Ananya Panday-Ishaan Khatter: 'ಅನನ್ಯಾ ಪಾಂಡೆ, ಇಶಾನ್ ಕಟ್ಟರ್ ಬ್ರೇಕಪ್' ವರ್ಷಗಳ ಪ್ರೀತಿ ಅಂತ್ಯ!
ಬಾಲಿವುಡ್ ಚಿತ್ರರಂಗದಲ್ಲಿ ಬ್ರೇಕಪ್ ಮತ್ತು ಪ್ಯಾಚಪ್‌ಗಳು ತೀರಾ ಕಾಮನ್. ಇತ್ತೀಚೆಗೆಗಂತೂ ಲವ್ ಬ್ರೇಕಪ್, ವಿವಾಹ ವಿಚ್ಛೇದನ ಕೊಂಚ ಹೆಚ್ಚಾಗಿಯೇ ಸದ್ದು ಮಾಡುತ್ತಾ ಇದೆ. ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಬ್ರೇಕಪ್ ವಿಚಾರದಲ್ಲಿ ಸುದ್ದಿ ಆಗಿದ್ದು ಅಂದರೆ ಅದು ಮಲೈಕಾ ಅರೋರಾ ಮತ್ತು ಅರ್ಜುನ್ ಕಪುರ್ ಲವ್ ಬ್ರೇಕಪ್ ಸುದ್ದಿ. ಆದರೆ ಅದು ನಿಜವಲ್ಲ ಕೇವಲ ಗಾಳಿ ಸುದ್ದಿಯಾಗಿ ಹರಿದಾಡಿತ್ತು.
ಈಗ ಬಹುಕಾಲದ ಪ್ರೀತಿಗೆ ಈ ಜೋಡಿ ಅಂತ್ಯ ಹಾಡಿದೆ. ಬಾಲಿವುಡ್‌ನ ಮತ್ತೊಂದು ತಾರಾ ಜೋಡಿ. ಹೌದು, ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಇಶಾನ್ ಕಟ್ಟರ್ ಬ್ರೇಕಪ್ ಸುದ್ದಿ ಸದ್ಯ ಬಾಲಿವುಡ್‌ನಲ್ಲಿ ಬಿಸಿ, ಬಿಸಿಯಾಗಿ ಸೇಲ್ ಆಗುತ್ತಿರುವ ಸುದ್ದಿ. ಈ ಜೋಡಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ತಮ್ಮ ಸಿನಿಮಾಗಳಿಂದ ಅಲ್ಲ. ಬದಲಿಗೆ ತಮ್ಮ ಲವ್ ಸ್ಟೋರಿ ಮೂಲಕ.
ಈಗ ಲವ್ ಬ್ರೇಕಪ್ ಮೂಲಕ ಈ ಜೋಡಿ ಸುದ್ದಿ ಆಗುತ್ತಾ ಇದೆ. ಈ ಇಬ್ಬರೂ ಕೂಡ ಸದ್ಯ ಚಿತ್ರರಂಗದಲ್ಲಿ ಬಡ್ಡಿಂಗ್ ಸ್ಟಾರ್‌ಗಳು. ಅಂದರೆ ಇನ್ನು ಕೂಡ ತಮ್ಮ ಸಿನಿಮಾ ಜರ್ನಿಯನ್ನು ಉತ್ತಮವಾಗಿ ಕಟ್ಟಿಕೊಳ್ಳುವ ಹಂತದ ಆರಂಭದಲ್ಲಿ ಇದ್ದಾರೆ. ಆದರೆ ಅದಾಗಲೇ ಲವ್ ಆಗಿ, ಬ್ರೇಕಪ್ ಕೂಡ ಆಗುತ್ತಿದೆ.

3 ವರ್ಷಗಳಿಂದ ಪ್ರೀತಿಯಲ್ಲಿ ಇದ್ದ ಇಶಾ, ಅನನ್ಯಾ!
ಬಾಲಿವುಡ್‌ನಲ್ಲಿ ಸಿನಿಮಾ ತಾರೆಯರು ಯಾವಾಗ ಪ್ರೀತಿಯಲ್ಲಿ ಬೀಳುತ್ತಾರೆ. ಯಾವಾಗ ಬ್ರೇಕಪ್ ಮಾಡಿ ಕೊಳ್ಳುತ್ತಾರೆ ಎನ್ನುವುದೇ ಗೊತ್ತಾಗಲ್ಲಾ. ಪ್ರೀತಿ ಬಗ್ಗೆ ಗಾಸಿಪ್ ಹಬ್ಬಿದ ಬೆನ್ನಲ್ಲೇ ಬ್ರೇಕಪ್ ಸುದ್ದಿಯನ್ನು ತಾರೆಯರು ಕೊಟ್ಟು ಬಿಡ್ತಾರೆ. ಈಗ ಇಶಾನ್ ಮತ್ತು ಅನನ್ಯಾ ಪಾಂಡೆ ವಿಚಾರದಲ್ಲಿ ಹಾಗೆ ಆಗಿದೆ. ಕೇವಲ ಮೂರು ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿ ಇತ್ತು. 2020ರಲ್ಲಿ ಶುರುವಾದ ಪ್ರೇಮ ಕಥೆ 2022ರಲ್ಲಿ ಅಂತ್ಯಗೊಂಡಿದೆ.

'ಖಾಲಿ ಪೀಲಿ' ಚಿತ್ರದ ವೇಳೆ ಹುಟ್ಟಿದ ಪ್ರೀತಿ!
2020ರಲ್ಲಿ ತೆರೆ ಬಂದ 'ಖಾಲಿ ಪೀಲಿ' ಚಿತ್ರದಿಂದ ಈ ಜೋಡಿ ಜೊತೆಯಾಗಿದೆ. ಈ ಚಿತ್ರ ಮಾಡುವಾಗಲೇ ಇವರ ನಡುವೆ ಪ್ರೇಮಾಂಕುರವಾಗಿದೆ. ನಂತರ ಈ ಜೋಡಿ ಸದಾ ಒಟ್ಟಾಗಿ ಕ್ಯಾಮೆರಾ ಕಣ್ಣಿಗೆ ಬೀಳುತಿದ್ದಾಗಲೇ, ಇವರ ಪ್ರೀತಿಯ ಬಗ್ಗೆ ಗಾಸಿಪ್ ಹಬ್ಬಿತ್ತು. ಪಾರ್ಟಿ, ಡೇಟಿಂಗ್, ಔಟಿಂಗ್ ಅಂತ ಸುತ್ತಾಡಿ ಸುದ್ದಿ ಆಗುತ್ತಾ ಇತ್ತು ಈ ಜೋಡಿ. ಈ ಪ್ರೇಮ್ ಕಹಾನಿ ಸುದ್ದಿ ಅಧಿಕೃತ ಆಗುವ ಮೊದಲೇ ಬ್ರೇಕಪ್ ಆಗಿ ಬಿಟ್ಟಿದೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

ಸ್ನೇಹಿತರಾಗಿ ಉಳಿಯಲು ನಿರ್ಧಾರ!
ಕಳೆದ ಬಾರಿ ನಟ ಶಾಹಿದ್ ಕಪೂರ್ ಹುಟ್ಟು ಹಬ್ಬದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಇಬ್ಬರೂ ಖುಷಿಯಾಗೇ ಇದ್ದರು. ಆದರೆ ಇತ್ತೀಚೆಗಷ್ಟೆ ಈ ಜೋಡಿ ದೂರ ಆಗುವ ನಿರ್ಧಾರ ಮಾಡಿದೆಯಂತೆ. ಆದರೆ ಸ್ನೇಹಿತರಾಗಿಯೇ ಉಳಿಯಲು ನಿರ್ಧಾರ ಮಾಡಿದ್ದಾರಂತೆ. ಹಾಗಾಗಿ ಈ ಜೋಡಿ ಮುಂದೆ ಒಟ್ಟಾಗೆ ಸಿನಿಮಾ ಮಾಡುವ ಸಾಧ್ಯತೆ ಎಂದು ವರದಿ ಆಗಿದೆ.

ಅನನ್ಯಾ, ಇಶಾನ್ ಪ್ರೀತಿ ಭವಿಷ್ಯ ಹೇಳಿದ್ದ ಪಂಡಿತಾ!
ಇನ್ನು ಇತ್ತೀಚೆಗೆ ಈ ಜೋಡಿಯ ಪ್ರೀತಿ ಭವಿಷ್ಯವನ್ನು ಒಬ್ಬ ಜೋತಿಷಿ ಹೇಳಿದ್ದು, ವೈರಲ್ ಆಗಿತ್ತು. ಅನನ್ಯಾ ಪಾಂಡೆ ಮತ್ತು ಇಶಾನ್ ತಮ್ಮ ಪ್ರೀತಿಯನ್ನು ಈ ವರ್ಷದ ಅಂತ್ಯದ ತನಕ ಉಳಿಸಿಕೊಳ್ಳ ಬಹುದು. ಇವರು ಮದುವೆ ಆಗುವ ಯೋಗ ಇವರ ನಕ್ಷತ್ರದಲ್ಲಿ ಇಲ್ಲ. ವೃತ್ತಿ ಜೀವನದಲ್ಲಿ ಸಾಕಷ್ಟು ಮುಂದುವರೆಯಲಿದ್ದಾರೆ. ಆದರೆ 2023ರಲ್ಲಿ ಒಂದಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಎಂದು ಹೇಳಿದ್ದರು. ಆ ಹೇಳಿಕೆಯೂ ಈಗ ವೈರಲ್ ಆಗುತ್ತಿದೆ.


Click it and Unblock the Notifications











