ಕಿಚ್ಚ ಸುದೀಪ್ 'ಫ್ಯಾಂಟಮ್'ಗೆ ನಾಯಕಿಯಾದ ಕನ್ನಡದ ಖ್ಯಾತ ನಟಿ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್ ನ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಅನೂಪ್ ಭಂಡಾರಿ ಹುಟ್ಟುಹಬ್ಬದ ದಿನವೆ ಚಿತ್ರೀಕರಣ ಪ್ರಾರಂಭವಾಗಿದ್ದು, ಹೈದರಾಬಾದ್ ನಲ್ಲಿ ಮೊದಲ ಶೆಡ್ಯೂಲ್ ಪ್ರಾರಂಭವಾಗಿದೆ.

Recommended Video

ಫ್ಯಾಂಟಮ್ ನಲ್ಲಿ ಸುದೀಪ್ ಜೊತೆಯಾಗಲಿರುವ ಕನ್ನಡದ ನಟಿ ಯಾರು ಗೊತ್ತಾ..? | Kiccha sudeep | Filmibeat Kannada

ಈಗಾಗಲೆ ಫ್ಯಾಂಟಮ್ ಸಿನಿಮಾದ ಸುದೀಪ್ ಲುಕ್ ಶೇರ್ ಮಾಡಲಾಗಿದ್ದು, ಗನ್ ಹಿಡಿದು ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಫ್ಯಾಂಟಮ್ ಸಿನಿಮದಲ್ಲಿ ನಾಯಕಿಯಾರಾಗ್ತಾರೆ ಎನ್ನುವುದು ಅಭಿಮಾನಿಗಳ ಕುತೂಹಲ. ಆದ್ರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸುದೀಪ್ ಜೊತೆ ಕನ್ನಡದ ನಟಿ ಶ್ರದ್ಧ್ ಶ್ರೀನಾಥ್ ರೋಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ..

ಸುದೀಪ್ ಗೆ ಶ್ರದ್ಧಾ ನಾಯಕಿ

ಸುದೀಪ್ ಗೆ ಶ್ರದ್ಧಾ ನಾಯಕಿ

ಕನ್ನಡದ ನಟಿ ಶ್ರದ್ಧ ಶ್ರೀನಾಥ್ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಚಿತ್ರತಂಡ ಈಗಾಗಲೆ ಶ್ರದ್ಧಾ ಜೊತೆ ಮಾತುಕತೆ ನಡೆಸಿದಿದ್ದು, ಶ್ರದ್ಧಾ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ.

ಮುಂದಿನ ಹಂತದ ಚಿತ್ರೀಕರಣದಲ್ಲಿ ಶ್ರದ್ಧಾ ಭಾಗಿ?

ಮುಂದಿನ ಹಂತದ ಚಿತ್ರೀಕರಣದಲ್ಲಿ ಶ್ರದ್ಧಾ ಭಾಗಿ?

ಫ್ಯಾಂಟಮ್ ಮೂಲಕ ನಟಿ ಶ್ರದ್ಧಾ ಶ್ರೀನಾಥ್ ಮೊದಲ ಬಾರಿಗೆ ಕಿಚ್ಚ ಸುದೀಪ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಯು ಟರ್ನ್ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದ ಶ್ರದ್ಧಾ ಕೊನೆಯದಾಗಿ ಶಿವರಾಜ್ ಕುಮಾರ್ ಜೊತೆ ರುಸ್ತುಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಈಗ ಮತ್ತೊಬ್ಬ ಸ್ಟಾರ್ ನಟನಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಪರಭಾಷೆಯಲ್ಲಿ ಶ್ರದ್ಧಾ ಬ್ಯುಸಿ

ಪರಭಾಷೆಯಲ್ಲಿ ಶ್ರದ್ಧಾ ಬ್ಯುಸಿ

ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಸದ್ಯ ಪರಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಶ್ರದ್ಧಾ ತಮಿಳಿನ ಮಾರ, ತೆಲುಗಿನ ಕೃಷ್ಣ ಅಂಡ್ ಹಿಸ್ ಲೀಲಾ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಕನ್ನಡದಲ್ಲಿ ಗೋದ್ರ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಜೊತೆಗೆ ರಿಷಭ್ ಶೆಟ್ಟಿ ಅಭಿನಯದ ರುದ್ರಪ್ರಯಾಗ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಸಮಂತಾ ಅಭಿನಯಿಸುವುದು ಅನುಮಾನ

ಸಮಂತಾ ಅಭಿನಯಿಸುವುದು ಅನುಮಾನ

ಸುದೀಪ್ ಗೆ ನಾಯಕಿಯಾಗಿ ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ವೈರಲ್ ಆಗಿತ್ತು. ಸಮಂತಾ ಜೊತೆ ಈಗಾಗಲೆ ಮಾತುಕತೆ ನಡೆಸಲಾಗಿದ್ದು, ಗ್ರೀನ್ ಸಿಗ್ನಲ್ ಒಂದೆ ಭಾಕಿ ಇದೆ ಎಂದು ಹೇಳಲಾಗಿತ್ತು. ಆದರೀಗ ಸಮಂತಾ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.

ವಿಕ್ರಾಂತ್ ರೋಣಾ ಪಾತ್ರದಲ್ಲಿ ಸುದೀಪ್

ವಿಕ್ರಾಂತ್ ರೋಣಾ ಪಾತ್ರದಲ್ಲಿ ಸುದೀಪ್

ಫ್ಯಾಂಟಮ್ ಸಿನಿಮಾದಲ್ಲಿ ಸುದೂಪ್ ವಿಕ್ರಾಂತ್ ರೋಣಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸುದೀಪ್ ಟ್ವೀಟ್ ಮಾಡಿ ಪಾತ್ರದ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಜೊತೆಗೆ ಚಿತ್ರದಲ್ಲಿ ಸಂಪೂರ್ಣ ವಿಭಿನ್ನತೆ ಇರಲಿದ್ದು, ಅದ್ಭುತವಾದ ಪಾತ್ರ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾದ ಫೋಟೋವನ್ನು ಶೇರ್ ಮಾಡಿದ್ದಾರೆ.

More from Filmibeat

English summary
Kannada Actress Shraddha Srinath may playing lead opposite kiccha Sudeep in Phantom movie. This movie is directed by Anup Bhandari.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X