For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಸೆಟ್ನಲ್ಲಿ 'ತಮಾಷೆ ಹೋಗಿ ಅಮಾಸೆಯಾಯ್ತು'

  By ಜೇಮ್ಸ್ ಮಾರ್ಟಿನ್
  |

  ಚಿತ್ರದ ಪ್ರಚಾರಕ್ಕಾಗಿ ಬಾಲಿವುಡ್ ಮಂದಿ ಏನೇನೆಲ್ಲ ಸರ್ಕಸ್ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರ ಜತೆಗೆ ಚಿತ್ರೀಕರಣ ಸಂದರ್ಭದಲ್ಲಿ ನಡೆದ ಅವಘಡಗಳು, ತುಂಟಾಟಗಳು ಕೆಲವೊಮ್ಮೆ ಮಾರಣಾಂತಿಕವಾಗಿ ಪರಿಣಮಿಸಿರುವುದನ್ನು ಕಾಣಬಹುದು.

  ಇಂಥದ್ದೇ ಒಂದು ಇಕ್ಕಟ್ಟಿನಲ್ಲಿ ನಟ ಶಕ್ತಿ ಕಪೂರ್ ಮಗಳು ಶ್ರದ್ಧಾ ಕಪೂರ್ ಸಿಲುಕಿದ್ದಾಳೆ. ಏಕ್ ವಿಲನ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಮಾಡಿದ್ದ ತುಂಟಾಟ ಈಗ ಸ್ಟಂಟ್ ಮ್ಯಾನ್ ಪ್ರಾಣಕ್ಕೆ ಸಂಕಟವಾಗಿದೆ. ಚಿತ್ರಗಳನ್ನು ನೋಡಿದರೆ ನಿಜಕ್ಕೂ ಶ್ರದ್ಧಾಳಂತೆ ಶಾಕ್ ಗೆ ಒಳಗಾಗಬೇಕಾಗುತ್ತದೆ. ಆದರೆ, ಇದೆಲ್ಲವೂ ಎಂಟಿವಿ ಇಂಡಿಯಾ ಮಾಡಿದ ಬಕ್ರಾ ಕಾರ್ಯಕ್ರಮದ ದೃಶ್ಯ ಎಂಬುದು ತಿಳಿಯಲು ಚಿತ್ರತಂಡಕ್ಕೆ ಸುಮಾರು ಹೊತ್ತು ಹಿಡಿಯಿತಂತೆ.

  ಸೆಲೆಬ್ರಿಟಿಗಳನ್ನು ಬಕ್ರಾ ಮಾಡುವಲ್ಲಿ ಎತ್ತಿಕ ಕೈ ಎನಿಸಿರುವ ಎಂಟಿವಿ ಇಂಡಿಯಾ ಚಾನೆಲ್ ಎಕ್ ವಿಲನ್ ಸೆಟ್ ನಲ್ಲಿ ಶ್ರದ್ಧಾ ಕಪೂರ್ ಜತೆ ಆಡಿದ ತುಂಟಾಟ ಬಗ್ಗೆ ಪರ ವಿರೋಧ ಚರ್ಚೆ ಸಾಮಾಜಿಕ ಜಾಲ ತಾಣಗಳಲ್ಲಿ ಶುರುವಾಗಿದೆ. ಈ ನಡುವೆ ತುಂಟಾಟದಲ್ಲಿ ಸುಳ್ಳು ಸುಳ್ಳೇ ಗಾಯಗೊಂಡ ಸ್ಟಂಟ್ ಮ್ಯಾನ್ ವಿಡಿಯೋ ತುಣುಕು ಯೂಟ್ಯೂಬ್ ನಲ್ಲಿ ಸದ್ದು ಮಾಡಿದೆ.

  ಅಸಲಿಗೆ ವಿಡಿಯೋದಲ್ಲಿ ಏನಿದೆ?ಏನಿದು ಸ್ಟಂಟ್?

  ಅಸಲಿಗೆ ವಿಡಿಯೋದಲ್ಲಿ ಏನಿದೆ?ಏನಿದು ಸ್ಟಂಟ್?

  ಶ್ರದ್ಧಾ ಕಪೂರ್ ಪಾತ್ರಧಾರಿ(ಸ್ಟಂಟ್ ಮ್ಯಾನ್)ಯೊಬ್ಬನಿಗೆ ಚಾಕು(ನಕಲಿ)ವಿನಿಂದ ಚುಚ್ಚುವ ದೃಶ್ಯ ಚಿತ್ರೀಕರಿಸಲಾಗಿದೆ. ಟೇಕ್ ಓಕೆ ಆಗಿದೆ. ಆದರೆ, ಶ್ರದ್ಧಾ ಚಾಕುವಿನಿಂದ ಚುಚ್ಚಿದ ನಂತರ ಹೊಟ್ಟೆ ಹಿಡಿದುಕೊಂಡು ಸ್ಟಂಟ್ ಮ್ಯಾನ್ ನರಳಾಡಿದ್ದಾನೆ. ಶ್ರದ್ಧಾ ಟೇಕ್ ಓಕೆಯಾಗಿದ್ದರಿಂದ ತನ್ನ ಕ್ಯಾರವಾನ್ ಕಡೆಗೆ ತೆರಳಿದ್ದಾರೆ.

  ಗಾಬರಿಗೊಂಡ ಶ್ರದ್ಧಾ ಕಪೂರ್

  ಗಾಬರಿಗೊಂಡ ಶ್ರದ್ಧಾ ಕಪೂರ್

  ಆದರೆ, ಸ್ಟಂಟ್ ಮ್ಯಾನ್ ರಕ್ತಸ್ರಾವದಿಂದ ಬಳಲುತ್ತಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬಿಂಬಿಸಲಾಗಿದೆ. ವಿಷಯ ತಿಳಿದು ಶಾಕ್ ಆದ ಶ್ರದ್ಧಾ ತನ್ನ ಸಹಾಯಕರು, ನಿರ್ದೇಶಕರ ಬಳಿ ಏನಾಯಿತು ಎಂದು ಪ್ರಶ್ನಿಸುತ್ತಾಳೆ.

  ಶ್ರದ್ಧಾ ವ್ಯಾನಿಟಿ ವ್ಯಾನ್ ತಟ್ಟುತ್ತಿರುವ ಜನ

  ಶ್ರದ್ಧಾ ವ್ಯಾನಿಟಿ ವ್ಯಾನ್ ತಟ್ಟುತ್ತಿರುವ ಜನ

  ವ್ಯಾನಿಟಿ ವ್ಯಾನ್ ಸೇರಿದ ಶ್ರದ್ಧಾ ಹೊರಗೆ ಬರುವಂತೆ ಆಗ್ರಹಿಸಿ ಜನರು ಅಗ್ರಹಿಸುವ ರೀತಿಯ ಸನ್ನಿವೇಶ ಸೃಷ್ಟಿಸಲಾಯಿತು. ಇದರಿಂದ ಶ್ರದ್ಧಾ ಇನ್ನಷ್ಟು ಗಾಬರಿಗೊಂಡಳು.

  ಆಶೀಕಿ 2 ಚಿತ್ರ ಪ್ರತಿಭೆಗಳಿಗೆ ರಾಹುಕಾಲ

  ಆಶೀಕಿ 2 ಚಿತ್ರ ಪ್ರತಿಭೆಗಳಿಗೆ ರಾಹುಕಾಲ

  ಆಶೀಕಿ 2 ಚಿತ್ರ ಪ್ರತಿಭೆಗಳಿಗೆ ಈಗ ದುರ್ದೆಸೆ ಬಂದಿದೆ ಎನ್ನಬಹುದು. ಆಶೀಕಿ 2 ಚಿತ್ರ ಗಾಯಕ, ಸಂಗೀತ ಸಂಯೋಜಕ ಅಂಕಿತ್ ತಿವಾರಿ ಅವರು ಇತ್ತೀಚಿಗೆ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು. ಅದು ರಿಯಲ್ ಕಥೆಯಾದರೆ, ಈಗ ತಮಾಷೆಗಾಗಿ ಎಂಟಿವಿ ಮಾಡಿದ ತುಂಟಾಟದಿಂದ ಶ್ರದ್ಧಾ ತೀವ್ರವಾಗಿ ಆತಂಕಗೊಂಡಿದ್ದಾಳೆ. ಅದರೆ, ಇದು ರೀಲ್ ಕಥೆ

  ಶ್ರದ್ಧಾ ಕಪೂರ್ ಗಾಬರಿಗೊಳಿಸಿದ ದೃಶ್ಯಾವಳಿ

  ನಟಿ ಶ್ರದ್ಧಾ ಕಪೂರ್ ಬಕ್ರಾ ಮಾಡಿ ಗಾಬರಿಗೊಳಿಸಿದ ವಿಡಿಯೋ ತುಣುಕು ಇಲ್ಲಿದೆ ನೋಡಿ...

  English summary
  Deadly Prank On Shraddha Kapoor Turned Into Shocking Moment. Bollywood actress, Aashiqui 2 fame Shraddha Kapoor was in for a deadly prank which left her in total shock while in the sets of Ek Villain.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X