ವಿಜಯ್ ವಿಚ್ಛೇದನಕ್ಕೆ ಶುಭಾ ಪೂಂಜಾ ಪ್ರತಿಕ್ರಿಯೆ

By Prasad

Shubha Punja's response to Vijay's divorce application
ಹದಿನಾಲ್ಕು ವರುಷ ಸಂಸಾರ ನಡೆಸಿದ ನಂತರ ತಮ್ಮ ಹೆಂಡತಿಗೆ ವಿಚ್ಛೇದನ ನೀಡಲು 'ಕರಿ ಚಿರತೆ' ವಿಜಯ್ ಅರ್ಜಿ ಹಾಕಿದ್ದಕ್ಕೆ ಅವರೊಂದಿಗೆ ಸ್ನೇಹದಿಂದಿದ್ದ, ಅವರೊಂದಿಗೆ ನಟಿಸಿದ ಅನೇಕ ನಟ, ನಟಿಯರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅವರ ಪತ್ನಿ ನಾಗರತ್ನ ಹೊರತಾಗಿ ಎಲ್ಲರೂ ದುನಿಯಾ ವಿಜಯ್ ಪರವಾಗಿ ಹೇಳಿಕೆ ನೀಡಿದ್ದಾರೆ.

ಈ ಸಮಯದಲ್ಲಿ ಸಹಜವಾಗಿ ಎಲ್ಲರ ಕಣ್ಣು, ಒಂದು ಕಾಲದ ಅವರ ಆಪ್ತ ಸ್ನೇಹಿತೆ, ಎಸ್ ನಾರಾಯಣ್ ಅವರ 'ಚಂಡ', ಸುಮನಾ ಕಿತ್ತೂರು ಅವರ 'ಸ್ಲಂ ಬಾಲ', ಎಂಎಸ್ ರಮೇಶ್ ಅವರು 'ತಾಕತ್', ತುಷಾರ ರಂಗನಾಥ್ ಅವರ 'ಕಂಠೀರವ' ಮುಂತಾದ ಸಿನೆಮಾಗಳಲ್ಲಿ ಅವರೊಂದಿಗೆ ನಟಿಸಿರುವ ಶುಭಾ ಪೂಂಜಾ ಮೇಲೆ ಹೊರಳಿದೆ. [ಶುಭಾ ಪೂಂಜಾ ಗ್ಯಾಲರಿ]

ಈ ಹಗರಣಕ್ಕೆ ಸಂಬಂಧಿಸಿದಂತೆ, 'ಮೀನಾಕ್ಷಿ' ಕನ್ನಡ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ಶುಭಾ ಪೂಂಜಾ ಅವರು ಪ್ರತಿಕ್ರಿಯೆ ನೀಡಿದ್ದು, "ಇದರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನಗೂ ಅದಕ್ಕೂ ಸಂಬಂಧವೂ ಇಲ್ಲ. ನನ್ನನ್ನು ಈ ಹಗರಣದಲ್ಲಿ ತರಲೇಬೇಡಿ. ನಾನು ಮತ್ತು ಅವರು ಸಹೋದ್ಯೋಗಿಗಳಷ್ಟೆ. ಒಟ್ಟಾಗಿ ನಟಿಸಿದ್ದೇವೆ. ನಾವಿಬ್ಬರೂ ಈಗಲೂ ಒಳ್ಳೆಯ ಸ್ನೇಹಿತರು. ಈಗಲೂ ನಾನು ಸಿಂಗಲ್ ಹುಡುಗಿ" ಎಂದಿದ್ದಾರೆ.

"ವಿಚ್ಛೇದನದ ಬಗ್ಗೆ ಕೂಡ ಅವರು ನನ್ನ ಜೊತೆ ಯಾವತ್ತೂ ಮಾತನಾಡಿಲ್ಲ. ಜೊತೆಯಾಗಿ ನಟಿಸಿದಾಗ ಕೂಡ ಇದರ ಬಗ್ಗೆ ಏನೂ ಹೇಳಿಲ್ಲ. ಇತ್ತೀಚಿನ ದಿನಗಳಲ್ಲಿ ನಾವಿಬ್ಬರು ಭೇಟಿ ಕೂಡ ಆಗಿಲ್ಲ. ಅವರಿಬ್ಬರ ವಿಚ್ಛೇದನಕ್ಕೆ ಕಾರಣವೇನೆಂದು ಕೂಡ ಗೊತ್ತಿಲ್ಲ. ಅವರು ಮತ್ತು ನಾಗರತ್ನ ನಡುವಿನ ಸಂಸಾರ ಚೆನ್ನಾಗಿರಬೇಕು" ಎಂದು ಶುಭಾ ಪೂಂಜಾ ಶುಭ ಕೋರಿದ್ದಾರೆ.

ಕೆಲ ವರ್ಷಗಳ ಹಿಂದೆಯೇ ದುನಿಯಾ ವಿಜಯ್ ಮತ್ತು ಶುಭಾ ಪೂಂಜಾ ನಡುವೆ ಏನೋ ನಡೀತಿದೆ, ಇಬ್ಬರೂ ಕದ್ದುಮುಚ್ಚಿ ಮದುವೆಯಾಗಿದ್ದಾರೆ, ಅವರಿಗಾಗಿಯೇ ಹೊಸ ಮನೆ ಹೂಡಿದ್ದಾರೆ, ಎರಡನೇ ಪತ್ನಿಯನ್ನು ಮೊದಲನೇ ಪತ್ನಿ ನಾಗರತ್ನ ಒಪ್ಪಿಕೊಂಡಿದ್ದಾರೆ, ಮುಂದೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬಂದು ವಿಜಯ್ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದರೂ ಎಂಬಿತ್ಯಾದಿ ಗಾಳಿಸುದ್ದಿಗಳು ಹಬ್ಬಿದ್ದವು.

More from Filmibeat

English summary
'Black Cobra' Duniya Vijay has taken decision to divorce wife Nagaratna in a hurry. I wish family bonds should not be shaken - Actress Shubha Poonja reacts to co-artist Vijay moving divorce papers in Bangalore family Court.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X