'ದಿ ವಿಲನ್' ಚಿತ್ರದಲ್ಲಿ ಶಿವಣ್ಣನ ಅಸಲಿ ಗೆಟಪ್ ಇದಾಗಬೇಕಿತ್ತಂತೆ.!
Recommended Video

ಕಿಚ್ಚ ಸುದೀಪ್ ಮತ್ತು ಶಿವಣ್ಣ ಅಭಿನಯಿಸಿದ್ದ 'ದಿ ವಿಲನ್' ಸಿನಿಮಾ ಬಿಡುಗಡೆಯಾಗಿ, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಅಭಿನಯದ ಚಕ್ರವರ್ತಿ ಸುದೀಪ್ ಮೂರು ವಿಭಿನ್ನ ಹೇರ್ ಸ್ಟೈಲ್ ಮತ್ತು ಸ್ಟೈಲಿಶ್ ಗೆಟಪ್ ಗಳಲ್ಲಿ ಮಿಂಚಿದ್ದಾರೆ.
ಅದೇ ರೀತಿ ಇನ್ನೊಂದು ಕಡೆ ಸೆಂಚುರಿ ಸ್ಟಾರ್ ಶಿವಣ್ಣ ಮಾಸ್ ಲುಕ್ ನಲ್ಲಿ ಅಬ್ಬರಿಸಿದ್ದರು. ಸಿನಿಮಾ ನೋಡಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ವಿಲನ್ ಚಿತ್ರದಲ್ಲಿ ಇನ್ನೂ ಏನೋ ಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ಶಿವಣ್ಣನ ಕೆಲವು ಅಭಿಮಾನಿಗಳು, ನಿರ್ದೇಶಕ ಪ್ರೇಮ್ ವಿರುದ್ಧ ಸಿಡಿಮಿಡಿಗೊಂಡಿದ್ದರು. ಚಿತ್ರದಲ್ಲಿ ಶಿವರಾಜ್ ಕುಮಾರ್ ಪಾತ್ರಕ್ಕೆ ಹೆಚ್ಚಿನ ಮಾನ್ಯತೆ ಸಿಕ್ಕಿಲ್ಲ ಎಂದು ಕಿಡಿಕಾರಿದ್ದರು. ಇಂತಹ ಸಮಯದಲ್ಲಿ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಲನ್ ಸಿನಿಮಾದಲ್ಲಿ ಶಿವಣ್ಣನ ಅಸಲಿ ಗೆಟಪ್ ಹೀಗಿರಬೇಕಿತ್ತು ಎನ್ನುತ್ತಿದ್ದಾರೆ. ಹೇಗಿದೆ ಆ ಲುಕ್.? ಮುಂದೆ ನೋಡಿ.....

ಶಿವಣ್ಣ ಪಾತ್ರಕ್ಕೆ ಹೆಚ್ಚಿನ ವರ್ಕ್ ಮಾಡಬೇಕಿತ್ತು
ಒಂದು ಮೂಲಗಳ ಪ್ರಕಾರ 'ದಿ ವಿಲನ್' ಚಿತ್ರದಲ್ಲಿ ಶಿವಣ್ಣನ ಲುಕ್ ಮತ್ತಷ್ಟು ಬದಲಾಗಬೇಕಿತ್ತಂತೆ. ಆದ್ರೆ, ಕಾರಣಾಂತರಗಳಿಂದ ಅಷ್ಟೊಂದು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಹೀಗಾಗಿ, ಶಿವಣ್ಣನ ಗೆಟಪ್ ಗೆ ಹೆಚ್ಚು ವರ್ಕ್ ಮಾಡಲು ಆಗಿಲ್ಲ ಎಂಬ ಮಾತಿದೆ.

ಟೆಸ್ಟ್ ಲುಕ್ ಹೇಗಿದೆ ನೋಡಿ.?
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೋಗಳು ವಿಲನ್ ಚಿತ್ರದಲ್ಲಿ ಶಿವಣ್ಣನ ಟೆಸ್ಟ್ ಲುಕ್ ಗಳು ಎನ್ನಲಾಗುತ್ತಿದೆ. ಆದ್ರೆ, ಈ ಬಗ್ಗೆ ಖಚಿತವಾದ ಮಾಹಿತಿ ಇಲ್ಲ. ಆದ್ರೂ, ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದು, ಹೀಗಿರಬಹುದಿತ್ತು ಅಂತಿದ್ದಾರೆ.

ಎರಡೂ ಗೆಟಪ್ ನಲ್ಲೂ ಬದಲಾವಣೆ ಇದೆ
ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಲುಕ್ ಗೂ, ವಿಲನ್ ಚಿತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿರುವ ಲುಕ್ ಗೂ ತುಂಬಾ ಹತ್ತಿರದ ಸಂಬಂಧವಿದೆ. ಆಲ್ ಮೋಸ್ಟ್ ಒಂದೇ ರೀತಿ ಇದೆ. ಆದ್ರೆ, ಮೀಸೆ ಮತ್ತು ಗಡ್ಡದ ವಿಷ್ಯದಲ್ಲಿ ಇಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಅಂದ್ಹಾಗೆ, ಶಿವಣ್ಣ ಎರಡು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಹಳ್ಳಿ ಯುವಕ, ಇನ್ನೊಂದು ಮಾಡ್ರನ್ ಸ್ಟೈಲ್ ನಲ್ಲಿ ಮಾಸ್ ಲುಕ್ ನಲ್ಲಿ ಅಭಿನಯಿಸಿದ್ದಾರೆ.

ಹೆಚ್ಚು ಹೆಚ್ಚು ಸಿನಿಮಾಗಳು ಕಾರಣ
ಶಿವಣ್ಣ ಸಿನಿಮಾ ಹಾಗೂ ಪಾತ್ರಕ್ಕಾಗಿ ಎಂತಹ ರಿಸ್ಕ್ ತೆಗೆದುಕೊಳ್ಳುವುದಕ್ಕೂ ಹಿಂದೆ ಸರಿಯಲ್ಲ. ಅಂತಹದ್ರಲ್ಲಿ ಗೆಟಪ್ ಗೆ ಇನ್ನು ಹೆಚ್ಚಿನ ಸಮಯ ನೀಡುವಲ್ಲಿ ಶಿವಣ್ಣ ಹಿಂದೆ ಸರಿದ್ರಾ ಎಂಬ ಕುತೂಹಲ ಇರಬಹುದು. ಬಟ್, ಇದು ನಿಜವಾಗಿದ್ರೆ ಅದಕ್ಕೆ ಕಾರಣ ಬ್ಯಾಕ್ ಟು ಬ್ಯಾಕ್ ಸಿನಿಮಾ. ಬೇರೆ ಬೇರೆ ಚಿತ್ರಗಳಲ್ಲಿ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವುದರಿಂದ ಇಂತಹ ಪ್ರಯತ್ನ ಮಾಡಲು ಸಾಧ್ಯವಾಗದೇ ಇರಬಹುದು.

ಈ ಗೆಟಪ್ ನಿಜಾನ ಅಥವಾ ಫ್ಯಾನ್ ಮೇಡ್.?
ಬಹುಶಃ ಈ ಹೊಸ ಗೆಟಪ್ ಗಳು ಫ್ಯಾನ್ ಮೇಡ್ ಇರಬಹುದು ಎಂಬ ವಾದವೇ ಹೆಚ್ಚಿದೆ. ಬಟ್, ಮತ್ತೊಂದು ಕಡೆ ಇದು ಸಿನಿಮಾಗಾಗಿಯೇ ಸಿದ್ಧ ಮಾಡಿದ್ದ ಟೆಸ್ಟ್ ಲುಕ್ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಸ್ವತಃ ನಿರ್ದೇಶಕರೇ ಸ್ಪಷ್ಟನೆ ನೀಡಬೇಕಾಗುತ್ತೆ.


Click it and Unblock the Notifications











