾಗಲೇ ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಆಗಸ್ಟ್ 10ಕ್ಕೆ ಸಿನಿಮಾ ವಿಶ್ವದಾದ್ಯಂತ ಏಕಕಾಲಕ್ಕೆ ತೆರೆಗಪ್ಪಳಿಸಲಿದೆ. ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್' ಚಿತ್ರವನ್ನು ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಮೂಡಿ ಬಂದಿದೆ. ಚಿತ್ರದಲ್ಲಿ ರಜನಿಕಾಂತ್ ಜೋಡಿಯಾಗಿ ರಮ್ಯಾ ಕೃಷ್ಣ ನಟಿಸಿದ್ದಾರೆ. ಇನ್ನುಳಿದಂತೆ ತಮನ್ನಾ, ಜಾಕಿಶ್ರಾಫ್, ಸುನಿಲ್, ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಇದೆ. ಮಲಯಾಳಂ ನಟ ಮೋಹನ್ ಲಾಲ್ ಕೂಡ ಸಣ್ಣ ಪಾತ್ರದಲ್ಲಿ ನಟಿಸಿ ಚಿತ್ರಕ್ಕೆ ಬಲ ತುಂಬಿದ್ದಾರೆ.

ರಜನಿಕಾಂತ್ ಸಂಭಾವನೆ ಈಗಾಗಲೇ 100 ಕೋಟಿ ರೂ. ಗಡಿ ದಾಟಿದೆ. 'ಜೈಲರ್' ಚಿತ್ರಕ್ಕೂ ತಲೈವಾ ದೊಡ್ಡ ಮೊತ್ತವನ್ನೇ ಜೇಬಿಗಿಳಿಸಿದ್ದಾರೆ ಎನ್ನಲಾಗ್ತಿದೆ. ತಲೈವಾ ಮಾತ್ರವನ್ನ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರಿಗೂ ಭರ್ಜರಿ ಸಂಭಾವನೆ ಸಿಕ್ಕಿದೆ ಎನ್ನುವ ಮಾತುಗಳು ಕಾಲಿವುಡ್‌ನಲ್ಲಿ ಕೇಳಿಬರ್ತಿದೆ.
ತಲೈವಾ ಸಂಭಾವನೆ 110 ಕೋಟಿ ರೂ.?
'ಜೈಲರ್' ಚಿತ್ರದಲ್ಲಿ ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ಚಿತ್ರದಲ್ಲಿ ಮುತ್ತುವೇಲ್ ಪಾಂಡಿಯನ್ ಆಗಿ ನಟಿಸೋಕೆ ತಲೈವಾ ಬರೋಬ್ಬರಿ 110 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಗುಸುಗುಸು ಕೇಳಿ ಬರ್ತಿದೆ. ಇದನ್ನು ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಷ್ಟು ಹಣವನ್ನು ರಜನಿಕಾಂತ್ ಏನ್ ಮಾಡ್ತಾರಪ್ಪ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಶಿವಣ್ಣಗೆ 4 ಕೋಟಿ ರೂ.?
ಇದೇ ಮೊದಲ ಬಾರಿಗೆ ಶಿವಣ್ಣ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದಾರೆ. ರಜನಿಕಾಂತ್ ಜೊತೆ ನರಸಿಂಹ ಎನ್ನುವ ಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಕೇವಲ 11 ನಿಮಿಷಗಳು ಮಾತ್ರ ಸೆಂಚುರಿ ಸ್ಟಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಣ್ಣನ ಪಾತ್ರ ಸಣ್ಣದೇ ಆದರೂ ಇದಕ್ಕಾಗಿ ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಮೋಹನ್ ಲಾಲ್‌ಗೆ 8 ಕೋಟಿ ರೂ?
ಮಲಯಾಳಂ ನಟ ಮೋಹನ್ ಲಾಲ್ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರವೂ ಕೆಲವೇ ನಿಮಿಷಗಳು ಸಿನಿಮಾದಲ್ಲಿ ಇರಲಿದ್ದು 8 ಕೋಟಿ ರೂ. ಸಂಭಾವನೆ ಎಣಿಸಿದ್ದಾರೆ ಎನ್ನಲಾಗ್ತಿದೆ. ವಿಲನ್ ಆಗಿ ಅಬ್ಬರಿಸಿರುವ ಬಾಲಿವುಡ್ ನಟ ಜಾಕೀಶ್ರಾಫ್ 4 ಕೋಟಿ ರೂ. ತಮನ್ನಾ 3 ಕೋಟಿ ರೂ. ಚಾರ್ಜ್ ಮಾಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.
ಆಗಸ್ಟ್ 10ಕ್ಕೆ 'ಜೈಲರ್' ಹವಾ
ರಮ್ಯಾ ಕೃಷ್ಣ 80 ಲಕ್ಷ ರೂ. ಯೋಗಿ ಬಾಬು 1 ಕೋಟಿ ರೂ. ವಸಂತ್ ರವಿ 30 ಲಕ್ಷ ರೂ. ಹೀಗೆ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರಿಗೂ ಸನ್ ಪಿಕ್ಚರ್ಸ್ ಸಂಸ್ಥೆ ಭಾರೀ ಮೊತ್ತದ ಸಂಭಾವನೆಯನ್ನೇ ನೀಡಿದೆಯಂತೆ. ಅಂದಹಾಗೆ 'ಜೈಲರ್' ಟ್ರೈಲರ್ ನೋಡಿದವರು ಇದು ಹಾಲಿವುಡ್‌ನ 'ನೊಬಡಿ' ಸಿನಿಮಾದಿಂದ ಸ್ಫೂರ್ತಿ ಪಡೆದಂತೆ ಇದೆ ಎನ್ನುತ್ತಿದ್ದಾರೆ. ಆಗಸ್ಟ್ 10ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications











