ನಟಿ ಶ್ರೀಯಾ ಸರಣ್ ಮದುವೆ ಆಗೋಗಿದೆ.!
Recommended Video

ಬಹುಭಾಷಾ ನಟಿ ಶ್ರೀಯಾ ಸರಣ್ ಮತ್ತು ಗೆಳೆಯ ಆಂಡ್ರೇ ಕೊಸ್ಚೆವೆವ್ (Andrei Koscheev) ಅವರ ಮದುವೆ ಮಾರ್ಚ್ 17. 18, ಹಾಗೂ 19 ರಂದು ಉದಯಪುರದಲ್ಲಿ ನಡೆಯಲಿದೆ ಎನ್ನಲಾಗಿತ್ತು. ಆದ್ರೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಶ್ರೀಯಾ ಸರಣ್ ಅವರ ಮದುವೆ ಮುಗಿದು ಹೋಗಿದೆ.
ಹೌದು, ಮಾರ್ಚ್ 12ರಂದು ಶ್ರೀಯಾ ಸರಣ್ ಅವರ ಮದುವೆ ನೆರವೇರಿದೆಯಂತೆ. ಮುಂಬೈನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಹಿಂದೂ ಸಂಪ್ರದಾಯವಾಗಿ ವಿವಾಹ ಜರುಗಿದೆ ಎಂದು ವರದಿಯಾಗಿದೆ.
ಶ್ರೀಯಾ ಅವರ ಮದುವೆ ಕಾರ್ಯಕ್ರಮ ಖಾಸಗಿಯಾಗಿ ನಡೆದಿದ್ದು, ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ಇನ್ನು ಚಿತ್ರರಂಗದಿಂದ ಯಾರಿಗೂ ಆಹ್ವಾನ ನೀಡಿರಲಿಲ್ಲ. ಆದ್ರೆ, ನಟ ಮನೋಜ್ ಬಾಜಪೇಯ್ ಮತ್ತು ಪತ್ನಿ ಶಬಾನ ದಂಪತಿ ನೆರೆಯಲ್ಲಿ ವಾಸವಾಗಿರುವ ಕಾರಣ ಇವರು ಮಾತ್ರ ಶ್ರೀಯಾ ಮದುವೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಇದಕ್ಕೂ ಮುಂಚೆ ಉದಯಪುರದಲ್ಲಿ ಇವರ ಮದುವೆ ನಡೆಯಲಿದೆ ಎಂಬ ಸುದ್ದಿಯಾಗಿತ್ತು. ಆದ್ರೆ, ಇದು ವದಂತಿಯಾಗಿಯೇ ಉಳಿದಿದೆ.
ಶ್ರಿಯಾ ಸರಣ್ ಮತ್ತು ಆಂಡ್ರೇ ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದರು. ಆದ್ರೆ, ಇಬ್ಬರು ಒಟ್ಟಿಗೆ ಸುತ್ತಾಡಿರುವ ಯಾವುದೇ ಫೋಟೋಗಳು ಕೂಡ ಬಹಿರಂಗಪಡಿಸಿರಲಿಲ್ಲ. ಇದೀಗ ಕುಟುಂಬದವರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

2001ರಲ್ಲಿ ಸಿನಿಮಾಲೋಕಕ್ಕೆ ಕಾಲಿಟ್ಟಿದ ಶ್ರೀಯಾ ತೆಲುಗಿನ 'ಇಷ್ಟಂ' ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಬಹುಭಾಷೆಯಲ್ಲೂ ಗುರುತಿಸಿಕೊಂಡರು. ಬಾಲಕೃಷ್ಣ ಅಭಿನಯಿಸಿದ್ದ 'ಪೈಸಾ ವಸೂಲ್' ಚಿತ್ರ ಸದ್ಯ ಶ್ರೀಯಾ ಕಾಣಿಸಿಕೊಂಡಿರುವ ಕೊನೆಯ ಚಿತ್ರವಾಗಿದೆ. 'ಗಾಯಿತ್ರಿ' ಸಿನಿಮಾ ತೆರೆಕಾಣಬೇಕಿದೆ. ಇದಾದ ಬಳಿಕ ಮತ್ತಷ್ಟು ಹೊಸ ಸಿನಿಮಾಗಳಲ್ಲಿ ಶ್ರೀಯಾ ಅಭಿನಯಿಸುತ್ತಿದ್ದಾರೆ.


Click it and Unblock the Notifications











