ತೆಲುಗು ನಟ ನಾನಿ ಹೊಸ ಚಿತ್ರಕ್ಕೆ ಕನ್ನಡ ನಟಿ ನಾಯಕಿ

Recommended Video

ತೆಲುಗು ನಟ ನಾನಿ ಹೊಸ ಚಿತ್ರಕ್ಕೆ ಕನ್ನಡ ನಟಿ ನಾಯಕಿ | FILMIBEAT KANNADA

ಕನ್ನಡಕ್ಕೆ ಪರಭಾಷೆ ನಟಿಯರು ಬರೋದು ಕಾಮನ್ ಆಗಿದೆ. ಅದೇ ರೀತಿ ನಮ್ಮ ನಾಯಕಿಯರು ಬೇರೆ ಇಂಡಸ್ಟ್ರಿಗೆ ಹೋಗೋದು ಸಾಮಾನ್ಯವಾಗಿದೆ. ಸದ್ಯಕ್ಕೆ ಕನ್ನಡ ನಟಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಲೋಕದಲ್ಲಿ ಮಿಂಚುತ್ತಿದ್ದಾರೆ. ಈ ನಟಿಯ ನಂತರ ಈಗ ಮತ್ತೊಬ್ಬ ಕನ್ನಡ ನಟಿ ತೆಲುಗು ಇಂಡಸ್ಟ್ರಿಯಲ್ಲಿ ಮಿಂಚಲು ಸಿದ್ಧವಾಗ್ತಿದ್ದಾರೆ.

ಹೌದು, ಇತ್ತೀಚಿಗಿನ ಸೂಪರ್ ಹಿಟ್ ಸಿನಿಮಾ 'ದೇವದಾಸ್' ಮಾಡಿದ್ದ ನಾನಿ ಅವರು ಮುಂದಿನ ಚಿತ್ರದಲ್ಲಿ ಕನ್ನಡದ ಹುಡುಗಿ ನಾಯಕಿಯಾಗಲಿದ್ದಾರೆ ಎಂಬ ಮಾತು ಟಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ.

'ಮಳ್ಳಿರಾವಾ' ಚಿತ್ರ ನಿರ್ದೇಶನ ಮಾಡಿದ್ದ ಗೌತಮ್ ತಿನ್ನನೋರಿ ಆಕ್ಷನ್ ಕಟ್ ಹೇಳಲಿರುವ 'ಜೆರ್ಸಿ' ಚಿತ್ರದಲ್ಲಿ ನಾನಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗೆ ನಾಯಕಿಯಾಗಿ ಕನ್ನಡದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

Shraddha Srinath to romance with Nani

ಈಗಾಗಲೇ ಕನ್ನಡ, ತಮಿಳು ಹಾಗೂ ಹಿಂದಿಯಲ್ಲಿ ಮಿಂಚುತ್ತಿರುವ ಶ್ರದ್ಧಾ ಈಗ ತೆಲುಗು ಚಿತ್ರರಂಗದ ಬಾಗಿಲು ತೆರೆಯುತ್ತಿದ್ದಾರೆ. ಸದ್ಯ, ಶಿವಣ್ಣ ಜೊತೆ 'ರುಸ್ತುಂ' ಸಿನಿಮಾ ಮಾಡ್ತಿದ್ದಾರೆ. ಅದರ ಜೊತೆ ಹಿಂದಿಯ 'ಮಿಲನ್ ಟಾಕೀಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ನಾನಿ ಕ್ರಿಕೆಟರ್ ಪಾತ್ರವನ್ನ ನಿಭಾಯಿಸುತ್ತಿದ್ದು, ಈಗಾಗಲೇ ಪ್ರಾಕ್ಟೀಸ್ ಕೂಡ ಆರಂಭಿಸಿದ್ದಾರಂತೆ. ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಆದ್ರೆ ನಾಯಕಿಯ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

More from Filmibeat

English summary
Kannada actress Shraddha Srinath to romance with Nani with next movie. Jersey movie will going to Direct by Gautham Tinnanuri.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X