twitter
    For Quick Alerts
    ALLOW NOTIFICATIONS  
    For Daily Alerts

    ಹೀಗೊಂದು ಸುದ್ದಿ: ದುಬಾರಿ ಮೊತ್ತಕ್ಕೆ ಶಿವಣ್ಣನ 125ನೇ ಸಿನಿಮಾ 'ವೇದ' ಹಕ್ಕುಗಳು ಸೇಲ್?

    By ಫಿಲ್ಮಿಬೀಟ್ ಡೆಸ್ಕ್
    |

    ಸ್ಯಾಂಡಲ್‌ವುಡ್ ಸಿನಿಮಾ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. 'ಕೆಜಿಎಫ್ 2', '777 ಚಾರ್ಲಿ' ಹಾಗೂ 'ವಿಕ್ರಾಂತ್ ರೋಣ' ಸಿನಿಮಾ ಬಳಿಕ ಕನ್ನಡದ ಚಿತ್ರರಂಗ ರೇಂಜ್ ಬದಲಾಗಿದೆ. ಹೀಗಾಗಿ ಮುಂಬರುವ ಸಿನಿಮಾಗಳ ಬಗ್ಗೆ ಈಗಾಗಲೇ ಬೇರೆ ಚಿತ್ರರಂಗ ಒಂದು ಕಣ್ಣಿರುವುದಂತೂ ನಿಜ.

    ಮುಂದಿನ ನಾಲ್ಕು ತಿಂಗಳು ಸ್ಯಾಂಡಲ್‌ವುಡ್‌ನಲ್ಲಿ ದುಬಾರಿ ಸಿನಿಮಾಗಳು ರಿಲೀಸ್ ಆಗುತ್ತಿವೆ. ಇಂತಹ ಸಿನಿಮಾಗಳಲ್ಲಿ ಸೆಂಚುರಿ ಸ್ಟಾರಿ ಶಿವರಾಜ್‌ಕುಮಾರ್ 125ನೇ ಚಿತ್ರ 'ವೇದ' ಕೂಡ ಒಂದು. ಈಗಾಗಲೇ 'ವೇದ' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಎ. ಹರ್ಷ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮಧ್ಯೆನೇ ಸಿನಿಮಾದ ಬ್ಯುಸಿನೆಸ್‌ ಬಗ್ಗೆನೂ ಬಾರಿ ಚರ್ಚೆಯಾಗುತ್ತಿದೆ.

    ಶಿವಣ್ಣನ ಹುಟ್ಟುಹಬ್ಬಕ್ಕೆ 127ನೇ ಸಿನಿಮಾದ ಪೋಸ್ಟರ್ ಲಾಂಚ್ಶಿವಣ್ಣನ ಹುಟ್ಟುಹಬ್ಬಕ್ಕೆ 127ನೇ ಸಿನಿಮಾದ ಪೋಸ್ಟರ್ ಲಾಂಚ್

    ಇದೀಗ ಸಿನಿಮಾ ಬ್ಯುಸಿನೆಸ್ ಗಾಂಧಿನಗರದಿಂದ ಸೋಶಿಯಲ್ ಮೀಡಿಯಾಗೆ ಶಿಫ್ಟ್ ಆಗಿದೆ. ಸಿನಿಮಾ ಮಂದಿಗೆ ಗೊತ್ತಾಗುವುದಕ್ಕಿಂತಲೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುತ್ತೆ. ಈಗ ಶಿವಣ್ಣನ 125ನೇ ಸಿನಿಮಾದ ಪ್ರೀ-ರಿಲೀಸ್ ಬ್ಯುಸಿನೆಸ್ ಬಗ್ಗೆನೂ ವದಂತಿಗಳು ಹಬ್ಬುತ್ತಿವೆ. 'ವೇದ' ಚಿತ್ರದ ಥಿಯೇಟರ್ ಹಾಗೂ ಥಿಯೇಟರ್ ರಹಿತ ಹಕ್ಕುಗಳು ದುಬಾರಿ ಮೊತ್ತಕ್ಕೆ ಮಾರಾಟ ಆಗಿದೆ ಅನ್ನೋದು ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಮೊತ್ತವೆಷ್ಟು? ಹರಿದಾಡುತ್ತಿರುವ ಸುದ್ದಿ ನಿಜವೇ? ತಿಳಿಯಲು ಮುಂದೆ ಓದಿ.

    'ವೇದ' ಶಿವಣ್ಣನ 125ನೇ ಸಿನಿಮಾ

    'ವೇದ' ಶಿವಣ್ಣನ 125ನೇ ಸಿನಿಮಾ

    ಶಿವರಾಜ್‌ಕುಮಾರ್ ಸದ್ಯ ನಾಯಕನಾಗಿ 125ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಕಾರಣಕ್ಕೆ ನಿರ್ದೇಶಕ ಎ ಹರ್ಷ ಕೂಡ ಶಿವಣ್ಣನನ್ನು ರಗಡ್ ತೆರೆಮೇಲೆ ತೋರಿಸುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಬಿಟ್ಟಿರೋ ಒಂದು ಪೋಸ್ಟರ್ ಶಿವಣ್ಣ ರಗಡ್ ಲುಕ್ ಹೇಗಿರುತ್ತೆ ಅನ್ನೋದಕ್ಕೊಂದು ಸುಳಿವು ನೀಡಿದೆ. ಹೀಗಾಗಿ ಶಿವಣ್ಣನ ಅಭಿಮಾನಿಗಳು 'ವೇದ' ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆನೇ ಶಿವಣ್ಣನ 125ನೇ ಸಿನಿಮಾ ಪ್ರೀ-ರಿಲೀಸ್ ಬ್ಯುಸಿನೆಸ್ ಬಗ್ಗೆ ಪುಕಾರು ಹಬ್ಬಿದೆ.

    ಬಿಡುಗಡೆಗೂ ಮುನ್ನ ಸೇಲ್ ಆಯ್ತಾ ಸಿನಿಮಾ?

    ಬಿಡುಗಡೆಗೂ ಮುನ್ನ ಸೇಲ್ ಆಯ್ತಾ ಸಿನಿಮಾ?

    ಶಿವರಾಜ್‌ಕುಮಾರ್ 'ವೇದ' ಬಾರಿ ಮೊತ್ತದ ಬ್ಯುಸಿನೆಸ್‌ ಆಗಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. 'ವೇದ' ಸಿನಿಮಾ ಥಿಯೇಟರ್ ಹಕ್ಕು ಹಾಗೂ ಥಿಯೇಟರ್ ಬಿಟ್ಟು ಸ್ಯಾಟಲೈಟ್, ಓಟಿಟಿ, ಆಡಿಯೋ, ಡಬ್ಬಿಂಗ್ ರೈಟ್ಸ್ ಸೇರಿ 21 ಕೋಟಿ ರೂ.ಗೆ ಮಾರಾಟ ಆಗಿದೆ ಎಂದು ಹೇಳಲಾಗುತ್ತಿದೆ. ಅದೇ ಇನ್ನು ಕೆಲವರು 50 ಕೋಟಿ ರೂ. ಬ್ಯುಸಿನೆಸ್ ಆಗುತ್ತೆ ಎಂದು ಹೇಳುತ್ತಿದ್ದಾರೆ. ಇದು ಶಿವಣ್ಣನ 125ನೇ ಸಿನಿಮಾ ಆಗಿರುವುದರಿಂದ ದೊಡ್ಡ ಮೊತ್ತದ ಬ್ಯುಸಿನೆಸ್ ಆಗಿರೋದನ್ನು ತಳ್ಳಿ ಹಾಕುವಂತಿಲ್ಲ.

    125ನೇ ಸಿನಿಮಾ ಬಲು ಬೇಡಿಕೆ

    125ನೇ ಸಿನಿಮಾ ಬಲು ಬೇಡಿಕೆ

    'ವಿಕ್ರಾಂತ್ ರೋಣ' ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ಕನ್ನಡ ಸಿನಿಮಾ ಅಂದ್ರೆ, ಅದು 'ವೇದ'. ಅಂದ್ಹಾಗೆ ಗೀತಾ ಶಿವರಾಜ್‌ಕುಮಾರ್ ಹಾಗೂ ಜೀ ಸ್ಟುಡಿಯೋಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಕಾರಣಕ್ಕೆ ಜೀ ಸ್ಟುಡಿಯೋಸ್ ವಿತರಣೆ ಮಾಡುವ ಸಾಧ್ಯತೆ ಇದೆ. ಇಲ್ಲ ಇಬ್ಬರೂ ಜಂಟಿಯಾಗಿ ಹಕ್ಕುಗಳನ್ನು ಸೇಲ್ ಮಾಡಿರಲೂ ಬಹುದು. ಆದರೆ, ಈ ಬಗ್ಗೆ ಅಧಿಕೃತವಾಗಿ ನಿರ್ಮಾಣ ಸಂಸ್ಥೆಗಳು ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಇದು ಕೇವಲ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಚರ್ಚೆ ಅಷ್ಟೇ.

    3 ಭಾಷೆಯಲ್ಲಿ ರಿಲೀಸ್

    3 ಭಾಷೆಯಲ್ಲಿ ರಿಲೀಸ್

    ಶಿವರಾಜ್‌ಕುಮಾರ್ ಸಿನಿಮಾ ಇದೇ ಮೊದಲ ಬಾರಿಗೆ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 'ವೇದ' ಸಿನಿಮಾ ರಿಲೀಸ್ ಆಗುತ್ತಿದ್ದು, ಈಗಾಗಲೇ ಶೂಟಿಂಗ್ ಭರದಿಂದ ಸಾಗಿದೆ. 'ಮಗಳು ಜಾನಕಿ' ಧಾರಾವಾಹಿ ಹಾಗೂ 'ಹೀರೊ' ಸಿನಿಮಾದಲ್ಲಿ ನಟಿಸಿರುವ ಗಾನವಿ ಲಕ್ಷ್ಮಣ್ ಹಾಗೂ ಕಿರುತೆರೆ ನಟಿ ಹಾಗೂ ನಿರೂಪಕಿ ಶ್ವೇತಾ ಚಂಗಪ್ಪ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 1960ರ ದಶಕದ ಕಥೆಯನ್ನು ಹೊತ್ತು. ಹಿಂದೆಂದೂ ಕಾಣಿಸಿದ ರಗಡ್ ಲುಕ್‌ ಶಿವಣ್ಣ ಎಂಟ್ರಿ ಕೊಡಲಿದ್ದಾರೆ.

    English summary
    Shivarajkumar Starrer Veda Movie Theatrical And Non Theatrical Rights Sold For 21 Cr., Know More.
    Friday, August 5, 2022, 17:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X