ಓಹೋ... 'ಚಂದ್ರ' ಚಕೋರಿ ಶ್ರಿಯಾಗೆ ಮದುವೆ ಅಂತೆ! ಹುಡುಗ ಯಾರಂತೆ?

By Harshitha

Recommended Video

ಶ್ರೇಯಾ ಶರಣ್ ತನ್ನ ರಶಿಯನ್ ಬಾಯ್ ಫ್ರೆಂಡ್ ಜೊತೆ ಮದುವೆಯಾಗಲಿದ್ದಾರೆ? | Filmibeat Kannada

ಬಣ್ಣದ ಲೋಕದಲ್ಲಿ ಮದುವೆಯ ಪರ್ವ ಶುರುವಾಗಿದೆ. ಬಹುಭಾಷಾ ನಟಿ ನಮಿತಾ, 'ಜಾಕಿ' ಭಾವನಾ, ಅನುಷ್ಕಾ ಶರ್ಮಾ ಸೇರಿದಂತೆ ಹಲವಾರು ತಾರೆಯರು ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಇದೇ ಹಾದಿಯಲ್ಲಿ ಸಾಗಲು ಚಂದನವನದ 'ಚಂದ್ರ' ಚಕೋರಿ ಶ್ರಿಯಾ ಸರಣ್ ಮನಸ್ಸು ಮಾಡಿದ್ದಾರಂತೆ.

ಹೌದು, ಕೆಲ ವರದಿಗಳನ್ನ ನಂಬುವುದೇ ಆದರೆ, ಇನ್ನು ಕೆಲವೇ ದಿನಗಳಲ್ಲಿ ಶ್ರಿಯಾ ಶರಣ್ ಹೊಸ ಜೀವನಕ್ಕೆ ನಾಂದಿ ಹಾಡಲಿದ್ದಾರೆ. ತಮ್ಮ ಬಾಯ್ ಫ್ರೆಂಡ್ ಜೊತೆ ಸದ್ಯದಲ್ಲೇ ಶ್ರಿಯಾ ಹಸೆಮಣೆ ಏರಲಿದ್ದಾರೆ.

'ಸಂತೋಷಂ', 'ನುವ್ವೆ ನುವ್ವೆ', 'ಟ್ಯಾಗೋರ್', 'ಮನಂ' ಸೇರಿದಂತೆ ಹಲವಾರು ಸೂಪರ್ ಹಿಟ್ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದ ಶ್ರಿಯಾ, ಕಾಲಿವುಡ್ ಹಾಗೂ ಬಾಲಿವುಡ್ ನಲ್ಲಿಯೂ ಅಷ್ಟೇ ಜನಪ್ರಿಯ ತಾರೆ. ಒಂದುವರೆ ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶ್ರಿಯಾ ಸದ್ಯದಲ್ಲೇ ದಾಂಪತ್ಯ ಗೀತೆ ಹಾಡಲಿದ್ದಾರಂತೆ. ಮುಂದೆ ಓದಿರಿ....

ಶ್ರಿಯಾಗೆ ಮದುವೆ ಅಂತೆ.!

ಶ್ರಿಯಾಗೆ ಮದುವೆ ಅಂತೆ.!

ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಹಾಗೂ ಬಾಲಿವುಡ್ ನ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿರುವ 35 ವರ್ಷದ ಶ್ರಿಯಾ ವಿವಾಹ ಮುಂದಿನ ತಿಂಗಳು ನಡೆಯಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಹುಡುಗ ಯಾರಂತೆ.?

ಹುಡುಗ ಯಾರಂತೆ.?

ಶ್ರಿಯಾ ಮದುವೆ ಆಗಲಿರುವ ಹುಡುಗ ರಷ್ಯಾ ಮೂಲದವರಂತೆ. ತಮ್ಮ ರಷಿಯನ್ ಬಾಯ್ ಫ್ರೆಂಡ್ ಜೊತೆಗೆ ವಿವಾಹವಾಗಲು ಸಕಲ ತಯಾರಿಯಲ್ಲಿ ತೊಡಗಿದ್ದಾರಂತೆ ಶ್ರಿಯಾ ಸರಣ್.

ಎಲ್ಲಿ ಮದುವೆ ಆಗ್ತಾರಂತೆ.?

ಎಲ್ಲಿ ಮದುವೆ ಆಗ್ತಾರಂತೆ.?

ಮಾರ್ಚ್ ತಿಂಗಳಿನಲ್ಲಿ ರಾಜಸ್ಥಾನದಲ್ಲಿ ಶ್ರಿಯಾ ಶರಣ್ ಮದುವೆ ನಡೆಯಲಿದ್ಯಂತೆ.

ಇದು ನಿಜವೋ, ಗಾಸಿಪ್ಪೋ.?

ಇದು ನಿಜವೋ, ಗಾಸಿಪ್ಪೋ.?

''ಶ್ರಿಯಾ ಸರಣ್ ಗೆ ಮದುವೆ ಅಂತೆ'' ಎಂಬ ಸುದ್ದಿ ಎಲ್ಲೆಡೆ ಸೌಂಡ್ ಮಾಡುತ್ತಿದೆ. ಆದ್ರೆ, ಇದರ ಬಗ್ಗೆ ಶ್ರಿಯಾ ಇನ್ನೂ ತುಟಿ ಬಿಚ್ಚಿಲ್ಲ.

More from Filmibeat

English summary
According to the latest grapevine, Actress Shriya Saran to marry her Russian Boyfriend in March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X