SSMB29: ಮಹೇಶ್ ಬಾಬು, ರಾಜಮೌಳಿ ಡೆಡ್ಲಿ ಕಾಂಬಿನೇಷನ್ ಚಿತ್ರಕ್ಕೆ ಶಾಕಿಂಗ್ ಬಜೆಟ್!
ಎಸ್. ಎಸ್ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿರುವುದು ಗೊತ್ತೇಯಿದೆ. 'RRR' ಸಿನಿಮಾ ಬಿಡುಗಡೆಗೂ ಮುನ್ನ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿರುವುದಾಗಿ ಜಕ್ಕಣ್ಣ ಹೇಳಿದ್ದರು. ಶೀಘ್ರದಲ್ಲೇ ಸಿನಿಮಾ ಘೋಷಣೆ ಆಗುವ ಸಾಧ್ಯತೆಯಿದೆ. ಇವರಿಬ್ಬರ ಒಂದೇ ಚಿತ್ರಕ್ಕೆ ಕೈ ಜೋಡಿಸುತ್ತಿರುವುದು ಎಲ್ಲರ ಹುಬ್ಬೇರಿಸಿದೆ.
ಟಾಲಿವುಡ್ ಸ್ಟೈಲಿಶ್ ಆಕ್ಟರ್ ಮಹೇಶ್ ಬಾಬು. ಸೆನ್ಸೇಷನಲ್ ಸಿನಿಮಾಗಳ ಸರದಾರ ಎಸ್. ಎಸ್ ರಾಜಮೌಳಿ. ಇವರಿಬ್ಬರು ಒಂದಾದ್ರೆ ಬಾಕ್ಸಾಫೀಸ್ ಶೇಕ್ ಮಾಡೋಗು ಗ್ಯಾರೆಂಟಿ. ಇನ್ನು ಆಕ್ಷನ್ ಅಡ್ವೆಂಚರ್ಸ್ ಸಿನಿಮಾ ಮಾಡುವುದಾಗಿಯೂ ಜಕ್ಕಣ್ಣ ಹೇಳಿದ್ದಾರೆ. ಈ ಬಾರಿ ಹಾಲಿವುಡ್ ಸಂಸ್ಥೆಗಳ ಜೊತೆಗೂ ಕೈ ಜೋಡಿಸಿದ್ದು ಹಾಲಿವುಡ್ ತಂತ್ರಜ್ಞರು, ಕಲಾವಿದರು ಚಿತ್ರದ ಭಾಗವಾಗುವ ಸಾಧ್ಯತೆಯಿದೆ.

ಹಾಲಿವುಡ್ ಸ್ಟೈಲ್ ನಟ ಮಹೇಶ್ ಬಾಬು ಎಂದು ಅಭಿಮಾನಿಗಳು ಕೊಂಡಾಡುತ್ತಿರುತ್ತಾರೆ. ಅದೇ ರೀತಿ ತಮ್ಮ ಚಿತ್ರದಲ್ಲಿ ತೋರಿಸಲು ಜಕ್ಕಣ್ಣ ಮನಸ್ಸು ಮಾಡಿದ್ದಾರೆ. ತಂದೆ ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೂ ಕಥೆ ಬರೆಯಲಿದ್ದಾರೆ. ಇದೊಂದು ಗ್ಲೋಬ್ಟ್ರೋಟಿಂಗ್ ಆಕ್ಷನ್ ಅಡ್ವೆಂಚರಸ್ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಸಿನಿಮಾ ಕತೆ ಸಾಗುತ್ತದೆ ಎನ್ನಲಾಗ್ತಿದೆ. ಇನ್ನು ರಾಮಾಯಣದ ಹನುಮಂತದ ಪಾತ್ರದಿಂದ ಪ್ರೇರಣೆಗೊಂಡು ಚಿತ್ರದಲ್ಲಿ ಮಹೇಶ್ ಬಾಬು ಪಾತ್ರ ಡಿಸೈನ್ ಮಾಡಿದ್ದಾರೆ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು.
ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಇದು ಮಹೇಶ್ ಬಾಬು 29ನೇ ಸಿನಿಮಾ. ಹಾಗಾಗಿ SSMB29 ಎನ್ನುವ ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಕೆಲಸಗಳು ನಡೀತಿದೆ. ಸದ್ಯ ಈ ಸಿನಿಮಾ ಬಜೆಟ್ ಬಗ್ಗೆ ಈಗ ಭಾರೀ ಚರ್ಚೆ ನಡೀತಿದೆ. ಬರೋಬ್ಬರಿ 1500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತದೆ ಎನ್ನುವ ವದಂತಿ ಹರಡಿದೆ. ಭಾರತದಲ್ಲಿ ಇಷ್ಟು ದೊಡ್ಡ ಬಜೆಟ್‌ನಲ್ಲಿ ಈವರೆಗೆ ಯಾವುದೇ ಸಿನಿಮಾ ನಿರ್ಮಾಣವಾಗಿಲ್ಲ.

ಸಾಮಾನ್ಯವಾಗಿ ಭಾರತದ ಸಿನಿಮಾಗಳು 300ರಿಂದ 400 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತವೆ. ಆದರೆ ಮೌಳಿ ಈಗ 1500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮಾಡೋಕೆ ಹೊರಟಿದ್ದಾರೆ ಎನ್ನಲಾಗ್ತಿದೆ. ದೇಶ ವಿಶೇಷಗಳಲ್ಲಿ ಸಿನಿಮಾ ಕಥೆ ಸಾಗುವುದರಿಂದ ಅದಕ್ಕೆ ತಕ್ಕಂತೆ ಬಂಡವಾಳ ಹೂಡುತ್ತಿರುವ ಸಾಧ್ಯತೆ ಇದೆ ಎನ್ನುವುದು ಕೆಲವರ ವಾದ.
6 ವರ್ಷಗಳ ಹಿಂದೆಯೇ ನಿರ್ಮಾಪಕ ಕೆ. ಎಲ್ ನಾರಾಯಣ್ ಬ್ಯಾನರ್‌ಗೆ ರಾಜಮೌಳಿ ಸಿನಿಮಾ ಮಾಡಿಕೊಡುವುದಾಗಿ ಹೇಳಿದ್ದರು. ಹಾಲಿವುಡ್ ಸಂಸ್ಥೆಯೊಂದು ಕೂಡ ಕೈ ಜೋಡಿಸಲಿದ್ದು ದೊಡ್ಡಮಟ್ಟದಲ್ಲೇ ಸಿನಿಮಾ ನಿರ್ಮಾಣವಾಗುತ್ತದೆ ಎನ್ನಲಾಗ್ತಿದೆ. SSMB29 ಭಾರತೀಯ ಚಿತ್ರರಂಗದಲ್ಲಿ ಬಹಳ ದುಬಾರಿ ಸಿನಿಮಾ ಆಗುವ ಸೂಚನೆ ಸಿಗುತ್ತಿದೆ.
ಇದೀಗ ಮಹೇಶ್ ಬಾಬು 'ಗುಂಟೂರು ಖಾರಂ' ಚಿತ್ರದಲ್ಲಿ ನಟಿಸಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ. ಬಳಿಕ ಜಕ್ಕಣ್ಣ ನಿರ್ದೇಶನದ ಸಿನಿಮಾ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ. ಇನ್ನು 'RRR' ಸಿನಿಮಾ ಬಳಿಕ ರಾಜಮೌಳಿ ಕೊಂಚ ಬಿಡುವು ಪಡೆದುಕೊಂಡಿದ್ದರು. ಸದ್ಯ ಮುಂದಿನ ಸಿನಿಮಾ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಕ್ರಿಪ್ಟ್ ಫೈನಲ್ ಮಾಡುವ ಜೊತೆಗೆ ಲೊಕೇಶನ್ ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗ್ತಿದೆ.
ಜಕ್ಕಣ್ಣನ ಸಿನಿಮಾಗಳಿಗೆ ಕೆಲಸ ಮಾಡುವ ಬಹುತೇಕ ತಂಡ SSMB29 ಚಿತ್ರಕ್ಕೂ ಕೆಲಸ ಮಾಡಲಿದೆ. ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕೆ ಇರಲಿದೆ. ಆದರೆ ಸೆಂಥಿಲ್ ಕುಮಾರ್ ಬದಲು ಪಿ. ಎಸ್ ವಿನೋದ್ ಛಾಯಾಗ್ರಹಕರಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











