For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ-ಕೊಹ್ಲಿ ಲವ್ ಸ್ಟೋರಿಯಲ್ಲಿ ಹೊಸ ಟ್ವಿಸ್ಟ್

  By ರವಿಕಿಶೋರ್
  |

  ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ಸೆನ್ಸೇಷನಲ್ ಕ್ರಿಕೆಟರ್ ವಿರಾಟ್ ಕೊಹ್ಲಿ ಕದ್ದುಮುಚ್ಚಿ ಕಣ್ಣಾಮುಚ್ಚಾಲೆ ಆಡುತ್ತಿರುವ ಸುದ್ದಿ ಆಗಾಗ ಸದ್ದು ಮಾಡುತ್ತಿದೆ. ಈಗ ಇಬ್ಬರೂ ಕೈಕೈ ಹಿಡಿದು ಓಡಾಡುತ್ತಿರುವ ಫೋಟೋಗಳು ಲೀಕ್ ಆಗಿ ಇನ್ನಷ್ಟು ಚರ್ಚೆಗೆ ಆಸ್ಪದವಾಗಿದೆ.

  ಇವರಿಬ್ಬರ ಲವ್ ಸ್ಟೋರಿಯಲ್ಲಿ ಇನ್ನೊಂದು ಟ್ವಿಸ್ಟ್ ಪಡೆದುಕೊಂಡಿದೆ. ಯಾರೋ ಮಾಡಿದ ಎಡವಟ್ಟಿಗೆ ಇವರು ಬಲಿಯಾಗಿದ್ದಾರೆ. ಇವರ ಲವ್ ಸ್ಟೋರಿ ನಡುವೆ ನಯನತಾರಾ-ಸಿಂಬು ಅಡ್ಡಬಂದಿದ್ದಾರೆ! ಶಿವಪೂಜೆಯಲ್ಲಿ ಕರಡಿಬಂದಂಗೆ ಆ ಹಳೆ ಲವ್ ಬರ್ಡ್ಸ್ ಕಹಾನಿಯಲ್ಲಿ ಹೊಸ ಹಕ್ಕಿಗಳಿಗೇನು ಕೆಲಸ ಸ್ವಾಮಿ ಎಂದು ಯೋಚಿಸುತ್ತಿದ್ದೀರಾ?

  ಇಬ್ಬರಿಗೂ ಎತ್ತಣಿಂದೆತ್ತ ಸಂಬಂಧವಿಲ್ಲದಿದ್ದರೂ ಇಂಟರ್ ನೆಟ್ ನಲ್ಲಿ ಆದ ಒಂದು ಎಡವಟ್ಟಿನ ಇಬ್ಬರಿಗೂ ಲಿಂಕ್ ಕಲ್ಪಿಸಿ ಬಿಟ್ಟಿದೆ. ಕೆಲವರ್ಷಗಳ ಹಿಂದೆ ಸಿಂಬು ನಯನತಾರಾ ಕಿಸ್ಸಿಂಗ್ ಸೀನ್ ಇಂಟರ್ ನೆಟ್ ನ ಮಹಾಸಾಗರದಲ್ಲಿ ಲೀಕ್ ಆಗಿ ತಮಿಳು ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಕ ಸೃಷ್ಟಿಸಿದ್ದು ನೆನೆಪಿರಬಹುದು.

  ಇದೀಗ ಅದೇ ಫೋಟೋಗಳು ಮತ್ತೆ ಸದ್ದು ಮಾಡಿವೆ. ಆ ಕಿಸ್ಸಿಂಗ್ ಸೀನ್ ನಲ್ಲಿರುವುದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಎಂದು ಬಿಂಬಿಸಲಾಗುತ್ತಿದೆ. ಫೋಟೋಗಳು ಅದಲುಬದಲಾಗಿರುವುದೇ ಇದಕ್ಕೆ ಕಾರಣ.

  ಕೊಹ್ಲಿ-ಅನುಷ್ಕಾ ಕಥೆಗೆ ಸಿಂಬು ನಯನತಾರಾ ಕಿಸ್ಸಿಂಗ್ ಫೋಟೋ ಹಾಕಿಯ ಪುಣ್ಯಾತ್ಮನ್ಯಾರೋ ಎಡವಟ್ಟು ಮಾಡಿದ್ದಾನೆ. ಈ ಎಡವಟ್ಟಿನ ಕಾರಣ ಈಗ ಇಂಟರ್ ನೆಟ್ ಸರ್ಚ್ ಎಂಜಿನ್ ಗಳು ಕೊಹ್ಲಿ ಅನುಷ್ಕಾ ಎಂದು ಹುಡುಕಿದರೆ ಸಿಂಗು ನಯನತಾರಾ ಕಿಸ್ಸಿಂಗ್ ಹೆಕ್ಕಿ ಕೊಡುತ್ತಿವೆ! ಅಯ್ಯೋ ಪಾಪ. ಸರ್ಚ್ ಎಂಜಿನ್ ಗೇನು ಗೊತ್ತು.

  ನ್ಯೂಜಿಲ್ಯಾಂಡ್ ನಲ್ಲಿ ಅನುಷ್ಕಾ ಕೊಹ್ಲಿ ಓಟಾಟ

  ನ್ಯೂಜಿಲ್ಯಾಂಡ್ ನಲ್ಲಿ ಅನುಷ್ಕಾ ಕೊಹ್ಲಿ ಓಟಾಟ

  ಅನುಷ್ಕಾ ಹಾಗೂ ಕೊಹ್ಲಿ ಇತ್ತೀಚೆಗೆ ನ್ಯೂಜಿಲ್ಯಾಂಡ್ ನಲ್ಲಿ ಕೈಕೈ ಹಿಡಿದು ಓಡಾಡಿದ ದೃಶ್ಯಗಳು ಲೀಕ್ ಆಗಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

  ಇಬ್ಬರನ್ನೂ ಇನ್ನಷ್ಟು ಹತ್ತಿರ ಮಾಡಿದ ಜಾಹೀರಾತು

  ಇಬ್ಬರನ್ನೂ ಇನ್ನಷ್ಟು ಹತ್ತಿರ ಮಾಡಿದ ಜಾಹೀರಾತು

  ಇವರಿಬ್ಬರೂ ಒಂದು ವಾಣಿಜ್ಯ ಪ್ರಕಟಣೆಯಲ್ಲಿ ಅಭಿನಯಿಸಿದ್ದಾರೆ. ಅಂದಿನಿಂದಲೂ ಇವರಿಬ್ಬರ ನಡುವೆ ಪ್ರೀತಿ ಪ್ರೇಮ ಪ್ರಣಯ ಶುರುವಾಗಿದೆ ಎಂಬ ಗುಸುಗುಸು ಸುದ್ದಿ ಇದೆ.

  ಇಬ್ಬರ ನಡುವೆ ಇನ್ನಷ್ಟು ಗುಸುಗುಸು ಸುದ್ದಿ

  ಇಬ್ಬರ ನಡುವೆ ಇನ್ನಷ್ಟು ಗುಸುಗುಸು ಸುದ್ದಿ

  ಇತ್ತೀಚೆಗೆ ಇವರಿಬ್ಬರೂ ಶ್ರೀಲಂಕಾದಿಂದ ಭಾರತಕ್ಕೆ ಒಂದೇ ವಿಮಾನದಲ್ಲಿ ಜೊತೆಯಾಗಿ ಹಿತವಾಗಿ ಬಂದದ್ದಾಗಿ ಸುದ್ದಿ ಇದೆ. ಇವರಿಬ್ಬರ ನಡುವೆ ಓಡಾಡುತ್ತಿರುವ ಗುಸುಗುಸು ಸುದ್ದಿಗೆ ಇನ್ನಷ್ಟು ರೆಕ್ಕೆಪುಕ್ಕ ಬಂದಂತಾಗಿದೆ.

  ಫೋಟೋ ಕೆಳಗಿನ ಸ್ಟೋರಿ ಮಾತ್ರ ಡಿಫರೆಂಟ್

  ಫೋಟೋ ಕೆಳಗಿನ ಸ್ಟೋರಿ ಮಾತ್ರ ಡಿಫರೆಂಟ್

  ಇಲ್ಲಿನ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿ. ಸಿಂಬು, ನಯನತಾರಾ ಕಿಸ್ಸಿಂಗ್ ಸೀನ್ ಫೋಟೋ ಇದು. ತುಂಬಾ ಹಳೆಯದು. ಆದರೆ ಫೋಟೋ ಕೆಳಗಿನ ಸ್ಟೋರಿ ಮಾತ್ರ ಡಿಫರೆಂಟ್ ಆಗಿದೆ.

  ಹಳೆ ಫೋಟೋಗೆ ಹೊಸ ಕಥೆ

  ಹಳೆ ಫೋಟೋಗೆ ಹೊಸ ಕಥೆ

  ನಯನತಾರಾ, ಸಿಂಬು ಅವರರ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಈ ಹಿಂದೆ ಪ್ರೇಮಪಕ್ಷಿಗಳಂತೆ ಹಾರಾಡಿದ ಇವರಿಬ್ಬರೂ ಬಳಿಕ ಕಾರಣಾಂತರಗಳಿಂದ ದೂರವಾಗಿದ್ದು ಗೊತ್ತೇ ಇದೆ. ಸದ್ಯಕ್ಕೆ ಇಬ್ಬರೂ ಒಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದು ಹಳೆಯ ಫೋಟೋ ಆದರೂ ಇದೀಗ ಮತ್ತೆ ಸದ್ದು ಮಾಡುತ್ತಿದೆ.

  English summary
  While Bollywood diva Anushka Sharma and sensational cricketer Virat Kohli have become the talk of the B-Town over their alleged relationship, Tamil actors Simbu and Nayantara are back in the news for an embarrassing reason! Well, there are pictures of the South actors doing rounds on internet. You may wonder what pictures we are talking about. Isn't?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X