ಹೊಸ ಬಾಳಿಗೆ ಕಾಲಿಟ್ಟ ಸಿದ್ದಾರ್ಥ್ ಹಾಗೂ ಕಿಯಾರಾ: ಸದ್ಯಕ್ಕಿಲ್ಲವಂತೆ ಹನಿಮೂನ್!
ಬಾಲಿವುಡ್ ಕ್ಯೂಟ್ ಕಪಲ್ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅದ್ವಾನಿ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಜೈಸಲ್ಮೇರ್‌ನ ಸೂರ್ಯಘಡ್ ಪ್ಯಾಲೇಸ್ ಹೋಟೆಲ್‌ನಲ್ಲಿ ಸಂಜೆ ಜೋಡಿ ಹಸೆಮಣೆ ಏರಿದ್ದಾರೆ. ಆದರೆ ಮದುವೆ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಇಬ್ಬರು ಗಂಡ- ಹೆಂಡತಿ ಎಂದು ವಿಕಿಪೀಡಿಯದಲ್ಲೂ ಅಪ್‌ಡೇಟ್ ಆಗಿದೆ.
ಕಳೆದ 3 ದಿನಗಳಿಂದ ಐಷಾರಾಮಿ ಹೋಟೆಲ್‌ನಲ್ಲಿ ಮದುವೆಯ ಶಾಸ್ತ್ರಗಳು ನೆರವೇರಿದೆ. ಸಿಂಧಿ ಹಾಗೂ ಪಂಜಾಬಿ ಸಂಪ್ರದಾಯಗಳಂತೆ ಮದುವೆ ನಡೆದಿದೆ ಎನ್ನಲಾಗುತ್ತಿದೆ. ಮದುವೆಗೆ ಕಿಯಾಯಾ ಪಿಂಕ್ ಕಲರ್ ಲೆಹಂಗಾ ತೊಟ್ಟಿದ್ದರೆ ಸಿದ್ದಾರ್ಥ್ ಬಿಳಿ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಒಟ್ನಲ್ಲಿ ಬಾಲಿವುಡ್ ಸಿನಿರಸಿಕರ ಫೇವರಿಟ್ ಜೋಡಿ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಬಹಳ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆಯುತ್ತಿದೆ.
ಬಾಲಿವುಡ್‌ನ ಸಾಕಷ್ಟು ಸೆಲೆಬ್ರೆಟಿಗಳು ಸಿದ್ದ್‌ಕಿಯಾರಾ ಜೋಡಿ ಮದುವೆಗೆ ಸಾಕ್ಷಿಯಾಗಿ ಶುಭ ಹಾರೈಸಿದ್ದಾರೆ. ಇನ್ನು ಮದುವೆಯ ಫೋಟೊಗಳು, ವಿಡಿಯೋಗಳು ಲೀಕ್ ಆಗುತ್ತದೆ ಎನ್ನುವ ಕಾರಣಕ್ಕೆ ಮದುವೆ ಮನೆಯಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆಯಂತೆ. ದಂಪತಿ ತಾವಾಗಿಯೇ ಮದುವೆಯ ಫೋಟೊಗಳನ್ನು ಹಂಚಿಕೊಳ್ಳಲಿದ್ದಾರೆ. ಸದ್ಯ ಅಭಿಮಾನಿಗಳು ಆ ಫೋಟೊಗಳಿಗಾಗಿ ಕಾಯುವಂತಾಗಿದೆ.

ಮದುವೆ ನಂತರ ಜೋಡಿ ನೇರವಾಗಿ ಮುಂಬೈಗೆ ತಲುಪಲಿದೆ. ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಬಾಲಿವುಡ್ ಸೆಲೆಬ್ರೆಟಿಗಳಿಗಾಗಿ ಸ್ಪೆಷಲ್ ರಿಸೆಪ್ಷನ್ ಪಾರ್ಟಿ ಏರ್ಪಡಿಸಲಾಗಿದೆ. ನಂತರ ದೆಹಲಿಯಲ್ಲಿ ಮತ್ತೊಂದು ರಿಸೆಪ್ಷನ್ ಪಾರ್ಟಿ ಕೂಡ ಹಮ್ಮಿಕೊಳ್ಳಲಾಗುತ್ತಿದೆ. ಇನ್ನು ಸಿದ್ದಾರ್ಥ್ ಹಾಗೂ ಕಿಯಾರಾ ಅದ್ವಾನಿ ದಂಪತಿ ಹನಿಮೂನ್‌ಗೆ ಎಲ್ಲಿಗೆ ಹೋಗುತ್ತಾರೆ ಎನ್ನುವ ಬಗ್ಗೆಯೂ ಅಭಿಮಾನಿಗಳಲ್ಲಿ ಕುತೂಹಲ ಇದೆ. ಸಾಮಾನ್ಯವಾಗಿ ಬಾಲಿವುಡ್ ಸೆಲೆಬ್ರೆಟಿಗಳು ಹನಿಮೂನ್‌ಗಾಗಿ ವಿದೇಶದ ರಮಣೀಯ ತಾಣಗಳಿಗೆ ಹೋಗುತ್ತಾರೆ.

ಸಿದ್ದಾರ್ಥ್ ಹಾಗೂ ಕಿಯಾರಾ ಅದ್ವಾನಿ ದಂಪತಿ ಸದ್ಯಕ್ಕೆ ಹನಿಮೂನ್ ಪ್ಲ್ಯಾನ್ ಮಾಡಿಲ್ಲ ಎನ್ನಲಾಗುತ್ತಿದೆ. ಮದುವೆ ನಂತರದ ಶಾಸ್ತ್ರಗಳನ್ನು ಮುಗಿಸಿ ದಂಪತಿ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಹಾಗಾಗಿ ಸದ್ಯಕ್ಕೆ ಹನಿಮೂನ್ ಪ್ಲ್ಯಾನ್ ಇಲ್ಲ ಎನ್ನಲಾಗುತ್ತಿದೆ. ಇಬ್ಬರೂ ತಮ್ಮ ತಮ್ಮ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಡುವು ಮಾಡಿಕೊಂಡು ಮದುವೆ ಆಗುತ್ತಿದ್ದಾರೆ. ಹಾಗಾಗಿ ಸಿನಿಮಾ ಕೆಲಸಗಳನ್ನು ಮುಗಿಸಿ, ಮತ್ತೆ ಬಿಡುವು ಮಾಡಿಕೊಂಡು ಹನಿಮೂನ್ ಹೋಗುತ್ತಾರೆ ಎಂದು ಬಾಲಿವುಡ್‌ನಲ್ಲಿ ಗುಲ್ಲಾಗಿದೆ. ಮಾಲ್ಡೀವ್ಸ್‌ಗೆ ಜೋಡಿ ಹನಿಮೂನ್ ಹೋಗಬಹುದು ಎಂದು ಕೆಲವರು ಅಂದಾಜು ಮಾಡುತ್ತಿದ್ದಾರೆ.


Click it and Unblock the Notifications











