For Quick Alerts
  ALLOW NOTIFICATIONS  
  For Daily Alerts

  ಶಾಕಿಂಗ್: ಮಲೈಕಾ ಅರೋರ, ಅರ್ಜುನ್ ಕಪೂರ್ ಬ್ರೇಕಪ್‌ಗೆ ಕಾರಣವೇನು?

  |

  ಬಾಲಿವುಡ್‌ ಸಿನಿಮಾ ಮಂದಿಗೆ ಈ ಬ್ರೇಕಪ್, ಪ್ಯಾಚಪ್ ಎಲ್ಲವೂ ತೀರಾ ಸಹಜ ಎನ್ನುವಂತಾಗಿದೆ. ಇಂದು ಜೊತೆ ಜೊತೆಯಾಗಿ ಕೈ ಕೈ ಹಿಡಿದು ಅಮರ ಪ್ರೇಮಿಗಳಂತೆ ಇರುವವರು ಬೆಳಗಾಗುತ್ತಲೇ ನಾನೊಂದು ತೀರಾ.. ನೀನೊಂದು ತೀರ ಎನ್ನುತ್ತಾ ದೂರ ಆಗೇ ಬಿಡ್ತಾರೆ. ಈಗ ಈ ಸಾಲಿಗೆ ಬಾಲಿವುಡ್‌ನ ಹೆಸರಾಂತ ಜೋಡಿ ಒಂದು ಸೇರಿಕೊಂಡಿದೆ. ಅದು ಮತ್ಯಾರೂ ಅಲ್ಲಾ ಬಾಲಿವುಡ್‌ನ ಹೆಸರಾಂತ ಸೋ ಕಾಲ್ಡ್ ಪ್ರೇಮಿಗಳು 'ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್'.

  ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್ ಲವ್ವಿ-ಡವ್ವಿ ಸಿಕ್ಕಾಪಟ್ಟೆ ಫೇಮಸ್. ಇವರ ಪ್ರೇಮ್ ಕಹಾನಿ ಪುಟ್ಟ ಮಕ್ಕಳಿಗೂ ಗೊತ್ತು. ಇವರ ಲವ್‌ ಸ್ಟೋರಿಯೇ ಒಂದು ರೀತಿ ವಿಭಿನ್ನ. ಅರ್ಜುನ್‌ ಕಪೂರ್ ವಯಸ್ಸಿನಲ್ಲಿ ಮಲೈಕಾಗಿಂತಲೂ ತುಂಬಾ ಚಿಕ್ಕವರು. ಹಾಗಾಗಿ ಇದೇ ವಿಚಾರಕ್ಕೆ ಇವರು ಟ್ರೋಲ್ ಆಗಿದ್ದು, ಸುದ್ದಿ ಆಗಿದ್ದು ಹೆಚ್ಚು. ಆದರೆ ಎಲ್ಲದಕ್ಕಿಂತಲೂ ತಮ್ಮ ನಡುವಿನ ಪ್ರೇಮವೇ ಶ್ರೇಷ್ಠ ಎನ್ನುವಂತೆ ಈ ಜೋಡಿ ಬಿಂಬಿಸಿತ್ತು.

  ಇವರು ಬಾಲಿವುಡ್‌ನ ಅಮರ ಪ್ರೇಮಿಗಳು ಎನ್ನುವ ಮಟ್ಟಿಗೆ ಇಬ್ಬರೂ ಪ್ರೀತಿಯ ಅಮಲಿನಲ್ಲಿ ಮಿಂದೆದ್ದಿದ್ದಾರೆ. ಆದರೆ ಇಂಥಹ ಪ್ರೇಮದ ಬಗ್ಗೆ ಈಗ ಅದ್ಯಾಕೋ ಸೀದ ವಾಸನೆ ಬರುತ್ತಿದೆ. ಅಂದರೆ ಅರ್ಜುನ್, ಮಲೈಕಾ ದೂರಾಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ನಲ್ಲಿ ಜೋರಾಗಿ ಹಬ್ಬಿದೆ.

  ಅತ್ಯಂತ ಬೇಸರದಲ್ಲಿ ಮಲೈಕಾ ಅರೋರ: 6 ದಿನದಿಂದ ಮನೆಯಲ್ಲೇ ಲಾಕ್!

  ಅತ್ಯಂತ ಬೇಸರದಲ್ಲಿ ಮಲೈಕಾ ಅರೋರ: 6 ದಿನದಿಂದ ಮನೆಯಲ್ಲೇ ಲಾಕ್!

  ನಟಿ ಮಲೈಕಾ ಅರೋರ ಸದ್ಯ ತಮ್ಮ ಮನೆಯಲ್ಲೇ ಲಾಕ್ ಆಗಿದ್ದಾರಂತೆ. ಯಾರನ್ನು ಮಾತನಾಡಿದೆ, ಒಬ್ಬರೇ ಇರಲು ಬಯಸುತ್ತಿದ್ದಾರಂತೆ. ಸುಮಾರು ಆರು ದಿನಗಳಿಂದ ಮಲೈಕಾ ಮನೆ ಬಿಟ್ಟು ಹೊರಗೇ ಬಂದಿಲ್ಲ. ಅಷ್ಟೇ ಅಲ್ಲಾ ಆಕೆ ಸದ್ಯ ಅತ್ಯಂತ ಬೇಸರದಲ್ಲಿ ಇದ್ದಾಳಂತೆ. ಹಾಗಾಗಿ ಯಾರ ಜೊತೆಗೂ ಮಾತನಾಡಲು ಬಯಸುತ್ತಿಲ್ಲವಂತೆ. ಇನ್ನು ಮಾತಿಗೆ ಮುನ್ನ ಅರ್ಜುನ್‌ ಕಪೂರ್ ಜೊತೆಗೆ ಕಾಣಿಸಿಕೊಳ್ಳುವ ಈಕೆ ಆತನಿಂದ ದೂರ ಉಳಿದು ಬಿಟ್ಟಿದ್ದಾಳಂತೆ. ಇವರ ಬಗ್ಗೆ ಬ್ರೇಕಪ್‌ ಗಾಸಿಪ್‌ ಹಬ್ಬಲು ಇದು ಒಂದು ಕಾರಣ.

  ಮಲೈಕಾ ಮನೆಗೆ ಬಾರದೆ ಹೋದ ಪ್ರೇಮಿ ಅರ್ಜುನ್ ಕಪೂರ್!

  ಮಲೈಕಾ ಮನೆಗೆ ಬಾರದೆ ಹೋದ ಪ್ರೇಮಿ ಅರ್ಜುನ್ ಕಪೂರ್!

  ಮಲೈಕಾಳನ್ನು ಭೇಟಿ ಮಾಡಲು ಅರ್ಜುನ್‌ ಕಪೂರ್‌ ಕೂಡ ಆಕೆಯ ಮನೆ ಹೋಗಿಲ್ಲವಂತೆ. ಆದರೆ ಇದು ಮುಖ್ಯಅಲ್ಲ. ಅರ್ಜುನ್‌ ಕಪೂರ್‌ ಮಲೈಕಾ ಮನೆ ಬಳಿಗೆ ಹೋದರು ಆಕೆಯ ಮನೆಗೆ ಹೋಗಿಲ್ಲ ಎನ್ನುವುದು ವಿಚಾರ. ಅರ್ಜುನ್ ಕಪೂರ್ ಮಲೈಕಾ ಮನೆ ಬಳಿ ಇರುವ ತನ್ನ ಸಹೋದರಿ ರಿಯಾ ಕಪೂರ್ ಮನೆಗೆ ಭೇಟಿ ನೀಡಿದ್ದಾರೆ. ಸಹೋದರಿ ಮನೆಗೆ ಊಟಕ್ಕಾಗಿ ಅರ್ಜುನ್ ಕಪೂರ್ ಹೋಗಿದ್ದಾರೆ. ಆದರೆ ಅಲ್ಲೇ ಪಕ್ಕದಲ್ಲಿ ಇರುವ ಮಲೈಕಾ ಮನೆಗೆ ಭೇಟಿ ನೀಡಿಲ್ಲ. ಇತ್ತ ಅರ್ಜುನ್ ಕುಟುಂಬದೊಂದಿಗೆ ಚೆನ್ನಾಗಿ ಇರುವ ಮಲೈಕಾ ಔತಣ ಕೂಟದಲ್ಲಿ ಭಾಗಿ ಆಗಿಲ್ಲ. ಇವರ ಈ ನಡೆ ಇಬ್ಬರೂ ಬೇರೆ ಆಗಿದ್ದಾರೆ ಎನ್ನುವ ಸುದ್ದಿಯನ್ನು ಹುಟ್ಟು ಹಾಕಿದೆ.

  ವಯಸ್ಸಿನ ಅಂತರದ ಬಗ್ಗೆ ಮಾತನಾಡಿದ್ದ ಅರ್ಜುನ್ ಕಪೂರ್!

  ವಯಸ್ಸಿನ ಅಂತರದ ಬಗ್ಗೆ ಮಾತನಾಡಿದ್ದ ಅರ್ಜುನ್ ಕಪೂರ್!

  ಅರ್ಜುನ್‌ ಕಪೂರ್‌ ಮತ್ತು ಮಲೈಕಾ ಇಬ್ಬರು ಒಟ್ಟಾಗಿ ಹೊಸ ವರ್ಷವನ್ನು ಆಚರಿಸಿದ್ದರು. ತಮ್ಮ ರೊಮ್ಯಾಂಟಿಕ್‌ ಡೇಟಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದರು. ಬಳಿಕ ಅರ್ಜುನ್ ಕಪೂರ್‌ಗೆ ಮಾಧ್ಯಮದಲ್ಲಿ ಪ್ರಶ್ನೆ ಒಂದು ಎದುರಾಗಿತ್ತು. ಮಲೈಕಾ ಮತ್ತು ಅರ್ಜುನ್ ವಯಸ್ಸಿನ ಅಂತರದ ಬಗ್ಗೆ ಟ್ರೋಲ್ ಮಾಡುವವರಿಗೆ ಏನು ಹೇಳುತ್ತೀರಿ ಎಂದು ಕೇಳಲಾಗಿತ್ತು. ಆಗ ಈ "ಈ ಟ್ರೋಲ್ ಎಲ್ಲಾ ಸುಳ್ಳು, ಅವರೇ ನಮ್ಮ ಜೊತೆಗೆ ಸೆಲ್ಫಿ ಬೇಕು ಎಂದು ಬರುತ್ತಾರೆ". ಎಂದಿದ್ದರು ಅರ್ಜುನ್ ಕಪೂರ್.

  ಬ್ರೇಕಪ್ ಬಗ್ಗೆ ಅರ್ಜುನ್ ಮಲೈಕಾ ಅವರೇ ಮಾತಾಡಬೇಕು!

  ಬ್ರೇಕಪ್ ಬಗ್ಗೆ ಅರ್ಜುನ್ ಮಲೈಕಾ ಅವರೇ ಮಾತಾಡಬೇಕು!

  ಸದ್ಯ ಅರ್ಜುನ್ ಮತ್ತು ಮಲೈಕಾ ದೂರಾಗಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹಬ್ಬಿದೆ. ಆದರೆ ಇದು ನಿಜವೋ ಅಥವಾ ಬರೀ ಗಾಳಿ ಸುದ್ದಿಯೋ ಎನ್ನುವ ಬಗ್ಗೆ ಅವರೇ ಉತ್ತರಿಸಬೇಕು. ಆದರೆ ಅವರ ಅಭಿಮಾನಿಗಳು ಮಾತ್ರ ಇದು ಸುಳ್ಳಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಮಲೈಕಾ ಅರ್ಜುನ್‌ ಕಪೂರ್‌ಗಾಗಿ ಮೊದಲ ಪತಿ ಅರ್ಬಾಜ್ ಖಾನ್‌ರಿಂದ 2017ರಲ್ಲಿ ದೂರಾಗಿದ್ದಾರೆ. ನಂತರ ಅರ್ಜುನ್‌ ಕಪೂರ್‌ ಜೊತೆಗಿನ ಸಬಂಧವನ್ನು ಅಧಿಕೃತ ಮಾಡಿದ್ದರು. ಇಬ್ಬರ ನಡುವೆ 2016 ರಿಂದ ಪ್ರೀತಿ ಇತ್ತು.

  English summary
  Shocking: Did Malaika Arora, Arjun Kapoor End Their Relationship: Know What Happen,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X