»   » ಯಾವ ಹೂವು ಯಾರ ಮುಡಿಗೋ... ಸಿಮ್ರಾನ್‌ ಪ್ರೇಮ ಯಾರಿಗೋ..

ಯಾವ ಹೂವು ಯಾರ ಮುಡಿಗೋ... ಸಿಮ್ರಾನ್‌ ಪ್ರೇಮ ಯಾರಿಗೋ..

Posted By:
Subscribe to Filmibeat Kannada

ಸಿಂಹದ ಮರಿಯನ್ನು ಪಳಗಿಸಿದ ಸಿಮ್ರಾನ್‌ ಹೀಗೇಕೆ ಮಾಡುತ್ತಿದ್ದಾಳೆ!
ಪಾಪದ ಹುಡುಗ ಮೂಗೂರು ಬಸವರಾಜ್‌ ದಿಕ್ಕು ತೋಚದೆ ಪೆಚ್ಚು ಮೋರೆಯಿಂದ ಓಡಾಡುತ್ತಿದ್ದರೆ- ಸಿಮ್ರಾನ್‌ ಹಾಗೂ ಕಮಲಹಾಸನ್‌ ಓಡಾಟ ಹೆಚ್ಚಾಗುತ್ತಿದೆ.

ಇತ್ತೀಚೆಗೆ ಅವಕಾಶಗಳು ಕಡಿಮೆಯಾಗಿದ್ದ ಸಿಮ್ರಾನ್‌ಗೀಗ ಹೊಸ ಆಫರ್‌ಗಳೇನೊ ಬರುತ್ತಿವೆ. ಹೊಸ ಆಫರ್‌ಗಳನ್ನು ಒಪ್ಪಿಕೊಳ್ಳುತ್ತಿದ್ದಾಳೆ ಕೂಡ. ಆದರೆ, ಮದುವೆಯ ಯೋಚನೆಯನ್ನು ಸಿಮ್ರಾನ್‌ ಮುಂದೂಡಿದ್ದಾಳೆ. ಬಸವರಾಜ್‌ ಪೆಚ್ಚಾಗಲಿಕ್ಕೆ ಇನ್ನೇನು ಬೇಕು. ಎಲ್ಲ ಮೂಗಿನ ನೇರಕ್ಕೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ರಾಜು- ಸಿಮ್ರಾನ್‌ ದಂಪತಿಗಳಾಗಬೇಕಿತ್ತು . ಆದರೀಗ- ಯಾವ ಹೂವು ಯಾರ ಮುಡಿಗೋ ಎಂದು ರಾಜು ಶೋಕಗೀತೆ ಆಲಾಪದಲ್ಲಿದ್ದಾರೆ.

ಆಫರ್‌ಗಳು ಹೆಚ್ಚಾಗುತ್ತಿವೆ ಎಂದು ಸಿಮ್ರಾನ್‌ ಮದುವೆ ಯೋಚನೆಯನ್ನು ಮುಂದೂಡಿದ್ದರೆ ಬಸವರಾಜ್‌ ಚಿಂತಾಕ್ರಾಂತರಾಗುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ. ಆದರೆ ಸಂದರ್ಭವೇ ಬೇರೆ. ಕಮಲಹಾಸನ್‌ ಜೊತೆ ಸಿಮ್ರಾನ್‌ ಸಹವಾಸ ಹೆಚ್ಚಾಗುತ್ತಿರುವುದೇ ರಾಜು ತಲೆನೋವಿಗೆ ಮೂಲ.

ತಮಿಳು ಚಿತ್ರೋದ್ಯಮದ ಸುದ್ದಿ ಮೂಲಗಳ ಪ್ರಕಾರ- ಪಮ್ಮಲ್‌ ಕೆ ಸಂಬಂಧಮ್‌ ಸಿನಿಮಾದ ಯಶಸ್ಸಿನೊಂದಿಗೆ ಶುರುವಾದ ಕಮಲ್‌ ಹಾಗೂ ಸಿಮ್ರಾನ್‌ ಗೆಳೆತನ ಈಗ ಹೊಸ ತಿರುವು ಪಡೆದುಕೊಂಡಿದೆ. ಸಿಮ್ರಾನ್‌ರ ಸಿನಿಮಾ ಭವಿಷ್ಯವನ್ನು ತಿದ್ದಿ ತೀಡುವುದಕ್ಕೆ ಸ್ವತಃ ಕಮಲ್‌ ಮುಂದಾಗಿದ್ದಾರೆ. ಕಮಲ್‌ರ ಹೊಸ ಸಿನಿಮಾ ಪಂಚತಂತ್ರಮ್‌ನಲ್ಲೂ ಸಿಮ್ರಾನ್‌ ನಾಯಕಿ. ಈ ಸಿನಿಮಾ ಗೆದ್ದರೆ ಸಿಮ್ರಾನ್‌ಗೆ ತಮಿಳು ಸಿನಿಮಾದ ಟಾಪ್‌ ಹೀರೋಯಿನ್‌ ಪಟ್ಟ ಗ್ಯಾರಂಟಿ. ರಜನೀಕಾಂತ್‌ರ ಹೊಸ ಚಿತ್ರ ಬಾಬಾದಲ್ಲೂ ಸಿಮ್ರಾನ್‌ಗೆ ಪ್ರಮುಖ ಪಾತ್ರ ದೊರಕುವ ಸಾಧ್ಯತೆಯಿದೆ. ಈ ಕುರಿತು ಕಮಲ್‌ ಈಗಾಗಲೇ ರಜನಿಗೆ ಶಿಫಾರಸ್ಸು ಮಾಡಿದ್ದಾರೆ.

ಕಮಲ್‌ ಹಾಗೂ ಸಿಮ್ರಾನ್‌ ಮದುವೆ ಇಷ್ಟರಲ್ಲೇ ನಡೆಯುತ್ತದೆ ಎಂದು ತಮಿಳು ಚಿತ್ರೋದ್ಯಮ ನಂಬಿಕೊಂಡಿದೆ. ಕಮಲ್‌ಗೆ ಸಾರಿಕಾ ಸಾಕಾಗಿ ಹೋಗಿದ್ದಾರೆ. ಸಿಮ್ರಾನ್‌- ರಾಜು ಗೆಳೆತನ ಹಳಸಿದೆ. ಈ ಕಾರಣದಿಂದಾಗಿ ಕಮಲ್‌- ಸಿಮ್ರಾನ್‌ ಕಾಂಬಿನೇಷನ್‌ ಜೀವ ಪಡೆದುಕೊಂಡಿದೆ.

ಸಿಮ್ರಾನ್‌ ಅವರೇನೋ ಕಮಲ್‌ ಹಾಸನ್‌ ಅವರನ್ನು ಮದುವೆಯಾಗುವ ಗಾಸಿಪ್‌ ಕುರಿತು ನಿರಾಕರಿಸಿದ್ದಾರೆ. ಇದೇ ಕಾಲಕ್ಕೆ ರಾಜು ಅವರನ್ನು ದೂರವಿಡಲು ಸಿಮ್ರಾನ್‌ ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ರಾಜು ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಕಮಲ್‌ದು ಮಾತ್ರ ಪಳಗಿದ ಬೇಟೆಗಾರನ ನಿಗೂಢ ಮೌನ.

Post your views

ಯಾವ ಕಾಂಬಿನೇಷನ್‌ ಸರಿ..
ಸಿಮ್ರಾನ್‌ ಕನ್ನಡದ ಸೊಸೆಯಾದಳೆ?
ಕಮಲ್‌ಗೆ ಸಾರಿಕಾ ಸಾಕಾಗಿ ಹೋದರಾ?
ಮೂಗೂರು ಸುಂದರಂ ಸಂಸಾರದ‘ಮನಸ್ಸೆಲ್ಲಾ ನೀನೇ’

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada