For Quick Alerts
  ALLOW NOTIFICATIONS  
  For Daily Alerts

  ನಟಿ ಶ್ರೀಯಾ ಸರಣ್ ಮದುವೆ ಆಗೋಗಿದೆ.!

  By Bharath Kumar
  |
  ನಟಿ ಶ್ರೀಯಾ ಸರಣ್ ಮದುವೆ ಆಗೋಯ್ತಾ ? | Filmibeat Kannada

  ಬಹುಭಾಷಾ ನಟಿ ಶ್ರೀಯಾ ಸರಣ್ ಮತ್ತು ಗೆಳೆಯ ಆಂಡ್ರೇ ಕೊಸ್ಚೆವೆವ್ (Andrei Koscheev) ಅವರ ಮದುವೆ ಮಾರ್ಚ್ 17. 18, ಹಾಗೂ 19 ರಂದು ಉದಯಪುರದಲ್ಲಿ ನಡೆಯಲಿದೆ ಎನ್ನಲಾಗಿತ್ತು. ಆದ್ರೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಶ್ರೀಯಾ ಸರಣ್ ಅವರ ಮದುವೆ ಮುಗಿದು ಹೋಗಿದೆ.

  ಹೌದು, ಮಾರ್ಚ್ 12ರಂದು ಶ್ರೀಯಾ ಸರಣ್ ಅವರ ಮದುವೆ ನೆರವೇರಿದೆಯಂತೆ. ಮುಂಬೈನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಹಿಂದೂ ಸಂಪ್ರದಾಯವಾಗಿ ವಿವಾಹ ಜರುಗಿದೆ ಎಂದು ವರದಿಯಾಗಿದೆ.

  ಯಾರೀ ಗಾಸಿಪ್ ಹಬ್ಬಿಸಿದ್ದು ಶ್ರಿಯಾ ಮದುವೆ ಆಗ್ತಾರೆ ಅಂತ.?!ಯಾರೀ ಗಾಸಿಪ್ ಹಬ್ಬಿಸಿದ್ದು ಶ್ರಿಯಾ ಮದುವೆ ಆಗ್ತಾರೆ ಅಂತ.?!

  ಶ್ರೀಯಾ ಅವರ ಮದುವೆ ಕಾರ್ಯಕ್ರಮ ಖಾಸಗಿಯಾಗಿ ನಡೆದಿದ್ದು, ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ಇನ್ನು ಚಿತ್ರರಂಗದಿಂದ ಯಾರಿಗೂ ಆಹ್ವಾನ ನೀಡಿರಲಿಲ್ಲ. ಆದ್ರೆ, ನಟ ಮನೋಜ್ ಬಾಜಪೇಯ್ ಮತ್ತು ಪತ್ನಿ ಶಬಾನ ದಂಪತಿ ನೆರೆಯಲ್ಲಿ ವಾಸವಾಗಿರುವ ಕಾರಣ ಇವರು ಮಾತ್ರ ಶ್ರೀಯಾ ಮದುವೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

  ಇದಕ್ಕೂ ಮುಂಚೆ ಉದಯಪುರದಲ್ಲಿ ಇವರ ಮದುವೆ ನಡೆಯಲಿದೆ ಎಂಬ ಸುದ್ದಿಯಾಗಿತ್ತು. ಆದ್ರೆ, ಇದು ವದಂತಿಯಾಗಿಯೇ ಉಳಿದಿದೆ.

  ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ 'ಚಂದ್ರ'ಮುಖಿ ಶ್ರಿಯಾ ಸರಣ್ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ 'ಚಂದ್ರ'ಮುಖಿ ಶ್ರಿಯಾ ಸರಣ್

  ಶ್ರಿಯಾ ಸರಣ್ ಮತ್ತು ಆಂಡ್ರೇ ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದರು. ಆದ್ರೆ, ಇಬ್ಬರು ಒಟ್ಟಿಗೆ ಸುತ್ತಾಡಿರುವ ಯಾವುದೇ ಫೋಟೋಗಳು ಕೂಡ ಬಹಿರಂಗಪಡಿಸಿರಲಿಲ್ಲ. ಇದೀಗ ಕುಟುಂಬದವರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

  2001ರಲ್ಲಿ ಸಿನಿಮಾಲೋಕಕ್ಕೆ ಕಾಲಿಟ್ಟಿದ ಶ್ರೀಯಾ ತೆಲುಗಿನ 'ಇಷ್ಟಂ' ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಬಹುಭಾಷೆಯಲ್ಲೂ ಗುರುತಿಸಿಕೊಂಡರು. ಬಾಲಕೃಷ್ಣ ಅಭಿನಯಿಸಿದ್ದ 'ಪೈಸಾ ವಸೂಲ್' ಚಿತ್ರ ಸದ್ಯ ಶ್ರೀಯಾ ಕಾಣಿಸಿಕೊಂಡಿರುವ ಕೊನೆಯ ಚಿತ್ರವಾಗಿದೆ. 'ಗಾಯಿತ್ರಿ' ಸಿನಿಮಾ ತೆರೆಕಾಣಬೇಕಿದೆ. ಇದಾದ ಬಳಿಕ ಮತ್ತಷ್ಟು ಹೊಸ ಸಿನಿಮಾಗಳಲ್ಲಿ ಶ್ರೀಯಾ ಅಭಿನಯಿಸುತ್ತಿದ್ದಾರೆ.

  English summary
  Actress Shriya Saran reportedly married her Russian boyfriend Andrei Koscheev in a private ceremony at her Mumbai home on March 12. Earlier, there were reports that Shriya Saran and Andrei Koscheev were planning to get married in Udaipur but the actress had refuted the news.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X