ಕನ್ನಡ ನಿರ್ದೇಶಕನ ಚಿತ್ರದಲ್ಲಿ ಶಿವಣ್ಣ, ರಜನಿ, ಬಾಲಯ್ಯ? ಎರಡು ಭಾಗಗಳಾಗಿ ಬಿಗ್ ಮಲ್ಟಿಸ್ಟಾರರ್ ಫಿಕ್ಸ್!

ಭಾರತೀಯ ಚಿತ್ರರಂಗದಲ್ಲಿ ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆ ಜೋರಾಗಿದೆ. ಈ ಟ್ರೆಂಡ್‌ನಿಂದ ಅಸಾಧ್ಯಗಳು ಸಾಧ್ಯಗಳಾಗಿ ಬದಲಾಗುತ್ತಿದೆ. ಹೃತಿಕ್‌ ರೋಷನ್ ಜೊತೆ ಜ್ಯೂ. ಎನ್‌ಟಿಆರ್ 'ವಾರ್' ಶುರು ಮಾಡುತ್ತಿದ್ದಾರೆ. ಶಿವಣ್ಣ 'ಜೈಲರ್' ರಜನಿಕಾಂತ್ ಎದುರು ನಿಂತಿದ್ದಾರೆ. ಸಂಜಯ್ ದತ್ ಸೌತ್ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಒಟ್ನಲ್ಲಿ ಕಲಾವಿದರು ಭಾಷೆಯ ಗಡಿ ಮೀರಿ ಕೆಲಸ ಮಾಡ್ತಿದ್ದಾರೆ.

'ಬಾಹುಬಲಿ', 'ಕೆಜಿಎಫ್‌', 'ಆರ್‌ಆರ್‌ಆರ್‌' ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿವೆ. ಬಾಲಿವುಡ್ ಮಂದಿ ಕೂಡ ದಕ್ಷಿಣದ ಕಲಾವಿದರಿಗೆ ತಮ್ಮ ಸಿನಿಮಾಗಳಲ್ಲಿ ಅವಕಾಶ ಕೊಡುತ್ತಿದ್ದಾರೆ. ಬಾಲಿವುಡ್ ನಟ- ನಟಿಯರು ಸಾಲು ಸಾಲಾಗಿ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇದೀಗ ಬೇರೆ ಬೇರೆ ಭಾಷೆಗಳ ಸ್ಟಾರ್‌ಗಳ ಮಲ್ಟಿಸ್ಟಾರರ್ ಸಿನಿಮಾಗಳ ಜಮಾನ ಶುರುವಾಗುತ್ತಿದೆ. ಶಿವಣ್ಣ, ರಜನಿಕಾಂತ್, ಬಾಲಕೃಷ್ಣ ಒಂದೇ ಸಿನಿಮಾದಲ್ಲಿ ನಟಿಸೋ ಗುಸುಗುಸು ಶುರುವಾಗಿದೆ.

Shivarajkumar Planning Multi Starrer with Balakrishna and Rajinikanth

ಶಿವಣ್ಣ ಈಗ ಪರಭಾಷೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಕೃಷ್ಣ ನಟನೆಯ 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದರು. ಇದೀಗ ರಜನಿಕಾಂತ್ ನಟನೆಯ 'ಜೈಲರ್', ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಬಾಲಕೃಷ್ಣ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗೆ ನಡೆದ ಎನ್‌ಟಿಆರ್‌ ಶತ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸೆಂಚುರಿ ಸ್ಟಾರ್ ಭಾಗಿ ಆಗಿದ್ದರು. ಬಹಿರಂಗ ವೇದಿಕೆಯಲ್ಲಿ ಬಾಲಯ್ಯ ಜೊತೆಗೆ ನಿಂತು ಈ ವಿಚಾರ ಹಂಚಿಕೊಂಡಿದ್ದಾರೆ.

ಒಂದೇ ಚಿತ್ರದಲ್ಲಿ ಶಿವಣ್ಣ, ಬಾಲಯ್ಯ, ರಜನಿ

ಸದ್ಯ ಶಿವಣ್ಣ ಹಾಗೂ ರಜನಿಕಾಂತ್ ಜೊತೆ ಸೇರಿ ಬಾಲಕೃಷ್ಣ ಒಂದು ಕ್ರೇಜಿ ಪ್ರಾಜೆಕ್ಟ್ ಪ್ಲ್ಯಾನ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಈ ಸಿನಿಮಾದಲ್ಲಿ ಬಾಲಯ್ಯ ಮೇನ್ ಹೀರೊ ಆಗಿ ಇರುತ್ತಾರಂತೆ. ರಜನಿಕಾಂತ್- ಶಿವಣ್ಣ ಕೂಡ ಟಾಲಿವುಡ್ ನಟಸಿಂಹ ಜೊತೆ ತೆರೆ ಹಂಚಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಇದು ನಿಜವೇ ಆದ್ರೆ, ಅದು ನೆವರ್ ಬಿಫೋರ್ ಮಲ್ಟಿಸ್ಟಾರರ್‌ ಸಿನಿಮಾ ಆಗೋದು ಗ್ಯಾರೆಂಟಿ.

Shivarajkumar Planning Multi Starrer with Balakrishna and Rajinikanth

2 ಭಾಗಗಳಾಗಿ ಬಿಗ್ ಬಜೆಟ್ ಸಿನಿಮಾ

ಸದ್ಯ ಟಾಲಿವುಡ್‌ನಲ್ಲಿ ಈ ಮಲ್ಟಿಸ್ಟಾರರ್ ಸಿನಿಮಾ ಕುರಿತು ಭಾರೀ ಚರ್ಚೆ ನಡೀತಿದೆ. 2 ಭಾಗಗಳಾಗಿ ಈ ಸಿನಿಮಾ ಮೂಡಿ ಬರಲಿದೆಯಂತೆ. ಬಾಲಯ್ಯ ಎರಡೂ ಸಿನಿಮಾಗಳಲ್ಲಿ ಇರಲಿದ್ದು ಶಿವಣ್ಣ ಹಾಗೂ ರಜನಿಕಾಂತ್ ಒಂದೊಂದು ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಶಿವಣ್ಣ ಹೇಳಿದ ಆ ಚಿತ್ರದ ಮೊದಲ ಭಾಗದಲ್ಲಿ ಬಾಲಯ್ಯ - ತಲೈವಾ ನಟಿಸ್ತಾರಂತೆ. ಎರಡನೇ ಭಾಗದಲ್ಲಿ ಶಿವಣ್ಣ ಜೊತೆಯಾಗುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಕನ್ನಡ ನಿರ್ದೇಶಕ ಆಕ್ಷನ್ ಕಟ್

ಇನ್ನು ಈ ಮಲ್ಟಿಸ್ಟಾರರ್ ಚಿತ್ರಕ್ಕೆ ಕನ್ನಡ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಾರೆ ಎಂದು ಟಾಲಿವುಡ್‌ನಲ್ಲಿ ಗುಲ್ಲಾಗಿದೆ. ಯಾರಪ್ಪಾ ನಿರ್ದೇಶಕ ಎನ್ನುವ ಪ್ರಶ್ನೆಯೂ ಎದ್ದಿದೆ. ಶಿವಣ್ಣ ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡ್ತಾರೆ ಎನ್ನುವ ಚರ್ಚೆ ಆಗ್ತಿದೆ. ಆದರೆ ಇದರಲ್ಲಿ ಎಷ್ಟು ನಿಜ ಇದೆ ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ. ಒಟ್ನಲ್ಲಿ ಶಿವಣ್ಣ, ಬಾಲಯ್ಯ ಜೊತೆ ಸಿನಿಮಾ ಮಾಡ್ತೀನಿ ಎಂದು ಹೇಳಿದ್ದಾರೆ. ಆದರೆ ಯಾವ ಸಿನಿಮಾ ಅನ್ನೋದನ್ನು ಕಾದು ನೋಡಬೇಕಿದೆ.

Shivarajkumar Planning Multi Starrer with Balakrishna and Rajinikanth

ಸಾಲು ಸಾಲು ಚಿತ್ರಗಳಲ್ಲಿ ಶಿವಣ್ಣ

ಸದ್ಯ ಶಿವರಾಜ್‌ಕುಮಾರ್ ಐದಾರು ಸಿನಿಮಾಗಳಿಗೆ ಕಮಿಟ್ ಆಗಿದ್ದಾರೆ. ಯೋಗರಾಜ್‌ ಭಟ್ ನಿರ್ದೇಶನದ 'ಕರಡಕ ದಮನಕ', ಶ್ರೀನಿ ನಿರ್ದೇಶನದ 'ಘೋಸ್ಟ್', ಅರ್ಜುನ್ ಜನ್ಯಾ ಸಾರಥ್ಯದ '45' ಚಿತ್ರಗಳಲ್ಲಿ ನಟಿಸ್ತಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ 'ಮಫ್ತಿ' ಪ್ರೀಕ್ವೆಲ್ 'ಬೈರತಿ ರಣಗಲ್' ಚಿತ್ರ ಶುರುವಾಗಬೇಕಿದೆ. ನರ್ತನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಜೂನ್ 16ರಿಂದ ಚಿತ್ರೀಕರಣ ಶುರುವಾಗುವ ಸಾಧ್ಯತೆಯಿದೆ.

More from Filmibeat

English summary
Shivarajkumar Planning Multi Starrer with Balakrishna and Rajinikanth. Shivanna looking For Kannada Director to rope for handle this big buget Film. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X