Darshan-Shivanna: 'ಘೋಸ್ಟ್ 2'ನಲ್ಲಿ ಶಿವಣ್ಣ ಜೊತೆ ದರ್ಶನ್..? ಹೀಗೆ ಹೇಳ್ತಿರೋದು ಯಾರು?

By ಫಿಲ್ಮಿಬೀಟ್ ಡೆಸ್ಕ್

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾ 'ಘೋಸ್ಟ್' ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಿದೆ. ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಕರ್ನಾಟಕದಲ್ಲಂತೂ 'ಘೋಸ್ಟ್' ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶಿವಣ್ಣ ಹೊಸ ಅವತಾರಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ.

ಫಸ್ಟ್ ಡೇ ಫಸ್ಟ್ ಶೋನಲ್ಲೇ 'ಘೋಸ್ಟ್'ಗೆ ಪಾಸಿಟಿವ್ ಟಾಕ್ ಸಿಕ್ಕಿದೆ. ಶಿವಣ್ಣನ ಮಾಸ್ ಲುಕ್, ಶ್ರೀನಿ ಡೈರೆಕ್ಷನ್‌ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಎಲ್ಲರ ಕಣ್ಣು ಮೊದಲ ದಿನದ ಕಲೆಕ್ಷನ್ ಮೇಲೆ ನಿಂತಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಜಾದು ಮಾಡಬಹುದು ಎಂದೇ ನಿರೀಕ್ಷೆ ಮಾಡಲಾಗಿದೆ.

shivarajkumar-and-darshan-ghost

'ಘೋಸ್ಟ್' ಯುವ ಸಮುದಾಯಕ್ಕೆ ತುಂಬಾನೇ ಇಷ್ಟ ಆಗಿದೆ. ಹೀಗಾಗಿ 'ಘೋಸ್ಟ್ 2' ಬಗ್ಗೆ ಈಗಾಗಲೇ ಟಾಕ್ ಶುರುವಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಂಬಲು ಅಸಾಧ್ಯವೆನಿಸಿದ ಸುದ್ದಿಯೊಂದು ಒಡಾಡುತ್ತಿದೆ. 'ಘೋಸ್ಟ್ 2'ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಅಸಲಿಗೆ ಏನಿದು ಸುದ್ದಿ? ಇದು ನಿಜವೇ? ತಿಳಿಯಲು ಮುಂದೆ ಓದಿ..

ಕರ್ನಾಟಕದಲ್ಲಿ 'ಘೋಸ್ಟ್' ಹವಾ

ಸೆಂಚುರಿ ಸ್ಟಾರ್ ಶಿವಣ್ಣನ ಖದರ್ ಬದಲಾಗಿದೆ. 61ನೇ ವಯಸ್ಸಿನಲ್ಲೂ ಮಾಸ್ ಹೀರೊಗಳಿಗೆ ಟಕ್ಕರ್ ಕೊಡುತ್ತಿದ್ದಾರೆ. ಮೊದಲ ದಿನವೇ 'ಘೋಸ್ಟ್'ಗೆ ಸಖತ್ ಕಿಕ್ ಕೊಟ್ಟಿದ್ದು ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆ ಹೆಚ್ಚಿದೆ. ಮೂರು ಶೇಡ್‌ಗಳಲ್ಲಿ ಶಿವಣ್ಣನ ಖದರ್ ನೋಡಿ ಕನ್ನಡಿಗರು ಮನಸೋತಿದ್ದಾರೆ. ಅದೆಷ್ಟೇ ದೊಡ್ಡ ಸಿನಿಮಾ ಬಂದರೂ ಕರ್ನಾಟಕದಲ್ಲಿ ಕನ್ನಡಿಗರು 'ಘೋಸ್ಟ್' ಸಿನಿಮಾಗೆ ಜೈ ಎಂದಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಆ ನಂಬಲು ಅಸಾಧ್ಯವೆನಿಸುವಂತಹ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

'ಘೋಸ್ಟ್ 2' ಬಗ್ಗೆ ಖಬರ್ ಏನು?

'ಫೋಸ್ಟ್' ಬಿಡುಗಡೆಗೂ ಮುನ್ನವೇ ಪಾರ್ಟ್ 2 ಬರೋದು ಕನ್ಫರ್ಮ್ ಅಂತ ತಂಡವೇ ಹೇಳಿಕೊಂಡಿದೆ. ಈ ಕಾರಣಕ್ಕೆ 'ಘೋಸ್ಟ್' ಸಿನಿಮಾವನ್ನು ಪ್ಯಾನ್ ಇಂಡಿಯಾ ರಿಲೀಸ್ ಮಾಡಿದೆ. ಕನ್ನಡ ಬಿಟ್ಟು ಬೇರೆ ಬೇರೆ ಭಾಷೆಗಳಲ್ಲಿ ರೆಸ್ಪಾನ್ಸ್ ಹೇಗೆ ಸಿಗುತ್ತೆ ಅನ್ನೋದನ್ನು ಗಮನದಲ್ಲಿಟ್ಟುಕೊಂಡು 'ಘೋಸ್ಟ್ 2' ಪ್ಲ್ಯಾನ್ ಮಾಡಲಿದೆ ಚಿತ್ರತಂಡ. ಈ ಮಧ್ಯೆ 'ಘೋಸ್ಟ್ 2'ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಇರುತ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಅಸಲಿಗೆ ಈ ಸುದ್ದಿ ನಿಜವೇ?

shivarajkumar-and-darshan-ghost

'ಘೋಸ್ಟ್ 2'ನಲ್ಲಿ ದರ್ಶನ್?

'ಘೋಸ್ಟ್ 2'ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದ್ದರೆ ಹೇಗೆ? ಇಂತಹದ್ದೊಂದು ಕಲ್ಪನೆಯಲ್ಲಿ ನೆಟ್ಟಿಗರಿದ್ದಾರೆ. 'ಘೋಸ್ಟ್' ರಿಲೀಸ್ ಬಳಿಕ ಪಾರ್ಟ 2ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇರುತ್ತಾರೆ. ಶಿವರಾಜ್‌ಕುಮಾರ್ ಮಗನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿಸುತ್ತಿದ್ದಾರೆ. ಅಸಲಿಗೆ ಇದು ಕೇವಲ ಕಲ್ಪನೆಯೋ ಅಥವಾ ಬೇಕಂತಲೇ ಸುದ್ದಿಯನ್ನು ಹಬ್ಬಿಸುತ್ತಿದ್ದಾರೋ ಅನ್ನೋದು ಗೊತ್ತಿಲ್ಲ.

ದರ್ಶನ್ ನಟಿಸಬಹುದೇ?

ಸ್ಯಾಂಡಲ್‌ವುಡ್‌ನಲ್ಲಿರುವ ಮೂಲಗಳ ಪ್ರಕಾರ ಸದ್ಯ ಈ ಸುದ್ದಿ ನಂಬಲು ಅಸಾಧ್ಯ. ಸದ್ಯ ದರ್ಶನ್ ಹಾಗೂ ಸಂದೇಶ್ ನಾಗರಾಜ್ ಪ್ರೊಡಕ್ಷನ್ ಹೌಸ್ ಮಧ್ಯೆ ಅಷ್ಟು ಒಳ್ಳೆಯ ಸಂಬಂಧವಿಲ್ಲ. ಆದರೆ, ಇತ್ತೀಚೆಗೆ ದರ್ಶನ್ ಹಾಗೂ ಶಿವರಾಜ್‌ಕುಮಾರ್ ಒಂದೇ ವೇದಿಕೆ ಮೇಲೆ ಆತ್ಮೀಯರಾಗಿ ಕಾಣಿಸಿಕೊಂಡಿದ್ದರಿಂದ ಇಂತಹದ್ದೊಂದು ಕಾಂಬಿನೇಷನ್ ಬರಬಹುದು ಎಂದು ನೆಟ್ಟಿಗರು ಗೆಸ್ ಮಾಡುತ್ತಿರಬಹುದು. ಒಂದು ವೇಳೆ ಅಭಿಮಾನಿಗಳೇ ಟ್ರೆಂಡ್ ಮಾಡಿದರೆ, ಇಂತಹದ್ದೊಂದು ಆಲೋಚನೆಗೆ ದರ್ಶನ್ ಹಾಗೂ ಶಿವಣ್ಣ ಅಸ್ತು ಅಂದರೆ ಚಮತ್ಕಾರ ನಡೆಯಬಹುದೇನೋ?

More from Filmibeat

English summary
Darshan will be playing in Ghost 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X